Asianet Suvarna News Asianet Suvarna News

Ind vs SA ಈ ನಾಲ್ವರು ಶೈನ್​ ಆದ್ರೆ ಮಾತ್ರ ಹೊಸ ಚರಿತ್ರೆ ಸೃಷ್ಟಿ..!

* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗೆ ಕ್ಷಣಗಣನೆ

* ಜೂನ್ 09ರಿಂದ ಭಾರತ-ದಕ್ಷಿಣ ಆಫ್ರಿಕಾ 5 ಪಂದ್ಯಗಳ ಟಿ20 ಸರಣಿ ಆರಂಭ

* ಟೀಂ ಇಂಡಿಯಾದ ನಾಲ್ವರು ಆಟಗಾರರು ಸಿಡಿದ್ರೆ ಚರಿತ್ರೆ ಫಿಕ್ಸ್‌

All Cricket fans eyes on Hardik Pandya Dinesh Karthik Harshal Patel and ishan kishan performance against South Africa T20 Series kvn
Author
Bengaluru, First Published Jun 6, 2022, 4:56 PM IST

ಬೆಂಗಳೂರು(ಜೂ.06): ಭಾರತ-ಆಫ್ರಿಕಾ ಸಿರೀಸ್ ಶುರುವಾಗುತ್ತೆ ಅಂದ್ರೆ ಸಾಕು ಅಭಿಮಾನಿಗಳಿಗೆ ಹಬ್ಬವೇ ಹಬ್ಬ. ಯಾಕಂದ್ರೆ ಉಭಯ ದೇಶಗಳ ಮಧ್ಯೆ ಅಷ್ಟೊಂದು ಜಿದ್ದಾಜಿದ್ದಿ ಏರ್ಪಡುತ್ತೆ. ಸರಣಿ ಯಾರೆ ಗೆಲ್ಲಲಿ ಪ್ರತಿ ಬಾರಿ ಎಂಟರ್​​​ಟೈನ್​ಮೆಂಟ್​​ ಮಾತ್ರ ಮಿಸ್ಸೇ ಆಗಲ್ಲ. ಅಷ್ಟೊಂದು ರೋಮಾಂಚನದಿಂದ ಕೂಡಿರುತ್ತೆ. ಮತ್ತೆ ಆ ಘಳಿಗೆ ಬಂದಿದೆ. ಜೂನ್ 9 ರಿಂದ ಭಾರತ-ಆಫ್ರಿಕಾ (India vs South Africa T20 Series) ಮಧ್ಯೆ ಐದು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಇನ್ನು ಈ ಟಿ20 ಸರಣಿಯ ಮೊದಲ ಪಂದ್ಯ ಭಾರತಕ್ಕೆ ಮಹತ್ವದ್ದು. ಡೆಲ್ಲಿಯಲ್ಲಿ ಹರಿಣಗಳ ಎದುರು ನಡೆಯುವ ಪಂದ್ಯ ಜಯಿಸಿ ಬಿಟ್ರೆ ಸತತ 13 ಟಿ20 ಪಂದ್ಯ ಗೆದ್ದ ವಿಶ್ವದ ಮೊದಲ ತಂಡವೆನಿಸಿಕೊಳ್ಳಲಿದೆ. ಈ ಹೊಸ ಚರಿತ್ರೆ ಸೃಷ್ಟಿಯಾಗಬೇಕಾದ್ರೆ ಭಾರತ ತಂಡದ (Indian Cricket Team) ಈ ನಾಲ್ವರು ಪ್ಲೇಯರ್ಸ್​ ಶೈನ್ ಆಗಲೇಬೇಕಿದೆ. ಆಗಲೇ ಆಫ್ರಿಕಾವನ್ನ ಹೆಡೆಮುರಿ ಕಟ್ಟಲು ಸಾಧ್ಯ.

ಡಿಕೆ ಸಿಡಿದ್ರೆ ಆಫ್ರಿಕಾಗೆ ಸೋಲು ಶತಸಿದ್ಧ..! 

ಸ್ಲಾಗ್ ಓವರ್​​ ಹಿಟ್ಟರ್​​ ದಿನೇಶ್​ ಕಾರ್ತಿಕ್ (Dinesh Karthik) ಐಪಿಎಲ್​​​ನಲ್ಲಿ ಧೂಳೆಬ್ಬಿಸಿ ಆರ್​ಸಿಬಿಯನ್ನ ಪ್ಲೇಆಫ್​​ಗೇರಿಸುವಲ್ಲಿ ಯಶಸ್ವಿಯಾಗಿದ್ರು. ಸದ್ಯ ಈ ಅನುಭವಿ ಆಟಗಾರನಿಗೆ ಮತ್ತೆ ಟೀಂ ಇಂಡಿಯಾಗೆ ಮರಳಿದ್ದು ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಡಿಕೆ ಸ್ಲಾಗ್ ಓವರ್​​​ಗಳಲ್ಲಿ ಕಣಕ್ಕಿಳಿದು ರನ್ ವೇಗವನ್ನು ಹೆಚ್ಚಿಸಿದರೆ ಎದುರಾಳಿಯನ್ನ ಸುಲಭವಾಗಿ ಒತ್ತಡಕ್ಕೆ ಸಿಲುಕಿಸಬಹುದು.

ಓಪನಿಂಗ್​ ಬ್ಯಾಟರ್​​ ಇಶಾನ್ ಕಿಶನ್ 

ಇನ್ನು ಲೆಫ್ಟಿ ಬ್ಯಾಟರ್​​ ಇಶನ್ ಕಿಶನ್ (Ishan Kishan)​​​​​​​​​​ ಆಟದ ಮೇಲೆ ಟೀಂ​ ಇಂಡಿಯಾ ವಿಶ್ವದಾಖಲೆ ಭವಿಷ್ಯ ನಿಂತಿದೆ. ಯಾಕಂದ್ರೆ ಕ್ಯಾಪ್ಟನ್ ರಾಹುಲ್ ಜೊತೆ ಕಿಶನ್​​​ ಆರಂಭಿಕನಾಗಿ ಕಣಕ್ಕಿಳಿಯೋದು ಬಹುತೇಕ ಪಕ್ಕಾ. ಐಪಿಎಲ್​​ನಲ್ಲಿ ಹೇಳಿಕೊಳ್ಳುವಂತ ಪರ್ಫಾಮೆನ್ಸ್ ನೀಡದ ಲೆಫ್ಟಿ ದಾಂಡಿಗನ ಮೇಲೆ ಒತ್ತಡವಿದೆ. ರಾಹುಲ್​​​​​ ಜೊತೆಗೂಡಿ ರನ್​​ ವೇಗ ಹೆಚ್ಚಿಸಬೇಕಿದೆ. ಒಂದು ವೇಳೆ ಕಿಶನ್​ ಇದ್ರಲ್ಲಿ ಸಕ್ಸಸ್​​ ಕಂಡ್ರೆ ಎದುರಾಳಿ ಸೋಲು ಕಟ್ಟಿಟ್ಟಬುತ್ತಿ.

Ind vs SA ಟಿ2​0 ಸರಣಿಯನ್ನಾಡಲು ಭಾರತಕ್ಕೆ ಬಂದಿಳಿದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ

ಹಾರ್ದಿಕ್​​​ ಐಪಿಎಲ್​​ನಂತೆ ಘರ್ಜಿಸಿದ್ರೆ ಭಾರತಕ್ಕೆ ಉಳಿಗಾಲ

ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ (Hardik Pandya), ಟೀಂ ಇಂಡಿಯಾಗೆ ಗೆಲುವಿನಲ್ಲಿ ಎಕ್ಸ್​ ಫ್ಯಾಕ್ಟರ್​​. ಒಂದು ವರ್ಷದಿಂದ ತಂಡದಿಂದ ದೂರವಾಗಿದ್ದ ಪಾಂಡ್ಯ, ಐಪಿಲ್​​ನಲ್ಲಿ ಮಿಂಚಿ ತಂಡಕ್ಕೆ ಮರಳಿದ್ದಾರೆ. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯೋ ಹಾರ್ದಿಕ್​ ಸಿಗೋ ಚಾನ್ಸ್ ಅನ್ನ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಜೊತೆಗೆ ಬೌಲಿಂಗ್‌ನಲ್ಲಿಯೂ ಕ್ಲಿಕ್​ ಆದ್ರೆ ಎದುರಾಳಿ ತಂಡಕ್ಕೆ ಉಳಿಗಾಲವಿಲ್ಲ.

ವೇಗದ ಬೌಲರ್ ಹರ್ಷಲ್ ಪಟೇಲ್ 

ಇನ್ನು ಕಳೆದ ಎರಡು ಐಪಿಎಲ್ನಲ್ಲಿ ಶೈನ್ ಆದ ಹರ್ಷಲ್ ಪಟೇಲ್ (Harshal Patel) ತಂಡದಲ್ಲಿ ಸ್ಥಾನ ಪಡೆದು ಭರವಸೆ ಮೂಡಿಸಿದ್ದಾರೆ. ನಿಧಾನಗತಿ ಬೌಲಿಂಗ್​​ಗೆ ಹರ್ಷಲ್​ ಎತ್ತಿದ ಕೈ. ಡೆತ್ ಓವರ್​ಗಳಲ್ಲಿ ಮಾರಕವಾಗಬಲ್ಲ ಬೌಲರ್​​. ಹೀಗಾಗಿ ಆಫ್ರಿಕಾ ಬ್ಯಾಟರ್​​ಗಳನ್ನ ತಮ್ಮ ಅಸ್ತ್ರದ ಮೂಲಕ ಕಂಗೆಡಿಸಲು ಯಶಸ್ವಿಯಾದರೆ ಮೊದಲ ಟಿ20 ಗೆದ್ದು ರಾಹುಲ್​ ಆಂಡ್​​​​​​ ವಿಶ್ವದಾಖಲೆ ನಿರ್ಮಿಸಲಿದೆ. ಒಟ್ಟಿನಲ್ಲಿ ಮೇಲಿನ ನಾಲ್ವರ ಪ್ಲೇಯರ್ಸ್​ ಮೇಲೆ ಟೀಂ ಇಂಡಿಯಾದ ವಿಶ್ವದಾಖಲೆಯ ಭವಿಷ್ಯ ನಿಂತಿದೆ. ಈ ಚತುರ್ಥರು ಹೊಸ ಚರಿತ್ರೆಯ ಸೃಷ್ಟಿಗೆ ನಾಂದಿ ಹಾಡ್ತಾರಾ ? ಇಲ್ಲ ಅನ್ನೋದಕ್ಕೆ ಗುರುವಾರ ಉತ್ತರ ಸಿಗಲಿದೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟಿಂ ಇಂಡಿಯಾ 

ಕೆಎಲ್ ರಾಹುಲ್(ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್
 

Follow Us:
Download App:
  • android
  • ios