Ind vs SA: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸತತ 4ನೇ ಜಯ ದಾಖಲಿಸುತ್ತಾ ಭಾರತ..?
ಸೌತ್ ಆಫ್ರಿಕಾದ ಸೆಂಚುರಿಯನ್ನಲ್ಲಿ ಇಂದಿನಿಂದ ಭಾರತ-ಆಫ್ರಿಕಾ ತಂಡಗಳು ಮೊದಲ ಟೆಸ್ಟ್ನಲ್ಲಿ ಮುಖಾಮುಖಿಯಾಗ್ತಿವೆ. ಡಿಸೆಂಬರ್ 26ರಂದು ಟೆಸ್ಟ್ ಆರಂಭವಾಗ್ತಿರೋದ್ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗ್ತಿದೆ. ಆಫ್ರಿಕಾ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ, ಈಗ ಟೆಸ್ಟ್ ಸರಣಿಯನ್ನೂ ಗೆಲ್ಲಲು ಎದುರು ನೋಡ್ತಿದೆ. ಆದ್ರೆ ಆ ಎರಡು ಸರಣಿಗಳ ಸೋಲಿನ ಸೇಡಿಗೆ ಕಾಯ್ದು ಕುಳಿತಿವೆ ಹರಿಣಗಳು
ಬೆಂಗಳೂರು(ಡಿ.26): ಇಂದಿನಿಂದ ಭಾರತ-ಸೌತ್ ಆಫ್ರಿಕಾ ಟೆಸ್ಟ್ ಸರಣಿ ಆರಂಭವಾಗ್ತಿದೆ. ಇಂದು ಸೆಂಚುರಿಯನ್ನಲ್ಲಿ ಫಸ್ಟ್ ಟೆಸ್ಟ್ ಸ್ಟಾರ್ಟ್ ಆಗಲಿದೆ. ಇಂದಿನಿಂದ ಭಾರತದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಜರ್ನಿ ಸಹ ಆರಂಭ. ಟೀಂ ಇಂಡಿಯಾ ಆಫ್ರಿಕಾದಲ್ಲಿ ಮೊದಲ ಸಲ ಟೆಸ್ಟ್ ಸರಣಿ ಗೆಲ್ಲುತ್ತಾ ಅನ್ನೋ ಕುತೂಹಲವಿದೆ.
ಇಂದಿನಿಂದ ಭಾರತ-ಆಫ್ರಿಕಾ ಮೊದಲ ಟೆಸ್ಟ್
ಸೌತ್ ಆಫ್ರಿಕಾದ ಸೆಂಚುರಿಯನ್ನಲ್ಲಿ ಇಂದಿನಿಂದ ಭಾರತ-ಆಫ್ರಿಕಾ ತಂಡಗಳು ಮೊದಲ ಟೆಸ್ಟ್ನಲ್ಲಿ ಮುಖಾಮುಖಿಯಾಗ್ತಿವೆ. ಡಿಸೆಂಬರ್ 26ರಂದು ಟೆಸ್ಟ್ ಆರಂಭವಾಗ್ತಿರೋದ್ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗ್ತಿದೆ. ಆಫ್ರಿಕಾ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ, ಈಗ ಟೆಸ್ಟ್ ಸರಣಿಯನ್ನೂ ಗೆಲ್ಲಲು ಎದುರು ನೋಡ್ತಿದೆ. ಆದ್ರೆ ಆ ಎರಡು ಸರಣಿಗಳ ಸೋಲಿನ ಸೇಡಿಗೆ ಕಾಯ್ದು ಕುಳಿತಿವೆ ಹರಿಣಗಳು.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಇತಿಹಾಸವೇ ಒಂದು ರೋಚಕ: ಡಿಸೆಂಬರ್ 26ರಂದೇ ಆರಂಭವಾಗಲು ಕಾರಣವೇನು..?
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮೇಲೆ ಭಾರತ ಕಣ್ಣು
2021ರಲ್ಲಿ ಮೊದಲ ಬಾರಿಗೆ ಭಾರ-ಆಫ್ರಿಕಾ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಆಡಿದ್ವು. ಆ ಟೆಸ್ಟ್ ಅನ್ನ ಭಾರತ ಗೆದ್ದಿತ್ತು. ಹಾಗಾಗಿ ಈ ಸಲವೂ ಗೆಲ್ಲಲು ಪ್ಲಾನ್ ಮಾಡಿದೆ. ಭಾರತ ಆಡಿರುವ 10 ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮೂರು ಗೆದ್ದು ಐದನ್ನ ಸೋತು ಎರಡನ್ನ ಡ್ರಾ ಮಾಡಿಕೊಂಡಿದೆ. ಭಾರತೀಯರು ಇತಿಹಾಸ ವಿರುದ್ಧ ಈಜಬೇಕಿದೆ. ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಭಾರತ ಕಣ್ಣಿಟ್ಟಿದೆ. ಸತತ ಎರಡು ಸಲ ಫೈನಲ್ ಪ್ರವೇಶಿಸಿದ್ದ ಭಾರತೀಯರು, ಹ್ಯಾಟ್ರಿಕ್ ಸಾಧಿಸೋ ಛಲದಲ್ಲಿದ್ದಾರೆ. ಹಾಗಾಗಿ ಆಫ್ರಿಕಾ ಟೆಸ್ಟ್ ಸರಣಿ ಮಹತ್ವ ಪಡೆದಿದೆ.
6 ಬ್ಯಾಟರ್ಸ್, ಇಬ್ಬರು ಸ್ಪಿನ್ನರ್ಸ್, ಮೂವರು ವೇಗಿಗಳು..!
ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಸೀನಿಯರ್ ಪ್ಲೇಯರ್ಸ್ ಆಡ್ತಿರೋದು ಇದೇ ಮೊದಲು. ಕೀಪರ್ ಸೇರಿದಂತೆ ಆರು ಬ್ಯಾಟರ್ಸ್, ಇಬ್ಬರು ಸ್ಪಿನ್ನರ್ಸ್, ಮೂವರು ಫಾಸ್ಟ್ ಬೌಲರ್ಗಳೊಂದಿಗೆ ಆಡಲು ಟೀಂ ಇಂಡಿಯಾ ಸಿದ್ದತೆ ಮಾಡಿಕೊಂಡಿದೆ. ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಶುಬ್ಮನ್ ಗಿಲ್ 3, ವಿರಾಟ್ ಕೊಹ್ಲಿ 4, ಕೆಎಲ್ ರಾಹುಲ್ 5 ಮತ್ತು ಶ್ರೇಯಸ್ ಅಯ್ಯರ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
IPL 2024 ಪಾಂಡ್ಯಗಾಗಿ ಗುಜರಾತ್ ಟೈಟಾನ್ಸ್‌ಗೆ ಮುಂಬೈ ಇಂಡಿಯನ್ಸ್ ನೀಡಿದ್ದು ₹100 ಕೋಟಿ?
ಆಲ್ರೌಂಡರ್ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ನರ್ಸ್. ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ವೇಗಿಗಳು. ಮತ್ತೊಬ್ಬ ವೇಗಿ ಸ್ಥಾನಕ್ಕೆ ಪ್ರಸಿದ್ದ್ ಕೃಷ್ಣ, ಮುಕೇಶ್ ಕುಮಾರ್, ಶಾರ್ದೂಲ್ ಠಾಕೂರ್ ನಡ್ವೆ ಫೈಟ್ ಬಿದ್ದಿದೆ. ಆಕಸ್ಮಾತ್ ಪಿಚ್ ವೇಗಿಗಳಿಗೆ ನೆರವಾದ್ರೆ ಒಬ್ಬ ಸ್ಪಿನ್ನರ್, ನಾಲ್ವರು ಫಾಸ್ಟ್ ಬೌಲರ್ಗಳೊಂದಿಗೆ ಭಾರತ ಆಡಲಿದೆ. ಆಗ ಜಡೇಜಾ, ಶಾರ್ದೂಲ್ ಆಡೋದು ಪಕ್ಕಾ ಆಗಲಿದೆ. ಪಿಚ್ ಹೇಗೆ ವರ್ತಿಸುತ್ತೆ ಅನ್ನೋದ್ರ ಮೇಲೆ ಪ್ಲೇಯಿಂಗ್-11 ಡಿಸೈಡ್ ಆಗುತ್ತೆ.
ಆಫ್ರಿಕಾದಲ್ಲಿ ಮೊದಲ ಸಲ ಟೆಸ್ಟ್ ಸರಣಿ ಗೆಲುತ್ತಾ ಭಾರತ..?
ಟೀಂ ಇಂಡಿಯಾ, ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯಗಳನ್ನ ಗೆದ್ದಿದೆ. ಆದ್ರೆ ಟೆಸ್ಟ್ ಸರಣಿಯನ್ನ ಮಾತ್ರ ಗೆದ್ದಿಲ್ಲ. 30 ವರ್ಷಗಳಿಂದ ಆಫ್ರಿಕಾಗೆ ಹೋಗುತ್ತಿದ್ದರೂ ಸರಣಿ ಗೆದ್ದುಕೊಂಡು ಬಂದಿಲ್ಲ. ಪೂರ್ವಿಕರಿಂದ ಸಾಧ್ಯವಾಗದೇ ಇರೋದನ್ನ ರೋಹಿತ್ ಶರ್ಮಾ ಸಾಧಿಸಲು ಹೊರಟಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಭಾರತ ಸ್ಟ್ರಾಂಗ್ ಆಗಿದೆ. ಹಾಗಾಗಿ ಈ ಟೆಸ್ಟ್ ಫೇವರಿಟ್ ಕೂಡ ಟೀಂ ಇಂಡಿಯಾವೇ.
ಇನ್ನು ಆಫ್ರಿಕಾ ತಂಡ ಸತತ ಎರಡು ಸರಣಿ ಸೋತಿದ್ದರೂ ಟೆಸ್ಟ್ ಸರಣಿ ಗೆಲ್ಲಲು ಪಣ ತೊಟ್ಟಿದೆ. ಆಫ್ರಿಕಾದಲ್ಲಿ ಮೊದಲ ಸಲ ಭಾರತೀಯರು ಟೆಸ್ಟ್ ಸಿರೀಸ್ ಗೆಲ್ಲಲು ಹರಿಣಗಳು ಬಿಡಲ್ಲ. ಸೀನಿಯರ್ಸ್ ಎಲ್ಲಾ ರಿಟರ್ನ್ ಆಗಿರೋದ್ರಿಂದ ಆಫ್ರಿಕಾ ಸಹ ಬಲಿಷ್ಠವಾಗಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್