ಲಂಕಾ ತಂಡವನ್ನು 91 ರನ್‌ಗಳಿಂದ ಮಣಿಸಿದ ಟೀಂ ಇಂಡಿಯಾ ಟಿ20 ಸರಣಿ ಕೈವಶ ಮಾಡಿದೆ.
ರಾಜ್‌ಕೋಟ್(ಜ.07): ಸೂರ್ಯಕುಮಾರ್ ಯಾದವ್ ಸ್ಫೋಟಕ ಸೆಂಚುರಿ, ಬೌಲರ್‌ಗಳ ದಿಟ್ಟ ಹೋರಾಟ ಶ್ರೀಲಂಕಾ ತಂಡವನ್ನೇ ಬೆಚ್ಚಿ ಬೀಳಿಸಿದೆ. ಪರಿಣಾಮ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶ್ರೀಲಂಕಾ 16.4 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಯಿತು.
ಟೀಂ ಇಂಡಿಯಾ 91 ರನ್ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 2-1 ಅಂತರದಲ್ಲಿ ಭಾರತ ಟಿ20 ಸರಣಿ ವಶಪಡಿಸಿಕೊಂಡಿದೆ.
ಸೂರ್ಯಕುಮಾರ್ ಯಾದವ್ ಅಜೇಯ 112 ರನ್‌ನಿಂದ ಭಾರತ 228 ರನ್ ಸಿಡಿಸಿತ್ತು. ಈ ಬೃಹತ್ ಟಾರ್ಗೆಟ್ ಚೇಸ್ ಮಾಡಲು ಶ್ರೀಲಂಕಾಗೆ ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಲಂಕಾ ತತ್ತರಿಸಿತು. ಪಥುಮ್ ನಿಸಂಕ 15 ರನ್ ಸಿಡಿಸಿ ಔಟಾದರು. ಇತ್ತ ಕುಸಾಲ್ ಮೆಂಡೀಸ್ 23 ರನ್ ಸಿಡಿಸಿ ಔಟಾದರು. ಆವಿಷ್ಕಾ ಫರ್ನಾಂಡೋ 1 ರನ್ ಸಿಡಿಸಿ ಔಟಾದರು.
ಧನಂಜಯ್ ಡಿಸಿಲ್ವ 22 ರನ್ ಕಾಣಿಕೆ ನೀಡಿದರು. ಚಾರಿತ್ ಅಸಲಂಕ 19 ರನ್ ಸಿಡಿಸಿ ನಿರ್ಗಮಿಸಿದರು. ಕಳೆದೆರಡು ಪಂದ್ಯದಲ್ಲಿ ಅಬ್ಬರಿಸಿದ ನಾಯ ದಸೂನ್ ಶನಕ ಈ ಪಂದ್ಯದಲ್ಲಿ ಅಬ್ಬರಿಸಿಲ್ಲ. ಇದು ಶ್ರೀಲಂಕಾ ತಂಡಕ್ಕೆ ತೀವ್ರ ಹಿನ್ನಡೆ ತಂದಿದೆ.
ಅಂತಿಮವಾಗಿ ಶ್ರೀಲಂಕಾ 16.4 ಓವರ್‌ಗಳಲ್ಲಿ 137 ರನ್ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಭಾರತ 91 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
