Asianet Suvarna News Asianet Suvarna News

IND vs SL ಶನಕ ಹೊಡಿಬಡಿ ಆಟಕ್ಕೆ ಭಾರತ ಕಂಗಾಲು, ಹಾರ್ದಿಕ್ ಸೈನ್ಯಕ್ಕೆ 207 ರನ್ ಸವಾಲು!

ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶ್ರೀಲಂಕಾ ಇದೀಗ ಭಾರತಕ್ಕೆ 207 ರನ್ ಟಾರ್ಗೆಟ್ ನೀಡಿದೆ. ಇದೀಗ ಈ ಮೊತ್ತ ಚೇಸ್ ಮಾಡುವುದು ಟೀಂ ಇಂಡಿಯಾಗೆ ಸವಾಲಾಗಿ ಪರಿಣಮಿಸಿದೆ.

IND vs SL t20 Dasun Shanaka help Sri lanka set to 207 run to team India in 2nd match Pune ckm
Author
First Published Jan 5, 2023, 8:47 PM IST

ಪುಣೆ(ಜ.05): ಭಾರತ ವಿರುದ್ಧದ 2ನೇ ಹಾಗೂ ಮಹತ್ವದ ಟಿ20 ಪಂದ್ಯದಲ್ಲಿ ಶ್ರೀಲಂಕಾ ದಿಟ್ಟ ಹೋರಾಟ ನೀಡಿದೆ. ಕುಸಾಲ್ ಮೆಂಡೀಸ್ ಅರ್ಧಶತಕ, ನಾಯಕ ದಸೂನ್ ಶನಕ ಸ್ಫೋಟಕ ಬ್ಯಾಟಿಂಗ್ ಪಂದ್ಯದ ಗತಿಯನ್ನೇ ಬದಲಿಸಿತು. ದಸೂನ್ ಕೇವಲ 20 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿದೆ. ಇದೀಗ ಭಾರತದ ಗೆಲುವುಗೆ 207 ರನ್ ಸಿಡಿಸಬೇಕಿದೆ. ಈ ಬೃಹತ್ ಮೊತ್ತ ಚೇಸಿಂಗ್ ಭಾರತಕ್ಕೆ ತೀವ್ರ ಸವಾಲಾಗಿ ಪರಿಣಮಿಸಿದೆ. ಮೊದಲ ಪಂದ್ಯದಲ್ಲಿ ಕೂದಲೆಳೆಯುವ ಅಂತರದಿಂದ ಗೆಲುವು ಕೈಚೆಲ್ಲಿದ ಶ್ರೀಲಂಕಾ, 2ನೇ ಪಂದ್ಯ ಗೆಲ್ಲಲೇಬೇಕೆಂಬ ಪಣತೊಟ್ಟಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ಬ್ಯಾಟಿಂಗ್ ವಿಕೆಟ್ ಲಾಭ ಪಡೆದುಕೊಂಡಿತು. ಭಾರತದ ಡ್ಯೂ ಫ್ಯಾಕ್ಟರ್ ಕಾರಣ ಚೇಸಿಂಗ್ ಆಯ್ಕೆ ಮಾಡಿಕೊಂಡರೆ, ಶ್ರೀಲಂಕಾ ಬ್ಯಾಟಿಂಗ್ ವಿಕೆಟ್‌ನಿಂದ ಅಬ್ಬರದ ಆರಂಭ ಪಡೆಯಿತು. ಪಥುಮ್ ನಿಸಂಕ ಹಾಗೂ ಕುಸಾಲ್ ಮೆಂಡೀಸ್ ಆರಂಭ ಭಾರತಕ್ಕೆ ತಲೆನೋವಾಯಿತು. ಮೊದಲ ವಿಕೆಟ್‌ಗೆ ಈ ಜೋಡಿ 80 ರನ್ ಜೊತೆಯಾಟ ನೀಡಿದರು. ಕೇವಲ 31 ಎಸೆತದಲ್ಲಿ ಕುಸಾಲ್ ಮೆಂಡೀಸ್ 52 ರನ್ ಸಿಡಿಸಿ ಔಟಾದರು. 

IND vs SL ಹ್ಯಾಟ್ರಿಕ್ ನೋ ಬಾಲ್, ಟ್ರೋಲ್‌ಗೆ ಗುರಿಯಾದ ವೇಗಿ ಅರ್ಶದೀಪ್!

ಮೆಂಡೀಸ್ ವಿಕೆಟ್ ಪತನದ ಬೆನ್ನಲ್ಲೇ ಭಾರತ ಮತ್ತೆ ಪುಡಿದೆದ್ದಿತ್ತು. ಭಾನುಕ ರಾಜಪಕ್ಸ ಕೇವಲ 2 ರನ್ ಸಿಡಿಸಿ ಔಟಾದರು. ಇತ್ತ ಆರಂಭಿಕ ಪಥುಮ್ ನಿಸಂಕ 33 ರನ್ ಕಾಣಿಕೆ ನೀಡಿದರು. 96 ರನ್‌ಗೆ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡಿತು. ಆದರೆ ಉತ್ತಮ ರನ್ ರೇಟ್‌ನಿಂದಾಗಿ ಲಂಕಾ ಹೆಚ್ಚಿನ ಆತಂಕಕ್ಕೆ ಒಳಗಾಗಲಿಲ್ಲ. ಇತ್ತ ಚಾರಿತ್ ಅಸಲಂಕ ಹೋರಾಟ ನೀಡಿದರು. ಆದರೆ ಧನಂಜಯ ಡಿ ಸಿಲ್ವ ಕೇವಲ 3 ರನ್ ಸಿಡಿಸಿ ಔಟಾದರು. 

ನಾಯಕ ದಸೂನ್ ಶನಕ ಹಾಗೂ ಚಾರಿತ್ ಅಸಲಂಕ ಹೋರಾಟ ಲಂಕಾ ತಂಡಕ್ಕೆ ನೆರವಾಯಿತು. ಇತ್ತ ಚಾರಿತ್ ಅಸಲಂಕ 37 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ವಾನಿಂಡು ಹಸರಂಗ ಡಕೌಟ್ ಆದರು. ಆದರೆ ದಸೂನ್ ಶನಕ ಹಾಗೂ ಚಾಮಿಕ ಕುರುಣಾರತ್ನೆ ಜೊತೆಯಾಟ ಪಂದ್ಯದ ಗತಿ ಬದಲಿಸಿತು. 

Asia Cup 2023: ಮತ್ತೆ ಇಂಡೋ-ಪಾಕ್ ಕದನಕ್ಕೆ ವೇದಿಕೆ ಫಿಕ್ಸ್‌

ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ದಸೂನ್ ಶನಕ 20 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಕರಣಾರತ್ನೆ ಅಜೇಯ 11 ರನ್ ಸಿಡಿಸಿದರೆ, ದಸೂನ್ 22 ಎಸೆದಲ್ಲಿ ಅಜೇಯ 56 ರನ್ ಸಿಡಿಸಿದರು.  ಅಂತಿಮ ಓವರ್‌ನಲ್ಲಿನ 3 ಸಿಕ್ಸರ್ ಸೇರಿ ಒಟ್ಟು 6 ಸಿಕ್ಸರ್ ಸಿಡಿಸಿ ಮಿಂಚಿದರು. ದಸೂನ್ ಶನಕ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 254.55. ಈ ಮೂಲಕ ಶ್ರೀಲಂಕಾ ವಿಕೆಟ್ 6 ನಷ್ಟಕ್ಕೆ 205 ರನ್ ಸಿಡಿಸಿತು. 

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 162 ರನ್ ಸಿಡಿಸಿತ್ತು. ಈ ಪಂದ್ಯವನ್ನು ಶ್ರೀಲಂಕಾ ಕೇವಲ 2 ರನ್‌ನಿಂದ ಕೈಚೆಲ್ಲಿತು. ಮೊದಲ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಇಂದಿನ ಪಂದ್ಯದಲ್ಲಿ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 206 ರನ್ ಸಿಡಿಸಿ ಅಬ್ಬರಿಸಿದೆ.

Follow Us:
Download App:
  • android
  • ios