ಪಾಕ್‌ಗೆ ಮಿಸುಕಾಡಲು ಬಿಡದ ಹುಡುಗರು, ಅಂಡರ್-19 ಫೈನಲ್‌ಗೆ ಭಾರತ
ಪಾಕ್ ವಿರುದ್ಧ ಭಾರತ ಜಯಭೇರಿ/ ಅಂಡರ್-19 ಏಕದಿನ ವಿಶ್ವಕಪ್ ಫೈನಲ್ ಗೆ ಭಾರತ ಲಗ್ಗೆ/ 10 ವಿಕೆಟ್ ಗಳ ಭರ್ಜರಿ ಜಯ/ ಆರಂಭಿಕ ಜಸ್ವಾಲ್ ಶತಕದಾಟ/ ಭಾನುವಾರ ಫೈನಲ್ ಪಂದ್ಯ
ಪೋಚೆಫ್‌ಸ್ಟ್ರೋಮ್(ಫೆ.04) ಅದು 19 ವರ್ಷದ ಒಳಗಿನ ಐಸಿಸಿ ಏಕದಿನ ಪಂದ್ಯ ಕ್ರೀಸ್ ನಲ್ಲಿದ್ದ ಹುಡುಗ ಚೆಂಡನ್ನು ಬೌಂಡರಿ ಗೆರೆಯಿಂದ ಹೊರಗೆ ಕಳಿಸಿದ್ದ. ಇದರೊಂದಿಗೆ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಬರೋಬ್ಬರಿ 10 ವಿಕೆಟ್ ಗಳ ಜಯ ದಕ್ಕಿತು.
ಪಾಕಿಸ್ತಾನವನ್ನು ಬಗ್ಗು ಬಡಿದ ಹುಡುಗರ ತಂಡ 19 ವರ್ಷದ ಒಳಗಿನ ಐಸಿಸಿ ವಿಶ್ವಕಪ್ ಫೈನಲ್ ತಲುಪಿದೆ. ಭಾರತಕ್ಕೆ ಭರ್ಜರಿ 10 ವಿಕೆಟ್ ಜಯ ದಕ್ಕಿದೆ. ಪಾಕಿಸ್ತಾನದ ಬಳಿ ಒಂದೇ ಒಂದು ವಿಕೆಟ್ ಕೀಳಲು ಸಾಧ್ಯವಾಗಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿಹೋಗಿತ್ತು. 43.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು172 ರನ್ ಗಳಿಸಲು ಮಾತ್ರ ಶಕ್ತವಾಗಿತ್ತು. ಅಲ್ಪ ಮೊತ್ತವ ಬೆನ್ನಟ್ಟಿದ ಭಾರತದ ಆರಂಭಿಕರು ಒಂದು ಕ್ಷಣವೂ ಹಿಡಿತ ತಪ್ಪಿಕೊಳ್ಳಲಿಲ್ಲ. ಮೊದಲು ನಿಧಾನವಾಗಿ ಆಡಿದವರು ನಂತರ ಆಟಕ್ಕೆ ವೇಗ ತುಂಬಿದರು. ಕೊನೆಯದಾಗಿ ಭಾರತ 35.2 ಓವರ್ ಗಳಲ್ಲಿ ಗುರಿ ಸಾಧನೆ ಮಾಡಿತು.
ಟೀಂ ಇಂಡಿಯಾ ಈ ಕ್ರಿಕೆಟಿಗನ ಬದುಕನ್ನೇ ಬದಲಸಿದ ಕೀವಿಸ್ ಟೂರ್!
ಐಶಸ್ವಿ ಜೈಸ್ವಾಲ್ 113 ಚೆಂಡುಗಳ್ಲಲಿ 105 ದಾಖಲಿಸಿ ಗೆಲುವಿನ ರೂವಾರಿಯಾದರು. ಬೌಲಿಂಗ್ ನಲ್ಲಿಯೂ ಒಂದು ವಿಕೆಟ್ ಕಿತ್ತು ಆಲ್ ರೌಂಡ್ ಪ್ರದರ್ಶನ ನೀಡಿದರು. ಇನ್ನೊಬ್ಬ ಆರಂಭಿಕ ದಿವ್ಯಾನಾಶ್ ಸಕ್ಸೇನಾ 99 ಚೆಂಡುಗಳಲ್ಲಿ 59 ರನ್ ದಾಖಲಿಸಿ ಗೆಲುವಿಗೆ ಕೊಡುಗೆ ನೀಡಿದರು.
ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ಥಾನ ನಡುವೆ ಇನ್ನೊಂದು ಸೆಮಿಫೈನಲ್ ನಡೆಯಲಿದ್ದು ಅವರಿಬ್ಬರ ನಡುವೆ ಜಯ ಸಾಧಿಸಿದವರು ಫೈನಲ್ ನಲ್ಲಿ ಭಾರತಕ್ಕೆ ಎದುರಾಗಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಾವಳಿ ನಡೆಯುತ್ತಿದೆ.
ಭಾನುವಾರ ಅಂಡರ್-19 ಏಕದಿನ ವಿಶ್ವಕಪ್ ಫೈನಲ್ ನಡೆಯಲಿದೆ. ಕಳೆದ ಸಾರಿಯೂ ಚಾಂಪಿಯನ್ ಆಗಿದ್ದ ಭಾರತ ಮತ್ತೆ ಫೈನಲ್ ಪ್ರವೇಶ ಮಾಡಿದೆ. ಈ ಬಾರಿಯೂ ಟ್ರೋಫಿ ನಮ್ಮದಾಗಲಿ..ಗುಡ್ ಲಕ್ ಬಾಯ್ಸ್...ಹಾಂ.. ಮತ್ತೊಂದು ವಿಷಯ ಇದು ಪಾಕಿಸ್ತಾನದ ವಿರುದ್ಧ ಅಂಡರ್ 19 ನಲ್ಲಿ ಭಾರತಕ್ಕೆನಿರಂತರ ನಾಲ್ಕನೇ ಜಯ.