Ind vs SL : ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ ಭರ್ಜರಿ ಜಯ

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ 62 ರನ್ ಗೆಲುವು
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಸೂಪರ್ ಬ್ಯಾಟಿಂಗ್
ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾಗೆ 1-0 ಮುನ್ನಡೆ

India and Sri Lanka First T20I  Kishan, Iyer and bowlers help India register 62 run over Sri Lanka san

ಲಕ್ನೋ (ಫೆ.24): ಇಶಾನ್ ಕಿಶನ್ (Ishan Kishan) (56 ಎಸೆತಗಳಲ್ಲಿ 89) ಮತ್ತು ಶ್ರೇಯಸ್ ಅಯ್ಯರ್ ( Shreyas Iyer) (28 ಎಸೆತಗಳಲ್ಲಿ ಔಟಾಗದೆ 57) ಅವರ ಆಕರ್ಷಕ ಅರ್ಧಶತಕ ಹಾಗೂ ಬೌಲರ್ ಗಳ ಸಾಂಘಿಕ ಹೋರಾಟದಿಂದ ಗುರುವಾರ  ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ (India) ತಂಡ 62 ರನ್ ಗಳಿಂದ ಪ್ರವಾಸಿ ಶ್ರೀಲಂಕಾ  (Sri Lanka)ತಂಡವನ್ನು ಸೋಲಿಸಿತು.

2ನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಪಿಚ್ ಬಹಳ ನಿಧಾನಗತಿಯಲ್ಲಿ ವರ್ತಿಸಿತು. ಪಿಚ್ ನ ಮೇಲಿನ ಇಬ್ಬನಿಯ ಲಾಭವನ್ನು ಪಡೆದುಕೊಳ್ಳಲು ವಿಫಲವಾದ ಶ್ರೀಲಂಕಾ 20 ಓವರ್ ಗಳಲ್ಲಿ 6 ವಿಕೆಟ್ ಗೆ 137 ರನ್ ಬಾರಿಸಿ ಸೋಲು ಕಂಡಿತು. ಇದರೊಂದಿಗೆ ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಗೆಲುವಿನ ದಾಖಲೆ ಸತತ 10 ಪಂದ್ಯಗಳಿಗೆ ವಿಸ್ತರಣೆ ಆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ2 ವಿಕೆಟ್ ಗೆ 199 ಮೊತ್ತ ಪೇರಿಸಿತು. ಮೊದಲ ವಿಕೆಟ್ ಗೆ ರೋಹಿತ್ ಶರ್ಮ (Rohit Sharma) ಹಾಗೂ ಇಶಾನ್ ಕಿಶನ್ ಸ್ಪೋಟಕ ಜೊತೆಯಾಟವಾಡಿದ್ದರಿಂದ ತಂಡ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು.


ಬೌಲಿಂಗ್ ವೇಳೆ ಘಾತಕ ದಾಳಿ ನಡೆಸಿದ ಭಾರತ ತಂಡ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದುಕೊಳ್ಳುವಲ್ಲಿ ಯಶ ಕಂಡಿತು. ಭುವನೇಶ್ವರ್ ಕುಮಾರ್ ಎಸೆದ ನಿಧಾನಗತಿಯ ಎಸೆತವನ್ನು ರಕ್ಷಣೆ ಮಾಡುವ ಪ್ರಯತ್ನದಲ್ಲಿ ಪಾಥುಮ್ ನಿಸ್ಸಾಂಕ ಬೌಲ್ಡ್ ಆಗಿ ನಿರ್ಗಮಿಸಿದರು. ಬಳಿಕ ಕಮಿಲ್ ಮಿಶಾರಾ ಕೆಲವು ಬೌಂಡರಿಗಳನ್ನು ಬಾರಿಸಿದ್ದು ಮಾತ್ರವಲ್ಲದೆ, ವೆಂಕಟೇಶ್ ಅಯ್ಯರ್ ಅವರಿಂದ ಜೀವದಾನವನ್ನೂ ಪಡೆದುಕೊಂಡಿದ್ದರು. ಆದರೆ, ಇದಾದ ಎರಡು ಎಸೆತಗಳ ಬಳಿಕ, ಭುವನೇಶ್ವರ್ ಕುಮಾರ್ ಎಸೆತದಲ್ಲಿಯೇ ಮಿಡ್ ವಿಕೆಟ್ ನಲ್ಲಿ ರೋಹಿತ್ ಶರ್ಮಗೆ ಕ್ಯಾಚ್ ನೀಡಿ ಔಟಾದರು.

Ind vs SL : ಸ್ಫೋಟಕ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್, ಶ್ರೇಯಸ್, ಭಾರತದ ದೊಡ್ಡ ಮೊತ್ತ!
ಕ್ರೀಸ್ ನಲ್ಲಿದ್ದಷ್ಟು ಹೊತ್ತು ಚೆಂಡನ್ನು ಎದುರಿಸಲು ಪರದಾಟ ನಡೆಸಿದ ಜತಿನ್ ಲಿಯಾನಗೆ, ವೆಂಕಟೇಶ್ ಅಯ್ಯರ್ ಎಸೆತದಲ್ಲಿ ಸಂಜು ಸ್ಯಾಮ್ಸನ್ ಗೆ ಪಾಯಿಂಟ್ ನಲ್ಲಿ ಕ್ಯಾಚ್ ನೀಡಿ ಔಟಾದರು. ಗಾಯದಿಂದಾಗಿ ಹಲವು ತಿಂಗಳು ವಿಶ್ರಾಂತಿಯಲ್ಲಿದ್ದ ರವೀಂದ್ರ ಜಡೇಜಾ, ಪಿಚ್ ನ ಲಾಭವನ್ನು ಪಡೆದುಕೊಂಡು ಅನುಭವಿ ವಿಕೆಟ್ ಕೀಪರ್ ದಿನೇಶ್ ಚಾಂಡಿಮಲ್ ಅವರ ವಿಕೆಟ್ ಪಡೆಯುವಲ್ಲಿ ಯಶ ಕಂಡರು. ದಸುನ್ ಶನಕ ವಿಕೆಟ್ ಉರುಳಿಸುವುದರೊಂದಿಗೆ ಶ್ರೀಲಂಕಾ ತಂಡದ ಸೋಲು ಖಚಿತಗೊಂಡಿತ್ತು. ಶನಕ ಅವರ ವಿಕೆಟ್ ಪಡೆಯುವ ಮೂಲಕ ಯಜುವೇಂದ್ರ ಚಾಹಲ್ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಭಾರತದ ಬೌಲರ್ ಎನಿಸಿಕೊಂಡರು. ಚಾಮಿಕ ಕರುಣರತ್ನೆ ಎರಡು ಸಿಕ್ಸರ್ ಗಳನ್ನು ಸಿಡಿಸಿ ಅಬ್ಬರಿಸಿದರಾದರೂ, ಅಯ್ಯರ್ ಎಸೆತದಲ್ಲಿ ಇಶಾನ್ ಕಿಶನ್ ಗೆ ಕ್ಯಾಚ್ ನೀಡಿ ಹೊರನಡೆದರು.

ಹರ್ಮನ್‌ಪ್ರೀತ್, ಮಿಥಾಲಿ, ಸ್ಮೃತಿ ಆಕರ್ಷಕ ಫಿಫ್ಟಿ, ಕೊನೆಯ ಏಕದಿನ ಪಂದ್ಯ ಗೆದ್ದ ಮಹಿಳಾ ಟೀಂ ಇಂಡಿಯಾ..!
ಶ್ರೀಲಂಕಾ ತಂಡದ ಇನ್ನಿಂಗ್ಸ್ ನಲ್ಲಿ ಹೈಲೈಟ್ ಎನಿಸಿದ್ದು ಚರಿತ್ ಅಸಲಂಕ ಬ್ಯಾಟಿಂಗ್. ಇನ್ನೊಂದೆಡೆ ಕೊನೆಯಲ್ಲಿ ಇವರಿಗೆ ಸಾಥ್ ನೀಡಿದ ದುಷ್ಮಂತ ಚಾಮೀರ ಒಂದು ಸಿಕ್ಸ್ ಹಾಗೂ ಎರಡು ಬೌಂಡರಿಗಳನ್ನು ಸಿಡಿಸಿದರು. ಅಸಲಂಕಾ 43 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಗಮನಸೆಳೆದರು. ಉಭಯ ತಂಡಗಳ ನಡುವೆ 2ನೇ ಟಿ20 ಪಂದ್ಯ ಶನಿವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ.

ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ಗೆ 199 (ಇಶಾನ್ ಕಿಶನ್ 89, ಶ್ರೇಯಸ್ ಅಯ್ಯರ್ 57*; ದಸುನ್ ಶನಕ 19ಕ್ಕೆ1,  ಲಹಿರು ಕುಮಾರ 43ಕ್ಕೆ 1) ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್ ಗೆ 137 (ಚರಿತ್ ಅಸಲಂಕಾ 53*, ದುಷ್ಮಂತ ಚಾಮೀರ  24*; ಭುವನೇಶ್ವರ್ ಕುಮಾರ್ 9ಕ್ಕೆ 2, ವೆಂಕಟೇಶ್ ಅಯ್ಯರ್ 36ಕ್ಕೆ 2)

Latest Videos
Follow Us:
Download App:
  • android
  • ios