Asianet Suvarna News Asianet Suvarna News

IND vs SL T20 ಹೂಡ ಹೋರಾಟ, ಲಂಕಾ ವಿರುದ್ದ ಸ್ಪರ್ಧಾತ್ಮಕ ಮೊತ್ತ ಸಿಡಿಸಿದ ಭಾರತ!

ಅಂತಿಮ ಹಂತದಲ್ಲಿ ದೀಪಕ್ ಹೂಡ ಹಾಗೂ ಅಕ್ಸರ್ ಪಟೇಲ್ ಹೋರಾಟದಿಂದ ಟೀಂ ಇಂಡಿಯಾ ಲಂಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. 

IND vs SL Ishan Kishan Deepak Hooda help team India to set 163 run target to Sri lanka in 1st t20 ckm
Author
First Published Jan 3, 2023, 8:43 PM IST

ಮುಂಬೈ(ಜ.03): ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಆರಂಭದಲ್ಲೇ ಕುತೂಹಲ ಹೆಚ್ಚಿಸಿದೆ. ಬ್ಯಾಟಿಂಗ್ ಮೂಲಕ ಅಬ್ಬರಿಸಲು ಕಣಕ್ಕಿಳಿದ ಟೀಂ ಇಂಡಿಯಾ ಆರಂಭದಲ್ಲಿ ಎದುರಾಳಿಗಳ ದಾಳಿಗೆ ತತ್ತರಿಸಿದೆ. ಆರಂಭಿಕ ಇಶಾನ್ ಕಿಶನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಹೋರಾಟ ಸಾಕಾಗಲಿಲ್ಲ. ಇತರರು ಅಬ್ಬರಿಸಲು ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ದೀಪಕ್ ಹೂಡ ಹಾಗೂ ಅಕ್ಸರ್ ಪಟೇಲ್ ಹೋರಾಟದಿಂದ ಭಾರತ 5 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಶುಭಮನ್ ಗಿಲ್ 7 ರನ್ ಸಿಡಿಸಿ ಔಟಾದರು. 27 ರನ್‌ಗಳಿಗೆ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ ಹೋರಾಟ ಮುಂದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಸೂರ್ಯಕುಮಾರ್ ಯಾದವ್ 7 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಸಂಜು ಸ್ಯಾಮ್ಸನ್ ಕೇವಲ 5 ರನ್ ಸಿಡಿಸಿ ನಿರಾಸೆ ಅನುಭವಿಸಿದರು. 

ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್, 2ನೇ ಓವರ್‌ನಲ್ಲಿ 5 ವಿಕೆಟ್, ದಾಖಲೆ ಬರೆದ ಜಯದೇವ್

ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಹೋರಾಟ ಟೀಂ ಇಂಡಿಯಾಗೆ ಚೇತರಿಕೆ ನೀಡಿತು. ಆದರೆ ಇವರ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಕಿಶನ್ 29 ಎಸೆತದಲ್ಲಿ 37 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ 29 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ದೀಪಕ್ ಹೂಡ ಹಾಗೂ ಅಕ್ಸರ್ ಪಟೇಲ್ ಹೋರಾಟ ನಡೆಸಿದರು. ಈ ಮೂಲಕ ಅಲ್ಪ ಮೊತ್ತ ಭೀತಿಯಿಂದ ಟೀಂ ಇಂಡಿಯಾ ಪಾರಾಯಿತು.

ದೀಪಕ್ ಹೂಡ ಹಾಗೂ ಅಕ್ಸರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹೂಡ 23 ಎಸೆತದಲ್ಲಿ ಅಜೇಯ 41 ರನ್ ಸಿಡಿಸಿದರು. ಇತ್ತ ಅಕ್ಸರ್ ಪಟೇಲ್ 20 ಎಸೆತದಲ್ಲಿ 30 ರನ್ ಸಿಡಿಸಿದರು. ಈ ಮೂಲಕ 5 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ದೀಪಕ್ ಹೂಡ ಹಾಗೂ ಅಕ್ಸರ್ ಪಟೇಲ್ ಆತಂಕ ದೂರ ಮಾಡಿದರು. ಹೂಡ 178ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಇನ್ನು ಅಕ್ಸರ್ ಪಟೇಲ್ 155ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. 

ಅಂತಿಮ ಕ್ಷಣದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ, ಶ್ರೀಲಂಕಾ ಸರಣಿಗೆ ಬುಮ್ರಾ

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ಶುಬಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡ, ಅಕ್ಸರ್ ಪಟೇಲ್, ಹರ್ಶಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯಜುವೇಂದ್ರ ಚಹಾಲ್

ಶ್ರೀಲಂಕಾ ಪ್ಲೇಯಿಂಗ್ 11
ಪ್ರಥುಮ್ ನಿಸಂಕ, ಕುಸಾಲ್ ಮೆಂಡೀಸ್, ಧನಂಜಯ ಡಿಸಿಲ್ವ, ಚಾರಿತ್ ಅಸಲಂಕ, ಭಾನುಕ ರಾಜಪಕ್ಸ, ದಸೂನ್ ಶನಕ(ನಾಯಕ), ವಾನಿಂಡು ಹಸರಂಗ, ಚಮಿಕ ಕರುಣಾರತ್ನೆ, ಮಹೀಶ ತೀಕ್ಷಾನ, ಕಸೂನ್ ರಾಜಿತ, ದಿಲ್ಶಾನ್ ಮಧುಶಂಕ

Follow Us:
Download App:
  • android
  • ios