ಸೋಲಿನಲ್ಲೂ ಭಾರತವನ್ನು ಹಿಂದಿಕ್ಕಿದ ಶ್ರೀಲಂಕಾ, ಏಕದಿನದಲ್ಲಿ ಸಿಂಹಳೀಯರಿಗೆ ಅಪಖ್ಯಾತಿ!
ಭಾರತ ವಿರುದ್ಧದ 2ನೇ ಏಕದಿನ ಸೋಲು ಕಂಡ ಶ್ರೀಲಂಕಾ ಅಪಖ್ಯಾತಿಗೆ ಗುರಿಯಾಗಿದೆ. ಗರಿಷ್ಠ ಸೋಲು ಕಂಡ ತಂಡಗಳ ಪೈಕಿ ಮೊದಲ ಸ್ಥಾನ ಅಲಂಕರಿಸಿದೆ.
ಕೋಲ್ಕತಾ(ಜ.12): ಟೀಂ ಇಂಡಿಯಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಶ್ರೀಲಂಕಾಗೆ ಆಘಾತವಾಗಿದೆ. 216ರನ್ ಡಿಫೆಂಡ್ ಮಾಡಿಕೊಳ್ಳುವ ವಿಶ್ವಾಸದಲ್ಲಿದ್ದ ಶ್ರೀಲಂಕಾ ನಿರೀಕ್ಷೆ ತಕ್ಕೆ ಬೌಲಿಂಗ್ ಪ್ರದರ್ಶನ ನೀಡಿತ್ತು. ಆದರೆ ಕೆಎಲ್ ರಾಹುಲ್ ಹೋರಾಟ ಲಂಕಾ ತಂಡದ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿತು. ಅಜೇಯ 64 ರನ್ ಸಿಡಿಸಿ ಭಾರತಕ್ಕೆ 4 ವಿಕೆಟ್ ಗೆಲುವು ತಂದುೊಕೊಟ್ಟರು. ಈ ಸೋಲಿನಿಂದ ಶ್ರೀಲಂಕಾ ಭಾರತ ವಿರುದ್ಧದ ಏಕದಿನ ಸರಣಿ ಕೈಚೆಲ್ಲಿತು. ಇಷ್ಟೇ ಅಲ್ಲ ಗರಿಷ್ಠ ಏಕದಿನ ಸೋಲು ಕಂಡ ತಂಡ ಅನ್ನೋ ಅಪಖ್ಯಾತಿಗೆ ಗುರಿಯಾಯಿತು. ಏಕದಿನದಲ್ಲಿ ಶ್ರೀಲಂಕಾ 437 ಸೋಲು ಕಂಡಿದೆ. ಈ ಮೂಲಕ 436 ಸೋಲು ಕಂಡಿದ್ದ ಭಾರತವನ್ನು ಹಿಂದಿಕ್ಕಿದೆ.
ಗರಿಷ್ಠ ಸೋಲಿನ ಅಪಖ್ಯಾತಿ
ಏಕದಿನ: 437 ಸೋಲು (ಶ್ರೀಲಂಕಾ)
ಟಿ20: 94 ಸೋಲು(ಶ್ರೀಲಂಕಾ)
ಒಂದು ತಂಡದ ವಿರುದ್ದ ಗರಿಷ್ಠ ಸೋಲು ಅನುಭವಿಸಿದ ಪೈಕಿಯೂ ಶ್ರೀಲಂಕಾ ಅಪಖ್ಯಾತಿಗೆ ಗುರಿಯಾಗಿದೆ. ಕೋಲ್ಕತಾ ಪಂದ್ಯ ಕೈಚೆಲ್ಲುವ ಮೂಲಕ ಭಾರತ ವಿರುದ್ಧ ಏಕದಿನ ಪಂದ್ಯದಲ್ಲಿ 95ನೇ ಸೋಲು ಕಂಡಿದೆ. ಶ್ರೀಲಂಕಾ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧವೂ 95 ಸೋಲು ಕಂಡಿದೆ. ಇನ್ನು ಟಿ20ಯಲ್ಲಿ ಭಾರತ ವಿರುದ್ಧ 19 ಸೋಲು ಕಂಡಿದೆ.
ಆತಂಕದ ನಡುವೆ ರಾಹುಲ್ ಹೋರಾಟ, 2ನೇ ಏಕದಿನ ಗೆದ್ದು ಸರಣಿ ಕೈವಶ ಮಾಡಿದ ಭಾರತ!
2ನೇ ಏಕದಿನ ಪಂದ್ಯ
ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ದಿಟ್ಟ ಹೋರಾಟ ನೀಡಿ ಗೆಲುವು ದಾಖಲಿಸಿದೆ. 216 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ರೋಹಿತ್ ಶರ್ಮಾ 17 ರನ್ ಸಿಡಿಸಿ ನಿರ್ಗಮಿಸಿದರೆ, ಶುಭಮನ್ ಗಿಲ್ 21 ರನ್ ಕಾಣಿಕೆ ನೀಡಿದರು. ಇನ್ನು ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 4 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ 28 ರನ್ ಕಾಣಿಕೆ ನೀಡಿದರು. ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಕುಸಿದ ತಂಡಕ್ಕೆ ಆಸರೆಯಾದರು. ಇಬ್ಬರ ಜೊತೆಯಾಟದಿಂದ ಟೀಂ ಇಂಡಿಯಾ ಮತ್ತೆ ಚೇಸಿಂಗ್ ಆತ್ಮವಿಸ್ವಾಸ ಹೆಚ್ಚಾಯಿತು.
ಹಾರ್ದಿಕ್ ಪಾಂಡ್ಯ 36 ರನ್ ಸಿಡಿಸಿ ಔಟಾದರು. ಆದರೆ ಕೆಎಲ್ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ತಂಡದ ಜಬಾವ್ದಾರಿ ಸಂಪೂರ್ಣವಾಗಿ ಹೊತ್ತುಕೊಂಡರು. ಇತ್ತ ಅಕ್ಸರ್ ಪಟೇಲ್ ಉತ್ತಮ ಸಾಥ್ ನೀಡಿದರು. ಅಕ್ಸರ್ 21 ರನ್ ಸಿಡಿಸಿ ನಿರ್ಗಿಸಿದರು. ಬಳಿಕ ಕುಲ್ದೀಪ್ ಯಾದವ್ ಜೊತೆ ಸೇರಿದ ಕೆಲ್ ರಾಹುಲ್ ಟೀಂ ಇಂಡಿಯಾದ ಆತಂಕ ದೂರ ಮಾಡಿದರು. ಈ ಮೂಲಕ ಟೀಂ ಇಂಡಿಯಾ 43.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ದಾಖಸಿತು. ಕೆಎಲ್ ರಾಹುಲ್ ಅಜೇಯ 64 ರನ್ ಸಿಡಿಸಿದರು.