ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಆರಂಭಗೊಂಡಿದೆ. ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತ ಟೀಂ ಇಂಡಿಯಾಗೆ ಇಬ್ಬರು ಪದಾರ್ಪಣೆ ಮಾಡಿದ್ದಾರೆ. 

ಮುಂಬೈ(ಜ.03): ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಲಂಕಾ ತಂಡದ ಬ್ಯಾಟಿಂಗ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದಿನ ಸರಣಿಗಳಲ್ಲಿ ಆಡಿದ ತಂಡವನ್ನೇ ಉಳಿಸಿಕೊಂಡಿದೆ. ಆದರೆ ಬೌಲಿಂಗ್‌ನಲ್ಲಿ ಕೆಲ ಬದಲಾವಣೆ ಮಾಡಿದೆ. ಆದರೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಿವೆ. ಶುಭಮನ್ ಗಿಲ್ ಹಾಗೂ ಶಿವಂ ಮಾವಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ವೇಗಿ ಅರ್ಶದೀಪ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ. ಡ್ಯೂ ಫ್ಯಾಕ್ಟರ್ ಕಾರಣ ಟಾಸ್ ಗದ್ದು ಬೌಲಿಂಗ್ ಆಯ್ಕೆ ಉತ್ತಮವಾಗಿದೆ. ಬ್ಯಾಟಿಂಗ್ ವಿಕೆಟ್ ಇರುವುದರಿಂದ ಉತ್ತಮ ಮೊತ್ತ ದಾಖಲಿಸಿ, ಟೀಂ ಇಂಡಿಯಾವನ್ನು ಕಟ್ಟಿಹಾಕಲು ಪ್ರಯತ್ನ ಮಾಡುತ್ತೇವೆ ಎಂದು ಲಂಕಾ ನಾಯಕ ದಸೂನ್ ಹೇಳಿದ್ದಾರೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ಶುಬಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡ, ಅಕ್ಸರ್ ಪಟೇಲ್, ಹರ್ಶಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯಜುವೇಂದ್ರ ಚಹಾಲ್

ಅಂತಿಮ ಕ್ಷಣದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ, ಶ್ರೀಲಂಕಾ ಸರಣಿಗೆ ಬುಮ್ರಾ ವಾಪಸ್!

ಶ್ರೀಲಂಕಾ ಪ್ಲೇಯಿಂಗ್ 11
ಪ್ರಥುಮ್ ನಿಸಂಕ, ಕುಸಾಲ್ ಮೆಂಡೀಸ್, ಧನಂಜಯ ಡಿಸಿಲ್ವ, ಚಾರಿತ್ ಅಸಲಂಕ, ಭಾನುಕ ರಾಜಪಕ್ಸ, ದಸೂನ್ ಶನಕ(ನಾಯಕ), ವಾನಿಂಡು ಹಸರಂಗ, ಚಮಿಕ ಕರುಣಾರತ್ನೆ, ಮಹೀಶ ತೀಕ್ಷಾನ, ಕಸೂನ್ ರಾಜಿತ, ದಿಲ್ಶಾನ್ ಮಧುಶಂಕ

ಬಿಗ್‌ 3’ ಎಂದು ಕರೆಸಿಕೊಳ್ಳುವ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌ ಸೇರಿ ಇನ್ನೂ ಕೆಲ ಹಿರಿಯ ಆಟಗಾರರಿಲ್ಲದ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದಾರೆ. ಭಾರತದ ಮುಂದಿನ ಟಿ20 ನಾಯಕ ಎಂದು ಗುರುತಿಸಿಕೊಂಡಿರುವ ಹಾರ್ದಿಕ್‌ ಸುತ್ತ 2024ರ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟಲು ಹೊರಟಿರುವ ಬಿಸಿಸಿಐಗೆ ಇದೂ ಸೇರಿ ಮುಂದಿನ ಕೆಲ ಸರಣಿಗಳಲ್ಲಿ ಒಂದಷ್ಟುಚಿತ್ರಣ ಸಿಗಲಿದೆ.

ಏಕದಿನ ವಿಶ್ವಕಪ್‌ ವರ್ಷದಲ್ಲಿ ದ್ವಿಪಕ್ಷೀಯ ಟಿ20 ಸರಣಿ ಅಷ್ಟುಸಮಂಜಸವಲ್ಲದಿದ್ದರೂ ಮುಂದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಇಂತಹ ಟೂರ್ನಿಗಳು ಅವಶ್ಯಕ. ಈ ನಿಟ್ಟಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರಿಗೆ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಲು ಇದು ಉತ್ತಮ ವೇದಿಕೆ ಎನಿಸಿದೆ. ‘ಬಿಗ್‌ 3’ ಮಾತ್ರವಲ್ಲ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಆರ್‌.ಅಶ್ವಿನ್‌, ಮೊಹಮದ್‌ ಶಮಿ ಹಾಗೂ ಜಸ್‌ಪ್ರೀತ್‌ ಬೂಮ್ರಾ ಕೂಡ ಈ ಸರಣಿಯಲ್ಲಿ ಆಡುತ್ತಿಲ್ಲ.

ICC ಏಕದಿನ ವಿಶ್ವಕಪ್‌ಗೆ BCCI ಆಯ್ಕೆ ಮಾಡಿದ ಭಾರತ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ..?

ಲಂಕಾ ರೆಡಿ: ಟಿ20 ವಿಶ್ವಕಪ್‌ ಬಳಿಕ ಶ್ರೀಲಂಕಾ ತಂಡ ಟಿ20 ಪಂದ್ಯಗಳನ್ನಾಡದಿದ್ದರೂ ತಂಡದಲ್ಲಿರುವ ಬಹುತೇಕರು ಕಳೆದ ತಿಂಗಳು ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ್ದಾರೆ. ದಸುನ್‌ ಶಾನಕ ನೇತೃತ್ವದ ಲಂಕಾ ತಂಡ ಸಮತೋಲನದಿಂದ ಕೂಡಿದೆ. ವಾನಿಂಡು ಹಸರಂಗ ತಂಡದ ಸ್ಪಿನ್‌ ಅಸ್ತ್ರವಾಗಿ ಕಣಕ್ಕಿಳಿಯಲಿದ್ದಾರೆ. ಕೆಲ ಸ್ಫೋಟಕ ಬ್ಯಾಟರ್‌ಗಳ ಬಲವೂ ತಂಡಕ್ಕಿದೆ.

ಒಟ್ಟು ಮುಖಾಮುಖಿ: 26
ಭಾರತ: 17
ಲಂಕಾ: 08
ಫಲಿತಾಂಶವಿಲ್ಲ: 01