Asianet Suvarna News Asianet Suvarna News

ಭಾರತ ಶ್ರೀಲಂಕಾ 3ನೇ ಪಂದ್ಯಕ್ಕೂ ಮುನ್ನ ಬೆಂಗಳೂರಿಗೆ ಮರಳಿದ ಕೋಚ್ ದ್ರಾವಿಡ್!

ಭಾರತ ಹಾಗೂ ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿದರೆ, ಕೋಚ್ ರಾಹುಲ್ ದ್ರಾವಿಡ್ ಪ್ರತ್ಯೇಕ ವಿಮಾನದಲ್ಲಿ ಬೆಂಗಳೂರಿಗೆ ಮರಳಿದ್ದಾರೆ. 

IND vs SL ODI coach Rahul dravid returns to bengaluru due to general health checkup ckm
Author
First Published Jan 13, 2023, 7:10 PM IST

ಬೆಂಗಳೂರು(ಜ.13): ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಅಂತಿಮ ಏಕದಿನ ಪಂದ್ಯ ಜನವರಿ 15 ರಂದು ನಡೆಯಲಿದೆ. ಈಗಾಗಲೇ ಆರಂಭಿಕ 2 ಪಂದ್ಯ ಗೆದ್ದು ಸರಣಿ ಕೈವಶ ಮಾಡಿರುವ ಟೀಂ ಇಂಡಿಯಾ, ಕ್ಲೀನ್ ಸ್ವೀಪ್ ಲೆಕ್ಕಾಚಾರದಲ್ಲಿದೆ. ಕೋಲ್ಕತಾ ಪಂದ್ಯ ಗೆದ್ದ ಟೀಂ ಇಂಡಿಯಾ ಇದೀಗ ಅಂತಿಮ ಪಂದ್ಯಕ್ಕಾಗಿ ತಿರುವನಂತಪುರಂಕ್ಕೆ ಪ್ರಯಾಣ ಬೆಳೆಸಿದೆ. ಆದರೆ ಟೀಂ ಇಂಡಿಯಾ ಜೊತೆ ಕೋಚ್ ರಾಹುಲ್ ದ್ರಾವಿಡ್ ಪ್ರಯಾಣ ಮಾಡಿಲ್ಲ. ರಾಹುಲ್ ದ್ರಾವಿಡ್ ಕೋಲ್ಕತಾದಿಂದ ನೇರವಾಗಿ ಬೆಂಗಳೂರಿಗೆ ಮರಳಿದ್ದಾರೆ. 2ನೇ ಏಕದಿನ ಪಂದ್ಯದ ವೇಳೆ ರಾಹುಲ್ ದ್ರಾವಿಡ್‌ಗೆ ರಕ್ತದ ಒತ್ತಡದ ಸಮಸ್ಯೆ ಕಾಣಿಸಿಕೊಂಡಿತ್ತು. ವೈದ್ಯಕೀಯ ತಂಡ ತಪಾಸಣೆ ಮಾಡಿತ್ತು. ಇದೀಗ ಜನರಲ್ ಚೆಕ್ಅಪ್‌ಗಾಗಿ ರಾಹುಲ್ ದ್ರಾವಿಡ್ ಬೆಂಗಳೂರಿಗೆ ಮರಳಿದ್ದಾರೆ. 

ರಾಹುಲ್ ದ್ರಾವಿಡ್ ಆರೋಗ್ಯ ಉತ್ತಮವಾಗಿದೆ. ಯಾವುದೇ ಆತಂಕವಿಲ್ಲ. ಸಾಮಾನ್ಯ ಚೆಕ್‌ಅಪ್‌ಗಾಗಿ ಬೆಂಗಳೂರಿಗೆ ಮರಳಿದ್ದಾರೆ. ಚೆಕ್ ಅಪ್ ಬಳಿಕ ಮತ್ತೆ ಟೀಂ ಇಂಡಿಯಾ ಸೇರಿಕೊಳ್ಳಲ್ಲಿದ್ದಾರೆ. ಕೋಲ್ಕತಾದಲ್ಲಿ ನಡೆದ 2ನೇ ಏಕದಿನ ಪಂದ್ಯದ ನಡುವೆ ರಾಹುಲ್ ದ್ರಾವಿಡ್ ರಕ್ತದೊತ್ತಡ ಸಮಸ್ಯೆ ಎದುರಿಸಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆಯ ವೈದ್ಯರ ತಂಡ ರಾಹುಲ್ ದ್ರಾವಿಡ್ ತಪಾಸಣೆ ನಡೆಸಿದ್ದರು. 

ಸೋಲಿನಲ್ಲೂ ಭಾರತವನ್ನು ಹಿಂದಿಕ್ಕಿದ ಶ್ರೀಲಂಕಾ, ಏಕದಿನದಲ್ಲಿ ಸಿಂಹಳೀಯರಿಗೆ ಅಪಖ್ಯಾತಿ!

2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿತ್ತು. 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಎರಡು ದಿನಗಳ ಕಾಲಾವಕಾಶವಿದೆ. ಇದರ ನಡುವೆ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ಆರೋಗ್ಯ ತಪಾಸಣೆ ನಡೆಸಿ ಮತ್ತೆ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಜನವರಿ 15 ರಂದು ತಿರುವನಂತಪುರಂನಲ್ಲಿ 3ನೇ ಪಂದ್ಯ ನಡೆಯಲಿದೆ.

 

 

2ನೇ ಪಂದ್ಯದಲ್ಲಿ ರಾಹುಲ್ ಹೋರಾಟಕ್ಕೆ ಸಿಕ್ಕಿದ ಗೆಲುವು
ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದರೂ, ಗುರುವಾರದ 2ನೇ ಪಂದ್ಯದಲ್ಲಿ ಗೆಲುವಿಗಾಗಿ ರೋಹಿತ್‌ ಶರ್ಮಾ ಪಡೆ ಹೆಚ್ಚಿನ ಪರಿಶ್ರಮ ವಹಿಸಬೇಕಾಯಿತು. 216 ರನ್‌ಗಳ ಸಣ್ಣ ಗುರಿ ಬೆನ್ನತ್ತಿದ ಭಾರತ, 43.2 ಓವರಲ್ಲಿ 4 ವಿಕೆಟ್‌ ಉಳಿಸಿಕೊಂಡು ಜಯಿಸಿತು. ಭಾರತ ಸಾಧಾರಣ ಆರಂಭ ಪಡೆಯಿತು. ಆದರೆ 86 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕೆ.ಎಲ್‌.ರಾಹುಲ್‌ ಹಾಗೂ ಹಾರ್ದಿಕ್‌ ಪಾಂಡ್ಯ(36) ಆಸರೆಯಾದರು. 5ನೇ ವಿಕೆಟ್‌ಗೆ ಇವರಿಬ್ಬರ ನಡುವೆ 75 ರನ್‌ ಜೊತೆಯಾಟ ಮೂಡಿಬಂತು. ಅಕ್ಷರ್‌(21) ಜೊತೆ 30 ರನ್‌ ಸೇರಿಸಿದ ರಾಹುಲ್‌, ಕೊನೆಯಲ್ಲಿ ಕುಲ್ದೀಪ್‌(10) ಜೊತೆ ಮುರಿಯದ 7ನೇ ವಿಕೆಟ್‌ಗೆ 28 ರನ್‌ ಕಲೆಹಾಕಿ ತಂಡವನ್ನು ಜಯದ ದಡ ಸೇರಿಸಿದರು. ರಾಹುಲ್‌ 103 ಎಸೆತದಲ್ಲಿ 64 ರನ್‌ ಗಳಿಸಿ ಔಟಾಗದೆ ಉಳಿದರು. 

ಆತಂಕದ ನಡುವೆ ರಾಹುಲ್ ಹೋರಾಟ, 2ನೇ ಏಕದಿನ ಗೆದ್ದು ಸರಣಿ ಕೈವಶ ಮಾಡಿದ ಭಾರತ!

ಭಾರತ ವಿರುದ್ಧ ಕೊನೆ ಬಾರಿಗೆ ಶ್ರೀಲಂಕಾ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿದ್ದು 1997ರಲ್ಲಿ. ಇದು ಭಾರತಕ್ಕೆ ಲಂಕಾ ವಿರುದ್ಧ ಸತತ 10ನೇ ಸರಣಿ ಜಯ. 1997ರ ಜಯದ ಬಳಿಕ ಲಂಕಾ, ಭಾರತ ವಿರುದ್ಧ 2 ಸರಣಿಗಳನ್ನು ಡ್ರಾ ಮಾಡಿಕೊಳ್ಳಲಷ್ಟೇ ಯಶಸ್ವಿಯಾಗಿದೆ.
 

Follow Us:
Download App:
  • android
  • ios