* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗೆ ಕ್ಷಣಗಣನೆ* 5 ಪಂದ್ಯಗಳ ಟಿ20 ಸರಣಿಯು ಜೂನ್ 09ರಿಂದ ಆರಂಭ* ಕೆಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾದಿಂದ ಅಭ್ಯಾಸ ಶುರು
ನವದೆಹಲಿ(ಜೂ.07): ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 9ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಭಾನುವಾರ ಟೀಂ ಇಂಡಿಯಾ (Team India) ಆಟಗಾರರ ತಂಡ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣ ಆಗಮಿಸಿದ್ದು, ಸೋಮವಾರ ಅಭ್ಯಾಸ ಆರಂಭಿಸಿತು. ಸಂಜೆ ಕೆಲ ಹೊತ್ತು ಕೆ.ಎಲ್.ರಾಹುಲ್ ನಾಯಕತ್ವದ ತಂಡ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿತು.
ಸುದೀರ್ಘ ಸಮುಯದ ಬಳಿಕ ತಂಡಕ್ಕೆ ವಾಪಸ್ ಆಗಿರುವ ದಿನೇಶ್ ಕಾರ್ತಿಕ್ (Dinesh Karthik), ಯುವ ತಾರೆಗಳಾದ ವೇಗಿ ಇಶಾನ್ ಕಿಶನ್ (Ishan Kishan), ಆವೇಶ್ ಖಾನ್, ಋುತುರಾಜ್ ಗಾಯಕ್ವಾಡ್, ಉಮ್ರಾನ್ ಮಲಿಕ್, ಅರ್ಶದೀಪ್ ಸಿಂಗ್ ಸೇರಿದಂತೆ ಆಟಗಾರರು ನೆಟ್ಸ್‌ನಲ್ಲಿ ಕಾಣಿಸಿಕೊಂಡರು. ತೆಂಬ ಬವುಮಾ ನೇತೃತ್ವದ ದ.ಆಫ್ರಿಕಾ ತಂಡ ಈಗಾಗಲೇ ನವದೆಹಲಿಗೆ ಆಗಮಿಸಿದ್ದು, ಶುಕ್ರವಾರವೇ ಅಭ್ಯಾಸ ಆರಂಭಿಸಿದೆ.
ಬೆಂಗಳೂರು ಟಿ20 ಪಂದ್ಯದ ಟಿಕೆಟ್ ಜೂ.12ಕ್ಕೆ ಮಾರಾಟ
ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆ ಜೂನ್ 19ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರವ 5ನೇ ಟಿ20 ಪಂದ್ಯದ ಟಿಕೆಟ್ ಜೂ.12ಕ್ಕೆ ಮಾರಾಟಕ್ಕೆ ಲಭ್ಯವಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಜೂನ್12ಕ್ಕೆ ಪಂದ್ಯದ ಟಿಕೆಟ್ ಆನ್‌ಲೈನ್ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಮಾರಾಟಕ್ಕೆ ಇಡುತ್ತೇವೆ. ಬೆಳಗ್ಗೆ 10ರಿಂದ ಸಂಜೆ 7ರ ನಡುವೆ ಟಿಕೆಟ್ ಪಡೆದುಕೊಳ್ಳಬಹುದು. ಜೂನ್ 13ರ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಟಿಕೆಟ್ ಲಭ್ಯವಿರುವುದಿಲ್ಲ’ ಎಂದು ಮಾಹಿತಿ ನೀಡಿದೆ.
ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ ನೋಡಿ
ಕೆ ಎಲ್ ರಾಹುಲ್(ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್
ಇಂದಿನಿಂದ ಆಸೀಸ್-ಲಂಕಾ 3 ಪಂದ್ಯಗಳ ಟಿ20 ಸರಣಿ
ಕೊಲಂಬೊ: ಶ್ರೀಲಂಕಾ ಹಾಗೂ ಆಸ್ಪ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿ ಮಂಗಳವಾರದಿಂದ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಕೊಲಂಬೊ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಜುಲೈ 12ರ ವರೆಗಿನ ಪ್ರವಾಸದಲ್ಲಿ ಆಸೀಸ್ ತಂಡ ಬಳಿಕ 5 ಏಕದಿನ, 2 ಟೆಸ್ಟ್ ಪಂದ್ಯಗಳನ್ನು ಕೂಡಾ ಆಡಲಿದೆ.
Ind vs SA ಈ ನಾಲ್ವರು ಶೈನ್ ಆದ್ರೆ ಮಾತ್ರ ಹೊಸ ಚರಿತ್ರೆ ಸೃಷ್ಟಿ..!
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವ ಲಂಕಾದಲ್ಲಿ ಸರಣಿ ಆಯೋಜನೆ ಸವಾಲಾಗಿ ಪರಿಣಮಿಸಿದ್ದು, ಆರ್ಥಿಕ ಸ್ಥಿತಿ ಸುಧಾರಣೆಯ ನಿಟ್ಟಿನಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಇದು ಮಹತ್ವದ ಸರಣಿ ಎನಿಸಿಕೊಂಡಿದೆ. ಅಲ್ಲದೇ ಆಗಸ್ಟ್-ಸೆಪ್ಟಂಬರ್‌ನಲ್ಲಿ ನಿಗದಿಯಾಗಿರುವ ಏಷ್ಯಾ ಕಪ್ ಟಿ20 ಟೂರ್ನಿಯ ಆತಿಥ್ಯ ಕೈತಪ್ಪದಂತೆ ನೋಡಿಕೊಳ್ಳಲು ಈ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸುವ ಸವಾಲು ಕೂಡಾ ಮಂಡಳಿ ಮುಂದಿದೆ.
ಯುಎಇ ಟಿ20 ಲೀಗ್: 3 ತಂಡಗಳು ಐಪಿಎಲ್ ಫ್ರಾಂಚೈಸಿಗಳ ಪಾಲು
ದುಬೈ: ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಇಂಟರ್‌ನ್ಯಾಷನಲ್ ಲೀಗ್ ಟಿ20 ಹೆಸರಿನ ಹೊಸ ಟೂರ್ನಿಗೆ ಚಾಲನೆ ನೀಡಲಿದ್ದು, ಟೂರ್ನಿಯ 6 ತಂಡಗಳ ಪೈಕಿ ಮೂರನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿಸಿದೆ. ಮೊದಲ ಆವೃತ್ತಿಯ ಟೂರ್ನಿ 2023ರ ಜನವರಿ 6ರಿಂದ ಫೆಬ್ರವರಿ 12ರ ವರೆಗೆ ನಡೆಯಲಿದೆ.
ಐಪಿಎಲ್‌ನ ಮೂರು ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್‌ನ ರಿಲಯನ್ಸ್, ಕೋಲ್ಕತಾ ನೈಟ್ ರೈಡರ್ಸ್ ಶಾರುಖ್ ಖಾನ್ ಅವರ ತಂಡ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲಿಕರಾದ ಜಿಎಂಆರ್ ಸಂಸ್ಥೆಗಳು ತಂಡಗಳನ್ನು ಖರೀದಿಸಿವೆ. ಈ ಸಂಸ್ಥೆಗಳಲ್ಲದೇ ಅದಾನಿ ಸ್ಪೋಟ್ಸ್‌ರ್‍ಲೈನ್, ಕ್ಯಾಪ್ರಿ ಗ್ಲೋಬಲ್ ಹಾಗೂ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಮ್ಯಾಂಚೆಸ್ಟರ್ ಯುನೈಟೆಡ್ ಮಾಲಿಕರಾಗಿರುವ ಬ್ಲೇಜರ್ಸ್ ಕುಟುಂಬದ ಲ್ಯಾನ್ಸೆರ್ ಕ್ಯಾಪಿಟಲ್ಸ್ ಕೂಡಾ ತಂಡದ ಮಾಲಕತ್ವ ಹೊಂದಿದೆ ಎಂದು ತಿಳಿದುಬಂದಿದೆ.
