Ind vs WI: 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್‌ ಇಂಡೀಸ್‌ ಬೌಲಿಂಗ್ ಆಯ್ಕೆ

* ಭಾರತ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್

* ಉಭಯ ತಂಡಗಳಲ್ಲೂ ಒಂದೊಂದು ಮಹತ್ವದ ಬದಲಾವಣೆ

* ಇಶಾನ್ ಕಿಶನ್ ಬದಲಿಗೆ ತಂಡ ಕೂಡಿಕೊಂಡ ಕೆ.ಎಲ್. ರಾಹುಲ್

Ind vs WI West Indies won the toss and elected to Bowling first against Team India in 2nd ODI kvn

ಅಹಮದಾಬಾದ್‌(ಫೆ.09): ಭಾರತ ಹಾಗೂ ವೆಸ್ಟ್ ಇಂಡೀಸ್‌ (India vs West Indies) ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್‌ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಗೆಲುವುದರ ಮೂಲಕ ಶುಭಾರಂಭ ಮಾಡಿರುವ ಟೀಂ ಇಂಡಿಯಾ(Team India), ಇದೀಗ ಎರಡನೇ ಪಂದ್ಯವನ್ನು ಜಯಿಸುವ ಮೂಲಕ ಇನ್ನೊಂದು ಪಂದ್ಯ ಭಾಕಿ ಇರುವಂತೆಯೇ ಗೆಲುವಿನ ನಗೆ ಬೀರಲು ಎದುರು ನೋಡುತ್ತಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಆರಂಭವಾದ ಎರಡನೇ ಏಕದಿನ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಬದಲಾವಣೆಗಳಾಗಿದ್ದು, ಉಪನಾಯಕ ಕೆ.ಎಲ್‌. ರಾಹುಲ್ (KL Rahul) ತಂಡ ಕೂಡಿಕೊಂಡಿದ್ದಾರೆ. ಇಶಾನ್‌ ಕಿಶನ್ (Ishan Kishan) ಬದಲಿಗೆ ಕೆ.ಎಲ್. ರಾಹುಲ್ ತಂಡ ಕೂಡಿಕೊಂಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ತಂಡದಲ್ಲೂ ಮಹತ್ವದ ಬದಲಾವಣೆಯಾಗಿದ್ದು, ಗಾಯದ ಸಮಸ್ಯೆಯಿಂದ ಕೀರನ್ ಪೊಲ್ಲಾರ್ಡ್ (Kieron Pollard) ಎರಡನೇ ಪಂದ್ಯದಿಂದ ಹೊರಬಿದ್ದಿದ್ದು, ಓಡೆನ್ ಸ್ಮಿತ್ ತಂಡ ಕೂಡಿಕೊಂಡಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸುವ ಮೂಲಕ ಹೀನಾಯ ಸೋಲು ಕಂಡಿತ್ತು. ಇದೀಗ ಗಾಯದ ಮೇಲೆ ಬರೆ ಎಳೆದಂತೆ ನಾಯಕ ಕೀರನ್ ಪೊಲ್ಲಾರ್ಡ್‌ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿರುವುದು ಕೆರಿಬಿಯನ್‌ ಪಡೆಗೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆಯಿದೆ. ಸರಣಿ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ವೆಸ್ಟ್‌ ಇಂಡೀಸ್ ತಂಡ ಸಿಲುಕಿದೆ. ಕೀರನ್ ಪೊಲ್ಲಾರ್ಡ್ ಅನುಪಸ್ಥಿತಿಯಲ್ಲಿ ನಿಕೋಲಸ್ ಪೂರನ್‌ (Nicholas Pooran) ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 

Ind vs WI: ಟೀಂ ಇಂಡಿಯಾಗಿಂದು ಸರಣಿ ಜಯದ ಗುರಿ

ಭಾರತದಲ್ಲಿ ವಿರಾಟ್ ಕೊಹ್ಲಿಗೆ 100ನೇ ಏಕದಿನ!

ವಿಂಡೀಸ್‌ ವಿರುದ್ಧ 2ನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli) ಕಣಕ್ಕಿಳಿದಿದ್ದು, ಇದು ತವರು ನೆಲದಲ್ಲಿ ಅವರ 100ನೇ ಏಕದಿನ ಪಂದ್ಯವಾಗಿದೆ. ಈ ಸಾಧನೆ ಮಾಡಲಿರುವ ಭಾರತದ 5ನೇ ಆಟಗಾರ ಎನಿಸಲಿದ್ದಾರೆ. ಸಚಿನ್‌ ತೆಂಡುಲ್ಕರ್ (164 ಪಂದ್ಯ), ಎಂ ಎಸ್ ಧೋನಿ(127 ಪಂದ್ಯ), ಅಜರುದ್ದೀನ್‌(113 ಪಂದ್ಯ) ಹಾಗೂ ಯುವರಾಜ್‌ ಸಿಂಗ್ (108 ಪಂದ್ಯ) ತವರಿನಲ್ಲಿ 100ಕ್ಕಿಂತ ಹೆಚ್ಚು ಏಕದಿನ ಪಂದ್ಯ ಆಡಿದ್ದಾರೆ.

ಭಾರತದ ಮೇಲೆ ಒತ್ತಡ ಹೇರುತ್ತಾ ವಿಂಡೀಸ್‌: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡುವ ತಂಡಕ್ಕೆ ಇಬ್ಬನಿ ಕಾಟ ಕೊಡುವ ಸಾಧ್ಯತೆಯಿದೆ. ಹೀಗಾಗಿ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಪ್ರವಾಸಿ ಪಡೆಯ ಮೇಲೆ ಒತ್ತಡ ಹೇರಬೇಕಿದ್ದರೇ, ಮೊದಲು ಬ್ಯಾಟ್‌ ಮಾಡುವ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಬೇಕಿದೆ. 

ತಂಡಗಳು ಹೀಗಿವೆ ನೋಡಿ:

ಭಾರತ: ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ಕೆ.ಎಲ್‌. ರಾಹುಲ್, ರಿಷಭ್ ಪಂತ್‌, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್‌, ಶಾರ್ದೂಲ್ ಠಾಕೂರ್‌, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌, ಪ್ರಸಿದ್ಧ್ ಕೃಷ್ಣ.

ವಿಂಡೀಸ್‌: ಶಾಯ್ ಹೋಪ್‌, ಬ್ರೆಂಡನ್ ಕಿಂಗ್‌, ಡರೆನ್‌ ಬ್ರಾವೋ, ಸಮರ್ಥ್ ಬ್ರೂಕ್ಸ್‌, ನಿಕೋಲಸ್‌ ಪೂರನ್‌(ನಾಯಕ)‌,  ಜೇಸನ್ ಹೋಲ್ಡರ್‌, ಓಡೆನ್ ಸ್ಮಿತ್, ಅಕೆಲ್ ಹೊಸೆನ್‌, ಫ್ಯಾಬಿನ್‌ ಆ್ಯಲನ್‌, ಅಲ್ಜೆರಿ ಜೋಸೆಫ್‌, ಕೆಮಾರ್ ರೋಚ್‌.
 

Latest Videos
Follow Us:
Download App:
  • android
  • ios