Asianet Suvarna News Asianet Suvarna News

2024ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಯಾಕೆ ಆಡ್ಬೇಕು ಗೊತ್ತಾ..?

2024ರ ಟಿ20 ವಿಶ್ವಕಪ್‌ ಅನ್ನ ಕೊಹ್ಲಿ ಆಡಬೇಕು ಎಂದು ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ಯಾತಕ್ಕಾಗಿ ಕೊಹ್ಲಿ ಆಡ್ಬೇಕು ಅನ್ನೋದನ್ನೂ ಬಂಗಾರ್ ವಿವರಿಸಿದ್ದಾರೆ.

India Need Virat Kohli In Pressure Situations At 2024 T20 World Cup Says Sanjay Bangar kvn
Author
First Published Aug 19, 2023, 2:36 PM IST

ಬೆಂಗಳೂರು(ಆ.19)ಟೀಂ ಇಂಡಿಯಾ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ಗೆ ಸಿದ್ದತೆ ಮಾಡಿಕೊಳ್ತಿದೆ. ಈ ಮೆಗಾ ಟೂರ್ನಿಗಳನ್ನ ಆಡೋಕೆ ಕೋರ್ ಟೀಮ್ ಇನ್ನೂ ರೆಡಿಯಾಗಿಲ್ಲ. ಆಗ್ಲೇ 2024ರ ಟಿ20 ವರ್ಲ್ಡ್‌ ಕಪ್ ಬಗ್ಗೆ ಹೇಳ್ತಿದ್ದಾರೆ ಅಂದುಕೊಳ್ಳಬೇಡಿ. ವಿರಾಟ್ ಕೊಹ್ಲಿ ಟಿ20 ಪಂದ್ಯಗಳನ್ನಾಡುತ್ತಿದ್ದರೆ ಈ ವಿಷ್ಯನೇ ಬರುತ್ತಿರಲಿಲ್ಲ. ಆದ್ರೆ 2022ರ ಟಿ20 ವಿಶ್ವಕಪ್ ಬಳಿಕ ಕಿಂಗ್ ಕೊಹ್ಲಿ ಟಿ20 ಮ್ಯಾಚ್‌ಗಳನ್ನಾಡಿಲ್ಲ. ಹೀಗಾಗಿ ಈಗ ಮುಂದಿನ ವರ್ಷ ನಡೆಯೋ ಟಿ20 ವರ್ಲ್ಡ್‌ ಕಪ್ ನಲ್ಲಿ ಕೊಹ್ಲಿ ಆಡ್ಬೇಕಾ? ಆಡ್ಬಾರ್ದಾ? ಅನ್ನೋ ಚರ್ಚೆ ಶುರುವಾಗಿದೆ.

ಬಂಗಾರ್​ ಹೇಳಿಕೆ ಹಿಂದೆ ಅಡಗಿದ್ಯಾ ನಗ್ನ ಸತ್ಯ..?

ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಯುವ ಪಡೆಯನ್ನ ಆಡಿಸಬೇಕು ಅಂತ ಕಳೆದ ವರ್ಷದಿಂದಲೇ ಯಂಗ್ ಪ್ಲೇಯರ್ಸ್‌ಗೆ ಚಾನ್ಸ್ ಕೊಟ್ಟು ಟಿ20 ಮ್ಯಾಚ್ ಆಡಿಸಲಾಗ್ತಿದೆ. ಕೇವಲ ಕೊಹ್ಲಿ ಮಾತ್ರವಲ್ಲ, ರೋಹಿತ್, ರಾಹುಲ್, ಶ್ರೇಯಸ್​ ಯಾರನ್ನೂ ಟಿ20 ಟೀಮ್​ಗೆ ಸೆಲೆಕ್ಟ್ ಮಾಡ್ತಿಲ್ಲ. ಹೀಗಾಗಿ ಕೊಹ್ಲಿಯೂ ಟೀಮ್​ನಲ್ಲಿಲ್ಲ. ಈಗ ಟಿ20 ವಿಶ್ವಕಪ್​ಗೆ 10 ತಿಂಗಳು ಬಾಕಿ ಇರುವಾಗ ಕೊಹ್ಲಿ ಆಡಬೇಕಾ..? ಬೇಡ್ವಾ ಅನ್ನೋ ಚರ್ಚೆ ಜೋರಾಗಿದೆ.

2024ರ ಟಿ20 ವಿಶ್ವಕಪ್‌ ಅನ್ನ ಕೊಹ್ಲಿ ಆಡಬೇಕು ಎಂದು ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ಯಾತಕ್ಕಾಗಿ ಕೊಹ್ಲಿ ಆಡ್ಬೇಕು ಅನ್ನೋದನ್ನೂ ಬಂಗಾರ್ ವಿವರಿಸಿದ್ದಾರೆ.

'ವಿರಾಟ್‌ ಕೊಹ್ಲಿ ಭಾರತ ಟಿ20 ತಂಡದಲ್ಲಿ ಆಡಬೇಕು. ಯಾಕಂದರೆ ಕಳೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿನ ಪ್ರದರ್ಶನ ಹಾಗೂ ಕೆಲ ನಿರ್ಣಾಯಕ ಸನ್ನಿವೇಶಗಳಲ್ಲಿ ಅವರು ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯ ಟೀಂ ಇಂಡಿಯಾದಿಂದ ಅವರನ್ನು ಕೈ ಬಿಡಲು ಯಾವುದೇ ಕಾರಣ ಇಲ್ಲವೆಂದು ನಾನು ಭಾವಿಸುತ್ತೇನೆ. ಪಂದ್ಯದ ದೊಡ್ಡ ಸನ್ನಿವೇಶದಲ್ಲಿ ಭಾವನೆಗಳು ತುಂಬಾ ಅಗ್ರಮಟ್ಟದಲ್ಲಿ ಇರುತ್ತವೆ. ಈ ಸನ್ನಿವೇಶದಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿದರೂ ಇದರಿಂದ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂಥಾ ಸನ್ನಿವೇಶದಲ್ಲಿ ದೊಡ್ಡ ಆಟಗಾರರ ಅಗತ್ಯವಿರುತ್ತದೆ. ಇಂಥಾ ಸನ್ನಿವೇಶದಲ್ಲಿ ಸ್ಟ್ರೈಕ್‌ ರೇಟ್‌ ಅಥವಾ ಐಪಿಎಲ್‌ ದಾಖಲೆ ಇಲ್ಲಿ ಮುಖ್ಯವಾಗುವುದಿಲ್ಲ. ದೊಡ್ಡ ಪಂದ್ಯಗಳಿಗೆ ದೊಡ್ಡ ಆಟಗಾರರ ಅಗತ್ಯವಿರುತ್ತದೆ. ಅದರಂತೆ ಕಳೆದ ವರ್ಷ ಭಾರತ-ಪಾಕಿಸ್ತಾನ  ಪಂದ್ಯದಲ್ಲಿ ಕೊಹ್ಲಿ ಈ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು' ಎಂದು ಸಂಜಯ್‌ ಬಾಂಗರ್‌ ಹೇಳಿಕೊಂಡಿದ್ದಾರೆ.

ವಿಂಡೀಸ್​ನಲ್ಲಿ ಮಕಾಡೆ ಮಲಗಿದ ಯಂಗ್ ಇಂಡಿಯಾ..!

ಎಂ ಎಸ್ ಧೋನಿಯಂತೆ ನಾನು ಯಂಗ್ ಟೀಮ್ ಕಟ್ಟಿಕೊಂಡು ಟಿ20 ವಿಶ್ವಕಪ್ ಗೆಲ್ತಿನಿ ಅಂತ ಹಾರ್ದಿಕ್ ಪಾಂಡ್ಯ ಅಂದುಕೊಂಡಿರಬಹುದು. ಆದ್ರೆ ಅದೇ ಟೀಮ್ ಕಟ್ಟಿಕೊಂಡು ವಿಂಡೀಸ್​ಗೆ ಹೋಗಿದ್ದ ಪಾಂಡ್ಯ, ಕಳೆದ ವಾರ ಟಿ20 ಸರಣಿ ಸೋತು ಬಂದಿದ್ದಾರೆ. ಅದೇ ಯಂಗ್ ಪ್ಲೇಯರ್ಸ್​​ ಟೀಮ್​​​​​​​​​ನೊಂದಿಗೆ ಟಿ20 ವಿಶ್ವಕಪ್ ಆಡಿದ್ರೆ ಟೀಂ ಇಂಡಿಯಾ ಲೀಗ್​ನಿಂದಲೇ ಕಿಕೌಟ್ ಆಗೋದು ಗ್ಯಾರಂಟಿ. ಕೊಹ್ಲಿಯಂತಹ ಅನುಭವಸ್ಥ ಆಟಗಾರರೂ ಬೇಕು. ಯಶಸ್ವಿ ಜೈಸ್ವಾಲ್ ಅವರಂತ ಯಂಗ್ ಪ್ಲೇಯರ್​ಗಳೂ ಬೇಕು. ಹಿರಿಯ ಮತ್ತು ಕಿರಿಯ ಆಟಗಾರರ ಮಿಶ್ರಣದ ತಂಡ ಟಿ20 ವಿಶ್ವಕಪ್ ಆಡಿದ್ರೆ ಆಗ ಮೇಗಾ ಟೂರ್ನಿ ಗೆಲ್ಲಲು ಸಾಧ್ಯ. ಇದನ್ನೇ ಬಂಗಾರ್ ಸಹ ಹೇಳಿರೋದು. ಒಟ್ನಲ್ಲಿ ಕಿಂಗ್ ಕೊಹ್ಲಿ ಟಿ20 ವಿಶ್ವಕಪ್ ಆಡಿದ್ರೆ ಖದರ್​. ಇಲ್ಲವಾದ್ರೆ ಭಾರತದ ಪಂದ್ಯಗಳು ಸಪ್ಪೆ, ಟಿ20 ವಿಶ್ವಕಪ್‌ ಸಪ್ಪೆಯಾಗಿರಲಿದೆ.

Follow Us:
Download App:
  • android
  • ios