ದುಬೈನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದೆ. ಟೀಮ್‌ ಇಂಡಿಯಾದ ಗೆಲುವಿಗೆ ಸುನೀಲ್ ಗವಾಸ್ಕರ್ ಕುಣಿದು ಕುಪ್ಪಳಿಸಿದ್ದು, ವಿಡಿಯೋ ವೈರಲ್ ಆಗಿದೆ.

ಟೀಮ್‌ ಇಂಡಿಯಾ ದುಬೈನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಯಾರಿಗೆ ಎಷ್ಟು ಖುಷಿಯಾಗಿದೆಯೋ ಗೊತ್ತಿಲ್ಲ, ಆದರೆ, ಟೀಮ್‌ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನಕ್ಕೆ ಟೀಕಿಸುವಲ್ಲಿ ಸದಾ ಮುಂದಿರುತ್ತಿದ್ದ ಸುನೀಲ್‌ ಗವಾಸ್ಕರ್‌ ಅವರ ಡಾನ್ಸ್‌ ಮಾತ್ರ ವೈರಲ್‌ ಆಗಿದೆ. ಭಾರತ ತಂಡ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಸುನೀಲ್‌ ಗವಾಸ್ಕರ್‌ ಅಕ್ಷರಶಃ ಮಕ್ಕಳಂತೆ ಕುಣಿದಿರುವ ವಿಡಿಯೋ ವೈರಲ್‌ ಆಗಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಥ್ರಿಲ್ಲಿಂಗ್‌ ಫೈನಲ್‌ ಪಂದ್ಯದಲ್ಲಿ ರೋಹಿತ್‌ ಶರ್ಮ ನೇತೃತ್ವದ ಭಾರತ ತಂಡ 4 ವಿಕೆಟ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿತು. ಆ ಮೂಲಕ ಮೂರನೇ ಬಾರಿಗೆ ಚಾಂಪಿಯನ್ಸ್‌ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅದರೊಂದಿಗೆ ಐಸಿಸಿ ಟೂರ್ನಿಗಳಲ್ಲಿ ಅತ್ಯಂತ ಯಶಸ್ವಿ ತಂಡ ಎನ್ನುವ ಕೀರ್ತಿಗೂ ಭಾರತ ಪಾತ್ರವಾಗಿದೆ.

ಸುನೀಲ್‌ ಗವಾಸ್ಕರ್‌ ಅವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಚಾಂಪಿಯನ್ಸ್ ಟ್ರೋಫಿ ವಿನ್ನರ್‌ಗೆ ನೀಡಲಾಗುವ ಸಾಂಪ್ರದಾಯಿಕ ಬಿಳಿ ಜಾಕೆಟ್‌ ಪ್ರದಾನವಾದ ಬಳಿಕ ಟೀಮ್‌ ಇಂಡಿಯಾ ಆಟಗಾರರು ಟ್ರೋಫಿಯನ್ನು ಪಡೆದುಕೊಳ್ಳಲು ವೇದಿಕೆ ಏರಿದಾಗ ಸುನೀಲ್‌ ಗಾವಸ್ಕರ್‌ ಅವರು ವಿಶ್ಲೇಷಣೆ ಮಾಡಉತ್ತಿದ್ದ ಜಾಗದಲ್ಲಿಯೇ ಡಾನ್ಸ್‌ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಸ್ಪೋರ್ಟ್ಸ್ ಪ್ರೆಸೆಂಟರ್‌ ಆಗಿದ್ದ ಮಯಾಂಟಿ ಲ್ಯಾಂಗರ್‌ ಕೂಡ ಅಚ್ಚರಿ ಪಟ್ಟರು. ಆದರೆ, ತಕ್ಷಣವೇ ಸರಿದು ಸುನೀಲ್‌ ಗವಾಸ್ಕರ್‌ ಅವರ ಡಾನ್ಸ್ ಕ್ಯಾಮೆರಾದಲ್ಲಿ ಸೆರೆಯಾಗಿ ಎಲ್ಲರಿಗೂ ಕಾಣುವಂತೆ ನೋಡಿಕೊಂಡರು. ದಿಗ್ಗಜ ಆಟಗಾರ ಕ್ರಿಕೆಟ್‌ ಪ್ಯಾಶನ್‌ನ ಡಾನ್ಸ್‌ ಮೂವ್‌ಗಳಿಗೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮತ್ತೊಬ್ಬ ಪ್ಯಾನಲಿಸ್ಟ್‌ ಆಗಿದ್ದ ಮಾಜಿ ಆಟಗಾರ ರಾಬಿನ್‌ ಉತ್ತಪ್ಪ ಕೂಡ ಸುನೀಲ್‌ ಗವಾಸ್ಕರ್‌ ಅವರ ಡಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಭಾವುಕ ಕ್ಷಣವನ್ನು ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡರು.

ಸ್ಟಾರ್‌ ಸ್ಪೋರ್ಟ್ಸ್‌ ಪ್ರೆಸೆಂಟರ್‌ ಆಗಿದ್ದ ಜತಿನ್‌ ಸಪ್ರು, ಇಂದು ಸನ್ನಿ ಪಾಜಿಯನ್ನು ತಡೆಯುತ್ತಿರೋರು ಯಾರು ಎಂದು ಹೇಳಿದ ಬೆನ್ನಲ್ಲಿಯೇ ತಮ್ಮ ಮನದೊಳಗಿದ್ದ ಅಷ್ಟೂ ಭಾವನೆ ಹೊರಹಾಕಿದ ಸುನೀಲ್‌ ಗವಾಸ್ಕರ್‌ ಅಕ್ಷರಶಃ ಮಕ್ಕಳಂತೆ ಡಾನ್ಸ್‌ ಮಾಡಿದರು. ಈ ವೇಳೆ ಟೀಮ್‌ ಇಂಡಿಯಾ ಮಾಜಿ ಕ್ರಿಕೆಟರ್‌ ಹರ್ಭಜನ್‌ ಸಿಂಗ್‌, ನಾವು ಇಂದು ಅವರನ್ನು ತಡೆಯಲೇಬಾರದು. ಇದೊಂದು ಅದ್ಭುತ ಕ್ಷಣ ಎಂದು ಹೇಳಿದರು. ಅವರನ್ನು ನೋಡುವುದೇ ನಮಗೆ ಫನ್‌. ಅದರೊಂದಿಗೆ ದಿಗ್ಗಜ ಹಾಗೂ ಜಗತ್ತಿನಲ್ಲಿಯೇ ಗೌರವಿಸಲ್ಪಡುವ ಕ್ರಿಕೆಟಿಗ. ಅವರಿಂದಲೇ ನಾವೆಲ್ಲರೂ ಕ್ರಿಕೆಟ್‌ ಆಡಲು ಆರಂಭ ಮಾಡಿದ್ದೆವು. ಈ ಟ್ರೋಫಿಗಳು ನಮ್ಮ ಕೈಯಲ್ಲಿ ಇರೋದಕ್ಕೆ ಅದೃಷ್ಟ ಮಾಡಿದ್ದೇವೆ. ಇಂದು ಸುನೀಲ್‌ ಗವಾಸ್ಕರ್‌ ಕೂಡ ಅದೇ ಫೀಲಿಂಗ್‌ ಅನುಭವಿಸುತ್ತಿದ್ದಾರೆ ಎಂದರು.

ನಿವೃತ್ತಿಯಾಗುತ್ತಿದ್ದಾರಾ ರವೀಂದ್ರ ಜಡೇಜಾ? ಕೊಹ್ಲಿ ನೀಡಿದ ಹಗ್‌ನಿಂದ ಹೆಚ್ಚಿದ ಅನುಮಾನ

ಕ್ರಿಕೆಟ್‌ನ ವಿಚಾರದಲ್ಲಿ ಸುನೀಲ್‌ ಗವಾಸ್ಕರ್‌ರಷ್ಟು ಸಂಭ್ರಮಿಸೋದು ಯಾರೂ ಇಲ್ಲ. ಟೀಮ್‌ ಇಂಡಿಯಾ ಕೆಟ್ಟದಾಗಿ ಆಡಿದಾಗ ಇವರಷ್ಟು ಟೀಕೆ ಮಾಡುವ ಮತ್ತೊಬ್ಬ ಮಾಜಿ ಆಟಗಾರನಿಲ್ಲ. ಆದರೆ, ಗೆದ್ದಾಗ ಇವರಷ್ಟು ಸಂಭ್ರಮ ಪಡೋ ವ್ಯಕ್ತಿ ಕೂಡ ಮತ್ತೊಬ್ಬರಿಲ್ಲ. ಕ್ರಿಕೆಟ್‌ ಕುರಿತಾಗಿ ಪ್ಯಾಶನ್‌ ಹೊಂದಿರುವ ಅಪರೂಪದ ಕ್ರಿಕೆಟಿಗ ಎಂದು ಅಭಿಮಾನಿಗಳು ಕಾಮೆಂಟ್‌ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದರೆ, ಸುನೀಲ್‌ ಗವಾಸ್ಕರ್‌ ಟೀಕೆಗಳು ಅಷ್ಟು ಹಾರ್ಶ್‌ ಆಗಿ ಯಾಕೆ ಇರುತ್ತಿದ್ದವು ಅನ್ನೋದು ಅರ್ಥವಾಗುತ್ತಿದೆ ಎಂದಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಗೆದ್ದ ರೋಹಿತ್ ವಿದಾಯ ಹೇಳ್ತಾರ? ಬಾಲ್ಯದ ಕೋಚ್ ಸ್ಫೋಟಕ ಹೇಳಿಕೆ

Scroll to load tweet…