Asianet Suvarna News Asianet Suvarna News

IND vs SL ಭಾರತದ ದಾಳಿಗೆ ತತ್ತರಿಸಿದ ಶ್ರೀಲಂಕಾ, 215 ರನ್‌ಗೆ ಆಲೌಟ್!

ದ್ವಿತೀಯ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಅದ್ಬುತ ಪ್ರದರ್ಶನಕ್ಕೆ ಲಂಕಾ ತತ್ತರಿಸಿದೆ. ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ದಾಳಿಗೆ ಮುದುಡಿದ ಶ್ರೀಲಂಕಾ 215 ರನ್‌ಗೆ ಆಲೌಟ್ ಆಗಿದೆ. 

IND vs SL Team india bowlers restrict sri lanka by 215 runs in crucial 2nd ODI Kolkata ckm
Author
First Published Jan 12, 2023, 4:57 PM IST

ಕೋಲ್ಕತಾ(ಜ.12): ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ ಆರಂಭದಲ್ಲೇ ರೋಚಕಘಟ್ಟ ತಲುಪಿದೆ. ಟೀಂ ಇಂಡಿಯಾ ಕರಾರುವಕ್ ದಾಳಿಗೆ ಲಂಕಾ ತತ್ತರಿಸಿತು. ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಮೋದಿ ಲಂಕಾಗೆ ಮುಳುವಾದರೆ, ಇತ್ತ ಉಮ್ರಾನ್ ಮಲಿಕ್ ಹಾಗೂ ಅಕ್ಸರ್ ಪಟೇಲ್ ಜಾದುವಿನಿಂದ ಅಬ್ಬರಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಶ್ರೀಲಂಕಾ 39.4 ಓವರ್‌ಗಳಲ್ಲಿ 215 ರನ್ ಸಿಡಿಸಿ ಆಲೌಟ್ ಆಯಿತು. ಲಂಕಾಗೆ ನವಾನಿಂಡು ಫರ್ನಾಂಡೋ ಸಿಡಿಸಿದ ಅರ್ಧಶತಕ ಹಾಗೂ ಕುಸಾಲ್ ಮೆಂಡೀಸ್ 34 ರನ್ ಹಾಗೂ ದುನೀತ್ ವೆಲ್ಲಾಲೆಗಾ 32 ರನ್ ಕಾಣಿಕೆಯಿಂದ ಲಂಕಾ 200 ರನ್ ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.

ಟಾಸ್ ಗೆದ್ದ ಶ್ರೀಲಂಕಾ (India vs Sri lanka) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಶ್ರೀಲಂಕಾ ಆವಿಷ್ಕ ಫರ್ನಾಂಡೋ ವಿಕೆಟ್ ಕಳೆದುಕೊಂಡರು. ಆವಿಷ್ಕಾ 20 ರನ್ ಸಿಡಿಸಿ ಔಟಾದರು. ನುವಾನಿಂಡು ಫರ್ನಾಂಡೋ ಹಾಗೂ ಕುಸಾಲ್ ಮೆಂಡೀಸ್ ಜೊತೆಯಾಟದಿಂದ ಶ್ರೀಲಂಕಾ ಚೇತರಿಸಿಕೊಂಡಿತು.

ರೋಹಿತ್ ಶರ್ಮಾರಂತೆ ಹಣ್ಣು ತಿಂದು ತೂಕ ಇಳಿಸ್ಕೊಳ್ಳಿ

ಸ್ಪೋಟಕ ಬ್ಯಾಟಿಂಗ್ ಮೂಲಕ ಬ್ಯಾಟಿಂಗ್ ಆರಂಭಿಸಿದ ಕುಸಾಲ್ ಮೆಂಡೀಸ್ ಲಂಕಾದ ರನ್ ವೇಗ ಹೆಚ್ಚಿಸಿದರು. ಆದರೆ ಕುಸಾಲ್ ಮೆಂಡೀಸ್ ಅಬ್ಬರ ಹೆಚ್ಚು ಹೊತ್ತು ಇರಲಿಲ್ಲ. 34 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಧನಂಜಯ ಡಿಸಿಲ್ವಾ ಡಕೌಟ್ ಆದರೆ, ಅಸಲಂಕ 15 ರನ್ ಕಾಣಿಕೆ ನೀಡಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿ ಶತಕ ಸಿಡಿಸಿದ ನಾಯಕ ದಸೂನ್ ಶನಕ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.

ಹೋರಾಟ ನೀಡಿದ ನುವಾನಿಂಡು ಫರ್ನಾಂಡೋ ಹಾಫ್ ಸೆಂಚುರಿ ಸಿಡಿಸಿದರು.ಫರ್ನಾಂಡೋ 50 ರನ್ ಸಿಡಿಸಿ ಔಟಾದರು. ವೆಲ್ಲಾಲೆಗಾ 32 ರನ್ ಕಾಣಿಕೆ ನೀಡಿದರು. ಚಮಿಕಾ ಕರುಣಾರತ್ನೆ 17 ರನ್ ಸಿಡಿಸಿ ಔಟಾದರು. ರಾಜಿತ ಅಜೇಯ 17 ರನ್ ಸಿಡಿಸಿದರು. ಲಹಿರು ಕುಮಾರ್ ಡಕೌಟ್ ಆಗುವ ಮೂಕ ಶ್ರೀಲಂಕಾ 39.4 ಓವರ್‌ಗಳಲ್ಲಿ 215 ರನ್‌ಗೆ ಆಲೌಟ್ ಆಯಿತು. 

ಸತತ ಎರಡು ಶತಕ ಸಿಡಿಸಿದ ಕೊಹ್ಲಿ, ರ‍್ಯಾಂಕಿಂಗ್‌ನಲ್ಲಿ ಮಹತ್ತರ ಬದಲಾವಣೆ..!

ಮೊದಲ ಪಂದ್ಯದಲ್ಲಿ ಭಾರತಕ್ಕೆ ಗೆಲುವು
ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ, ರೋಹಿತ್ ಶರ್ಮಾ ಸೇರಿದಂತೆ ಇತರ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ ಟೀಂ ಇಂಡಿಯಾ 373 ರನ್ ಸಿಡಿಸಿತ್ತು. ಈ ಬೃಹತ್ ಮೊತ್ತ ಚೇಸ್ ಮಾಡಲು ಕಣಕ್ಕಿಳಿದ ಶ್ರೀಲಂಕಾ ತಂಡಕ್ಕ ನಾಯಕ ದಸೂನ್ ಶನಕಾ ಆಸರೆಯಾಗಿದ್ದರು. ಶನಕಾ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 308 ರನ್ ಸಿಡಿಸಿತು. ಈ ಮೂಲಕ ಭಾರತ 67 ರನ್ ಗೆಲುವು ದಾಖಲಿಸಿತ್ತು.

Follow Us:
Download App:
  • android
  • ios