Asianet Suvarna News Asianet Suvarna News

ಅಂಧರ ಟಿ20: ಲಂಕಾ ವಿರುದ್ಧ ಭಾರತಕ್ಕೆ ಸರಣಿ!

ಭಾರತ ಹಾಗೂ ಶ್ರೀಲಂಕಾ ನಡುವಿನ ಅಂಧರ ಟಿ20 ಕ್ರಿಕೆಟ್ ಸರಣಿ ಅಂತ್ಯಗೊಂಡಿದೆ. ರೋಚಕ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನ ನಗೆಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.
 

Blind T20 Cricket India win the series with two games to go
Author
Bengaluru, First Published Oct 18, 2018, 11:54 AM IST
  • Facebook
  • Twitter
  • Whatsapp

ಭೂಪಾಲ್‌(ಅ.18): ಇಲ್ಲಿ ಬುಧವಾರ ನಡೆದ ಅಂಧರ ಟಿ20 ಸರಣಿಯ 3ನೇ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾ ವಿರುದ್ಧ 20 ರನ್‌ಗಳ ಗೆಲುವು ಸಾಧಿಸಿತು. ಇದರೊಂದಿಗೆ ಇನ್ನೂ 2 ಪಂದ್ಯಗಳು ಬಾಕಿ ಇರುವಂತೆ 5 ಪಂದ್ಯಗಳ ಸರಣಿಯನ್ನು ಭಾರತ 3-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. 

ಮೊದಲು ಬ್ಯಾಟ್‌ ಮಾಡಿದ ಭಾರತ ನಾಯಕ ಅಜಯ್‌ ರೆಡ್ಡಿ (83), ಡಿ ವೆಂಕಟೇಶ್ವರ 35 ಹಾಗೂ ದುರ್ಗಾ ರಾವ್ ಅಜೇಯ 34 ರನ್ ಸಿಡಿಸಿದರು. ಈ ಮೂಲಕ  ಭಾರತ ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 209 ರನ್ ಸಿಡಿಸಿತು.

210 ರನ್ ಟಾರ್ಗೆಟ್ ಪಡೆದ ಶ್ರೀಲಂಕಾ ಆರಂಭದಲ್ಲೇ ಟೀಂ ಇಂಡಿಯಾ ದಾಳಿಗೆ ಕುಸಿಯಿತು. ಅಜಿತ್ ಸಿಲ್ವಾ ಅರ್ಧಶತಕ ಸಿಡಿಸಿ ಹೋರಾಟ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ. ಅಂತಿಮವಾಗಿ  ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 189 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ  ಭಾರತ  3-0 ಅಂತರದಲ್ಲಿ ಗೆಲುವು ಸಾಧಿಸಿತು.

Follow Us:
Download App:
  • android
  • ios