Asianet Suvarna News Asianet Suvarna News

'ಇವರೇ ಕಾರಣ': ವೆಸ್ಟ್ ಇಂಡೀಸ್ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ..!

ವಿಂಡೀಸ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಎರ​ಡ​ರಲ್ಲೂ ಫೇಲಾದ ಭಾರತ 2 ವಿಕೆಟ್‌ ಸೋಲು ಅನು​ಭ​ವಿ​ಸಿತು. 5 ಪಂದ್ಯ​ಗಳ ಸರ​ಣಿ​ಯಲ್ಲಿ 2-0 ಮುನ್ನಡೆ ಪಡೆ​ದಿ​ರುವ ವಿಂಡೀಸ್‌, ಬಹು ವರ್ಷ​ಗಳ ಬಳಿಕ ಭಾರತ ವಿರು​ದ್ಧ ಸರಣಿ ಗೆಲು​ವಿನ ಸನಿ​ಹಕ್ಕೆ ತಲು​ಪಿದೆ.
 

Ind vs WI Hardik Pandya Blasts Indian Team Performance In 2nd T20I kvn
Author
First Published Aug 8, 2023, 10:09 AM IST

ಪ್ರಾವಿಡೆನ್ಸ್‌(ಗಯಾನ): ವೆಸ್ಟ್‌ಇಂಡೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಭಾರತೀಯ ಬ್ಯಾಟರ್‌ಗಳು ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದು, ಇದನ್ನು ನಾಯಕ ಹಾರ್ದಿಕ್‌ ಪಾಂಡ್ಯ ಒಪ್ಪಿಕೊಂಡಿದ್ದಾರೆ. ಭಾನುವಾರದ 2ನೇ ಟಿ20 ಪಂದ್ಯದಲ್ಲಿ 2 ವಿಕೆಟ್‌ ಸೋಲನುಭವಿಸಿದ ಬಳಿಕ ಮಾತನಾಡಿದ ಅವರು, ‘ನಮ್ಮ ಬ್ಯಾಟಿಂಗ್‌ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಒಂದೆಡೆ ಪಿಚ್‌ ನಿಧಾ​ನ​ಗ​ತಿ​ಯ​ದ್ದಾ​ಗಿ​ದ್ದು, ಮತ್ತೊಂದೆಡೆ ವಿಕೆಟ್‌ಗಳು ಬೀಳುತ್ತಿದ್ದವು. ನಾವು ಇನ್ನೂ ಉತ್ತಮವಾಗಿ ನಾವು ಬ್ಯಾಟ್‌ ಮಾಡಬಹುದಿತ್ತು’ ಎಂದರು.

‘ಬ್ಯಾ​ಟರ್‌ಗಳು ಹೆಚ್ಚಿನ ಜವಾ​ಬ್ದರಿ ಅರಿತು ಆಡ​ಬೇಕು. ಸದ್ಯದ ಸಂಯೋ​ಜನೆಯ ಅನು​ಸಾರ ನಾವು ನಮ್ಮ ಅಗ್ರ 7 ಬ್ಯಾಟರ್‌ಗಳಿಂದ ಉತ್ತಮ ಪ್ರದ​ರ್ಶನ ನಿರೀ​ಕ್ಷಿಸಿ, ಬೌಲರ್‌ಗಳು ಪಂದ್ಯ ಗೆಲ್ಲಿ​ಸ​ಲಿ​ದ್ದಾರೆ ಎನ್ನು​ವ ವಿಶ್ವಾಸದೊಂದಿಗೆ ಆಡ​ಬೇಕು. ಉತ್ತಮ ಸಮ​ತೋ​ಲನ ಕಂಡು​ಕೊ​ಳ್ಳಲು ದಾರಿ ಹುಡು​ಕಿ​ಕೊ​ಳ್ಳ​ಬೇ​ಕಿದೆ. ಇದೇ ವೇಳೆ ಬ್ಯಾಟರ್‌ಗಳು ತಮ್ಮ ಮೇಲಿ​ರುವ ಜವಾ​ಬ್ದಾ​ರಿಯನ್ನು ನಿಭಾ​ಯಿ​ಸ​ಬೇ​ಕಿದೆ’ ಎಂದು ಹಾರ್ದಿಕ್‌ ಬ್ಯಾಟರ್‌ಗಳಿಗೆ ಸ್ಪಷ್ಟಸಂದೇಶ ರವಾ​ನಿ​ಸಿ​ದರು.

ಇನ್ನು ಎರಡೂ ಪಂದ್ಯಗಳಲ್ಲಿ ಆಕ​ರ್ಷಕ ಆಟ​ವಾ​ಡಿದ ತಿಲಕ್‌ ವರ್ಮಾ ಬಗ್ಗೆ ಹಾರ್ದಿಕ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದು, ‘ತಿಲಕ್‌ ಕೇವಲ 2ನೇ ಅಂತಾರಾಷ್ಟ್ರೀಯ ಪಂದ್ಯ ಆಡುತಿದ್ದಾರೆಂದು ಅನಿಸುತ್ತಿಲ್ಲ. ಅತ್ಯುತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದಾರೆ. 4ನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್‌ ಆಡುವುದರಿಂದ ಬ್ಯಾಟಿಂಗ್‌ನಲ್ಲಿ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಟಿ20 ಹೋರಾಟದಲ್ಲಿ ವೆಸ್ಟ್ ಇಂಡೀಸ್‌ಗೆ ಶರಣಾದ ಭಾರತ, ಹಾರ್ದಿಕ್ ಪಾಂಡ್ಯ ಪಡೆಗೆ ಸತತ 2ನೇ ಸೋಲು!

2024ರಲ್ಲಿ ವಿಂಡೀಸ್‌ನಲ್ಲೇ ನಡೆ​ಯ​ಲಿ​ರುವ ಟಿ20 ವಿಶ್ವ​ಕಪ್‌ಗೆ ಸಿದ್ಧತೆ ನಡೆ​ಸಲು ‘ಐಪಿ​ಎಲ್‌ ಸ್ಟಾರ್‌’ಗಳನ್ನು ಒಟ್ಟು​ಗೂ​ಡಿಸಿ ಕಟ್ಟಿ​ರುವ ತಂಡ, ಯಾರೂ ಊಹಿ​ಸದಷ್ಟುವೇಗ​ವಾಗಿ ಕುಸಿ​ಯು​ತ್ತಿರು​ವಂತೆ ಕಾಣು​ತ್ತಿದೆ. ವಿಂಡೀಸ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಎರ​ಡ​ರಲ್ಲೂ ಫೇಲಾದ ಭಾರತ 2 ವಿಕೆಟ್‌ ಸೋಲು ಅನು​ಭ​ವಿ​ಸಿತು. 5 ಪಂದ್ಯ​ಗಳ ಸರ​ಣಿ​ಯಲ್ಲಿ 2-0 ಮುನ್ನಡೆ ಪಡೆ​ದಿ​ರುವ ವಿಂಡೀಸ್‌, ಬಹು ವರ್ಷ​ಗಳ ಬಳಿಕ ಭಾರತ ವಿರು​ದ್ಧ ಸರಣಿ ಗೆಲು​ವಿನ ಸನಿ​ಹಕ್ಕೆ ತಲು​ಪಿದೆ.

ತಿಲಕ್‌ ವರ್ಮಾ ಹೊರ​ತು​ಪ​ಡಿಸಿ ಉಳಿ​ದ​ವ​ರಿಂದ ಸಾಧಾ​ರ​ಣ ಬ್ಯಾಟಿಂಗ್‌ ಪ್ರದ​ರ್ಶನ ಮೂಡಿ​ಬಂದ ಕಾರಣ, 20 ಓವ​ರಲ್ಲಿ ಭಾರತ 7 ವಿಕೆಟ್‌ಗೆ 152 ರನ್‌ ಕಲೆಹಾಕಿತು. ನಿಧಾ​ನ​ಗತಿಯ ಪಿಚ್‌ನಲ್ಲಿ ಭಾರತದ ಸ್ಪರ್ಧಾ​ತ್ಮಕ ಮೊತ್ತ ದಾಖ​ಲಿ​ಸಿದೆ ಎಂದು ಮೊದಲ ಇನ್ನಿಂಗ್‌್ಸ ಬಳಿಕ ವೀಕ್ಷಕ ವಿವ​ರಣೆಗಾರರು ವಿಶ್ಲೇ​ಷಿ​ಸಿ​ದ್ದರು. ಆದರೆ ನಿಕೋ​ಲಸ್‌ ಪೂರನ್‌ರ ಸ್ಫೋಟಕ ಆಟ, ವಿಂಡೀಸ್‌ ಗೆಲು​ವಿನ ಆಸೆಯನ್ನು ಕೈಬಿ​ಡ​ದಂತೆ ನೋಡಿ​ಕೊಂಡಿತು.

ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ ಪಾಕ್‌ ಮಾಜಿ ಕ್ರಿಕೆಟಿಗ..!

ಹಾರ್ದಿಕ್‌ ಎಡ​ವ​ಟ್ಟು!

ವಿಂಡೀಸ್‌ ಗೆಲು​ವಿ​ನತ್ತ ಮುನ್ನು​ಗ್ಗು​ತ್ತಿ​ದ್ದಾಗ ಇನ್ನಿಂಗ್‌್ಸನ 16ನೇ ಓವ​ರಲ್ಲಿ 3 ವಿಕೆಟ್‌ ಪತ​ನ​ಗೊಂಡವು. ಶೆಫರ್ಡ್‌ ರನೌಟ್‌ ಆದರೆ, ಅಪಾ​ಯ​ಕಾರಿ ಹೋಲ್ಡರ್‌ ಹಾಗೂ ಹೆಟ್ಮೇ​ಯರ್‌ರನ್ನು ಚಹಲ್‌ ಔಟ್‌ ಮಾಡಿ​ದರು. ಇದ​ರಿಂದಾಗಿ ವಿಂಡೀಸ್‌ ಒತ್ತ​ಡಕ್ಕೆ ಸಿಲು​ಕಿತು. ಆದರೆ ನಾಯಕ ಹಾರ್ದಿಕ್‌ ಮುಂದಿನ 3 ಓವರ್‌ ವೇಗಿ​ಗ​ಳಿಂದ ಬೌಲ್‌ ಮಾಡಿ​ಸಿ​ದರು. ಚಹಲ್‌ರ ಎಸೆ​ತ​ಗ​ಳನ್ನು ಎದು​ರಿ​ಸಲು ವಿಂಡೀಸ್‌ ದಾಂಡಿ​ಗರು ಪರದಾ​ಡು​ತ್ತಿ​ದ್ದದ್ದು ಸ್ಪಷ್ಟ​ವಾಗಿ ಕಂಡುಬಂದ​ರೂ, ಅವ​ರಿಗೆ ಮತ್ತೊಂದು ಓವರ್‌ ನೀಡದೆ ಹಾರ್ದಿಕ್‌ ಎಡ​ವಟ್ಟು ಮಾಡಿ​ದರು.

Follow Us:
Download App:
  • android
  • ios