ಹೊಸ ಮೈಂಡ್ಸೆಟ್ನೊಂದಿಗೆ ಕಣಕ್ಕಿಳಿಯಲು ವಿರಾಟ್ ರೆಡಿ..! 2024ರಲ್ಲೂ ಕೊಹ್ಲಿಗಾಗಿ ಕಾಯ್ತಿವೆ ದಾಖಲೆಗಳು..!
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮಕಾಡೆ ಮಲಗಿದ್ದ ಟೀಂ ಇಂಡಿಯಾ 2ನೇ ಟೆಸ್ಟ್‌ಗೆ ರೆಡಿಯಾಗ್ತಿದೆ. ವೈಟ್‌ವಾಶ್ ಮುಖಭಂಗದಿಂದ ಪಾರಾಗಬೇಕಾದ್ರೆ, ಈ ಪಂದ್ಯವನ್ನ ಗೆಲ್ಲಲೆಬೇಕಿದೆ. ಆದ್ರೆ, ಕೇಪ್‌ಟೌನ್ ಕದನದಲ್ಲಿ ಗೆಲ್ಲಬೇಕಂದ್ರೆ ರೋಹಿತ್ ಶರ್ಮಾ ಪಡೆಯು ಅದ್ಭುತ ಪ್ರದರ್ಶನ ನೀಡಬೇಕು. ಅದರಲ್ಲೂ ತಂಡದ ಬ್ಯಾಟರ್ಸ್ ಮಿಂಚಬೇಕು. ಹೀಗಾಗಿ ವಿರಾಟ್ ಕೊಹ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸಿದ್ದಾರೆ.
ಬೆಂಗಳೂರು(ಜ.02) ವಿರಾಟ್ ಕೊಹ್ಲಿ ಪಕ್ಕಾ ಕ್ಲಾಸ್ ಪ್ಲೇಯರ್. ಕ್ರಿಕೆಟಿಂಗ್ ಶಾಟ್ಸ್ ಮೂಲಕವೇ ಕೊಹ್ಲಿ ಅಬ್ಬರಿಸ್ತಾರೆ. ಆದ್ರೆ, ಕೊಹ್ಲಿ ತಮ್ಮ ಕಂಫರ್ಟ್ ಝೋನ್ನಿಂದ ಹೊರಬರಲು ನಿರ್ಧರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಹೊಸ ಮೈಂಡ್ಸೆಟ್ನೊಂದಿಗೆ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ಯಾವುದು ಹೊಸ ಮೈಂಡ್ಸೆಟ್ ಅಂತೀರಾ...? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಹೊಸ ಮೈಂಡ್ಸೆಟ್ನೊಂದಿಗೆ ಕಣಕ್ಕಿಳಿಯಲು ರೆಡಿ..!
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮಕಾಡೆ ಮಲಗಿದ್ದ ಟೀಂ ಇಂಡಿಯಾ 2ನೇ ಟೆಸ್ಟ್‌ಗೆ ರೆಡಿಯಾಗ್ತಿದೆ. ವೈಟ್‌ವಾಶ್ ಮುಖಭಂಗದಿಂದ ಪಾರಾಗಬೇಕಾದ್ರೆ, ಈ ಪಂದ್ಯವನ್ನ ಗೆಲ್ಲಲೆಬೇಕಿದೆ. ಆದ್ರೆ, ಕೇಪ್‌ಟೌನ್ ಕದನದಲ್ಲಿ ಗೆಲ್ಲಬೇಕಂದ್ರೆ ರೋಹಿತ್ ಶರ್ಮಾ ಪಡೆಯು ಅದ್ಭುತ ಪ್ರದರ್ಶನ ನೀಡಬೇಕು. ಅದರಲ್ಲೂ ತಂಡದ ಬ್ಯಾಟರ್ಸ್ ಮಿಂಚಬೇಕು. ಹೀಗಾಗಿ ವಿರಾಟ್ ಕೊಹ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸಿದ್ದಾರೆ.
ಅಮೂಲ್ಯ ವಸ್ತು ಕಳೆದುಕೊಂಡ ಡೇವಿಡ್ ವಾರ್ನರ್: ಕೈಮುಗಿದ ಕಳ್ಳನಿಗೆ ಬೇಡಿಕೊಂಡ ಆಸೀಸ್ ಓಪನರ್
ಸೆಂಚುರಿಯನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 38 ರನ್‌ಗಳ ಕಾಣಿಕೆ ನೀಡಿದ್ರು. ಎರಡನೇ ಇನ್ನಿಂಗ್ಸ್ನಲ್ಲಿ ಒಂದೆಡೆ ವಿಕೆಟ್ ಬೀಳ್ತಿದ್ರೂ, ಮತ್ತೊಂದು ಎಂಡ್ನಲ್ಲಿ ಗಟ್ಟಿಯಾಗಿ ನಿಂತು, 76 ರನ್‌ಗಳಿಸಿದ್ರು. ವಿರಾಟ್ ಕೊಹ್ಲಿ ಆಡದೇ ಹೋಗಿದ್ರೆ ಟೀಂ ಇಂಡಿಯಾ 100ರ ಗಡಿಯು ದಾಟುತ್ತಿರಲಿಲ್ಲ.
ಪ್ರಾಕ್ಟೀಸ್ ವೇಳೆ ಸಿಕ್ಸರ್‌ಗಳ ಸುರಿಮಳೆ..!
ವಿರಾಟ್ ಕೊಹ್ಲಿ ಪಕ್ಕಾ ಕ್ಲಾಸ್ ಪ್ಲೇಯರ್. ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಗ್ರೌಂಡ್ ಶಾಟ್‌ಗಳನ್ನೇ ಆಡ್ತಾರೆ. ಬೌಂಡರಿಗಳ ಮೂಲಕವೇ ರನ್‌ಗಳಿಸ್ತಾರೆ. ಸಿಕ್ಸ್ ಬಾರಿಸೋದು ತೀರಾ ಅಪರೂಪ. ಈವರೆಗು ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿರೋದು ಜಸ್ಟ್ 25 ಸಿಕ್ಸ್. ಆದ್ರೆ, ಇನ್ಮೇಲೆ ಸಿಕ್ಸ್ ಮೂಲಕವೂ ಅಬ್ಬರಿಸಲು ಕೊಹ್ಲಿ ರೆಡಿಯಾಗಿದ್ದಾರೆ. ಅದಕ್ಕಾಗಿ ನೆಟ್ಸ್ ಪ್ರಾಕ್ಟೀಸ್ ವೇಳೆ ಅಶ್ವಿನ್ ಬೌಲಿಂಗ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆಗೈದಿದ್ದಾರೆ.
ವಿದಾಯ ಟೆಸ್ಟ್‌ಗೂ ಮುನ್ನ ಏಕದಿನಕ್ಕೆ ಡೇವಿಡ್ ವಾರ್ನರ್ ಬೈಬೈ
Virat Kohli smashing sixes in the practice session. [Kushan Sarkar/PTI] pic.twitter.com/AQZOa6JgKj
— Johns. (@CricCrazyJohns) January 1, 2024
2024ರಲ್ಲೂ ಕೊಹ್ಲಿಗಾಗಿ ಕಾಯ್ತಿವೆ ದಾಖಲೆಗಳು..!
2023 ವಿರಾಟ್ ಕೊಹ್ಲಿ ಪಾಲಿಗೆ ಮರೆಯಲಾಗದ ವರ್ಷ. ಕಳೆದ ವರ್ಷ ತಮ್ಮ ವಿರಾಟರೂಪ ತೋರಿದ್ರು. ತಮ್ಮ ತಾಕತ್ತು ಎಂತದ್ದು ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ರು. ಕಳೆದೆರೆಡು ವರ್ಷ ಕುಸಿದಿದ್ದ ಕೊಹ್ಲಿ ಕರಿಯರ್ ಗ್ರಾಫ್, 2023ರಲ್ಲಿ ಈ ವರ್ಷ ಮತ್ತೆ ಮೇಲೇರಿತು. ಏಕದಿನ ಕ್ರಿಕೆಟ್ನಲ್ಲಿ 50 ಶತಕದ ಮೈಲಿಗಲ್ಲು ತಲುಪಿದ್ರು. ಅಲ್ಲದೇ, ಹಲವು ದಾಖಲೆಗಳನ್ನ ಬ್ರೇಕ್ ಮಾಡಿದ್ರು. 2024ರಲ್ಲೂ ದಾಖಲೆಗಳು ರನ್ಮಷಿಗಾಗಿ ಕಾಯುತ್ತಿವೆ.
ಕಿಂಗ್ ಕೊಹ್ಲಿ ಕಿರೀಟಕ್ಕೆ ಇನ್ನೊಂದು ಗರಿ: ಫುಟ್ಬಾಲ್ ಲೆಜೆಂಡ್ ಸೋಲಿಸಿ 2023ರ ಪ್ಯೂಬಿಟಿ ಅಥ್ಲೀಟ್ ಪ್ರಶಸ್ತಿ!
ಏಕದಿನ ಕ್ರಿಕೆಟ್ ಹಿಸ್ಟ್ರಿಯಲ್ಲಿ ಅತ್ಯಧಿಕ ರನ್‌ಗಳಿಸಿರೋ ಪಟ್ಟಿಯಲ್ಲಿ ಕೊಹ್ಲಿ ಸದ್ಯ 3ನೇ ಸ್ಥಾನದಲ್ಲಿದ್ದಾರೆ. 292 ಪಂದ್ಯಗಳಿಂದ 13,848 ರನ್ಗಳಿಸಿದ್ದಾರೆ. ಇನ್ನು 152 ರನ್‌ಗಳಿಸಿದ್ರೆ 14 ಸಾವಿರ ಪೂರೈಸಲಿದ್ದಾರೆ. ಇನ್ನು ಟಿ20ಯಲ್ಲಿ ಜಸ್ಟ್ 35 ರನ್‌ಗಳಿಸಿದ್ರೆ ಒಟ್ಟಾರೆ ಟಿ20ಯಲ್ಲಿ 12 ಸಾವಿರ ರನ್‌ಗಳಿಸಿದ ಮೊದಲ ಬ್ಯಾಟರ್ ಅನ್ನೋ ದಾಖಲೆಗೆ ಪಾತ್ರರಾಗಲಿದ್ದಾರೆ.
ಇವಷ್ಟೇ ಅಲ್ಲ, ಇನ್ನು ಅನೇಕ ದಾಖಲೆಗಳು ಕೊಹ್ಲಿಯಿಂದ ಬ್ರೇಕ್ ಆಗೋದು ಫಿಕ್ಸ್. ಅದೇನೆ ಇರಲಿ, ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಕೊಹ್ಲಿ ಶತಕದ ಕಹಳೆ ಮೊಳಗಿಸಲಿ. 2023ರಂತೆ 24ರಲ್ಲೂ ದಾಖಲೆಗಳನ್ನ ಬೇಟೆಯಾಡಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್