Asianet Suvarna News Asianet Suvarna News

IND vs SL ಹ್ಯಾಟ್ರಿಕ್ ನೋ ಬಾಲ್, ಟ್ರೋಲ್‌ಗೆ ಗುರಿಯಾದ ವೇಗಿ ಅರ್ಶದೀಪ್!

ಶ್ರೀಲಂಕಾ ವಿರುದ್ದದ 2ನೇ ಹಾಗೂ ಮಹತ್ವದ ಟಿ20 ಪಂದ್ಯದಲ್ಲಿ ಶ್ರೀಲಂಕಾ ದಿಟ್ಟ ಹೋರಾಟ ಭಾರತದ ತಲೆನೋವಿಗೆ ಕಾರಣವಾಗಿದೆ. ಇದರ ಜೊತೆಗೆ ವೇಗಿ ಅರ್ಶದೀಪ್ ಹ್ಯಾಟ್ರಿಕ್ ನೋ ಬಾಲ್ ಎಸೆದಿದ್ದು, ಟ್ರೋಲಿಗೆ ಆಹಾರವಾಗಿದ್ದಾರೆ.
 

IND vs SL T20 Netizens trolls Arshdeep Singh for hattrick no ball says jasprit Bumrah successor ckm
Author
First Published Jan 5, 2023, 7:58 PM IST

ಪುಣೆ(ಜ.05): ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಲೆಕ್ಕಾಚಾರ ಉಲ್ಟಾ ಆಗಿದೆ. ಟಾಸ್ ಗೆದ್ದು ಲಂಕಾ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಟೀಂ ಇಂಡಿಯಾ ತಲೆನೋವು ಹೆಚ್ಚಿಸಿದೆ. ಲಂಕಾ ದಿಟ್ಟ ಹೋರಾಟಕ್ಕೆ ಬ್ರೇಕ್ ಹಾಕಲು ಟೀಂ ಇಂಡಿಯಾ ಹೆಣಗಾಡುತ್ತಿದೆ. ಇದರ ನಡುವೆ ವೇಗಿ ಅರ್ಶದೀಪ್ ಸಿಂಗ್ ಹ್ಯಾಟ್ರಿಕ್ ನೋ ಬಾಲ್ ಎಸೆದಿದ್ದಾರೆ. ಇದು ಅಭಿಮಾನಿಗಳನ್ನು ಕೆರಳಿಸಿದೆ. ನೋ ಬಾಲ್‌ನಲ್ಲೂ ಹ್ಯಾಟ್ರಿಕ್ ಸಾಧನೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಅರ್ಶದೀಪ್ ಸಿಂಗ್ ತಮ್ಮ ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್ ನೋ ಬಾಲ್ ಸೇರಿ ಒಟ್ಟು 19 ರನ್  ನೀಡಿದ್ದಾರೆ. ಈ ಮೂಲಕ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.

ಲಂಕಾ ವಿರುದ್ದಧ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ ಅರ್ಶದೀಪ್ ಸಿಂಗ್, ನಿರೀಕ್ಷಿತ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅರ್ಶದೀಪ್ ಓವರ್‌ನಿಂದ ಭಾರತ ರನ್ ಬಿಟ್ಟುಕೊಟ್ಟಿತು. ಇತ್ತ ಶ್ರೀಲಂಕಾ ಅತ್ಯುತ್ತಮ ಜೊತೆಯಾಟದ ಮೂಲಕ ಟೀಂ ಇಂಡಿಯಾದಲ್ಲಿ ಆತಂಕ ಸೃಷ್ಟಿಸಿತು. ಹ್ಯಾಟ್ರಿಕ್ ನೋ ಬಾಲ್ ಎಸೆದ ಅರ್ಶದೀಪ್ ಇದೀಗ ಟ್ರೋಲ್‌ಗೆ ಗುರಿಯಾಗಿದ್ದಾರೆ.

IND vs SL 2ನೇ ಟಿ20 ಪಂದ್ಯ, ಟಾಸ್ ಗೆದ್ದ ಟೀಂ ಇಂಡಿಯಾ, ತಂಡದಲ್ಲಿ ಮಹತ್ವದ ಬದಲಾವಣೆ!

ಅರ್ಶದೀಪ್ ಸಿಂಗ್ ಇದೀಗ ಜಸ್ಪ್ರೀತ್ ಬುಮ್ರಾರನ್ನೂ ಮೀರಿಸಿದ್ದಾರೆ. ಬುಮ್ರಾ ಡೆತ್ ಓವರ್‌ನಲ್ಲಿ ನೋ ಬಾಲ್ ಎಸೆಯುತ್ತಾರೆ. ಅರ್ಶದೀಪ್ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ನೋ ಬಾಲ್ ಎಸೆಯುತ್ತಾರೆ ಎಂದು ಟ್ರೋಲ್ ಮಾಡಿದ್ದಾರೆ. 

 

 

ಟೀಂ ಇಂಡಿಯಾದ ತಪ್ಪುಗಳಿಂದ ಲಾಭ ಪಡೆದ ಶ್ರೀಲಂಕಾ ಆರಂಭದಿಂದಲೇ ಅಬ್ಬರಿಸಿತು. ಪಥುಮ್ ನಿಸಂಕಾ ಹಾಗೂ ಕುಸಾಲ್ ಮೆಂಡೀಸ್ ಜೊತೆಯಾಟಕ್ಕೆ ಭಾರತ ಸುಸ್ತಾಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ ಕುಸಾಲ್ ಮೆಂಡೀಸ್ 31 ಎಸೆತದಲ್ಲಿ 52 ರನ್ ಸಿಡಿಸಿದರು.ನಿಸಂಕ ಹಾಗೂ ಮೆಂಡೀಸ್ ಜೋಡಿ 80  ರನ್ ಜೊತೆಯಾಟ ನೀಡಿತು. ಇವರ ಜೊತೆಯಾಟಕ್ಕೆ ಯಜುವೇಂದ್ರ ಚಹಾಲ್ ಬ್ರೇಕ್ ಹಾಕಿದರು.

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡ, ಅಕ್ಸರ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಅರ್ಶದೀಪ್ ಸಿಂಗ್, ಯುದವೇಂದ್ರ ಚಹಾಲ್ 

ಶ್ರೀಲಂಕಾ ಪ್ಲೇಯಿಂಗ್ 11
ಪಥುಮ್ ನಿಸಂಕ, ಕುಸಾಲ್ ಮೆಂಡೀಸ್, ಧನಂಜಯ ಡಿ ಸಿಲ್ವ, ಚಾರಿತ್ ಅಸಲಂಕ, ಭಾನುಕಾ ರಾಜಪಕ್ಸ, ದಸೂನ್ ಶನಕ(ನಾಯಕ), ವಾನಿಂಡು ಹಸರಂಗ, ಚಮಿಕ ಕರುಣಾರತ್ನೆ, ಮಹೀಶ್ ತೀಕ್ಷಾನ, ಕಸೂನ್ ರಾಜಿತ, ದಿಲ್ಶಾನ್ ಮಧುಶಂಕ
 

Follow Us:
Download App:
  • android
  • ios