Asianet Suvarna News Asianet Suvarna News

IND vs SA ಭಾರತಕ್ಕೆ250 ರನ್ ಟಾರ್ಗೆಟ್ ನೀಡಿದ ಸೌತ್ ಆಫ್ರಿಕಾ!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಘಟ್ಟ ತಲುಪಿದೆ. ಟೀಂ ಇಂಡಿಯಾಗೆ 250 ರನ್ ಟಾರ್ಗೆಟ್ ನೀಡಿದೆ.
 

IND vs SA ODI South Africa set 250 run target to Team India in first match ckm
Author
First Published Oct 6, 2022, 7:17 PM IST

ಲಖನೌ(ಅ.06): ಹೆನ್ರಿಚ್ ಕಾಲ್ಸೇನ್ ಹಾಗೂ ಡೇವಿಡ್ ಮಿಲ್ಲರ್ ಅದ್ಬುತ ಜೊತೆಯಾಟದಿಂದ ಭಾರತ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 249 ರನ್ ಸಿಡಿಸಿದೆ. ಇದೀಗ ಟೀಂ ಇಂಡಿಯಾ 250 ರನ್ ಟಾರ್ಗೆಟ್ ಚೇಸ್ ಮಾಡಬೇಕಿದೆ.  ಅಂತಿಮ ಹಂತದಲ್ಲಿ ಹೆನ್ರಿಚ್ ಕಾಲ್ಸೇನ್ ಹಾಗೂ ಡೇವಿಡ್ ಮಿಲ್ಲರ್ ಜೊತೆಯಾಟ ಸೌತ್ ಆಫ್ರಿಕಾ ತಂಡಕ್ಕೆ ನೆರವಾಯಿತು. ಆರಂಭದಲ್ಲಿ ಕುಸಿತ ಕಂಡಿದ್ದ ಸೌತ್ ಆಫ್ರಿಕಾ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿತು.  

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ ಡೀಸೆಂಟ್ ಆರಂಭ ಪಡೆಯಿತು. ಕ್ವಿಂಟನ್ ಡಿಕಾಕ್ ಹಾಗೂ ಜನ್ನೇಮನ್ ಮಲನ್ 49 ರನ್‌ಗಳ ಜೊತೆಯಾಟ ನೀಡಿತು. ಈ ಜೊತೆಯಾಟಕ್ಕೆ ಶಾರ್ದೂಲ್ ಠಾಕೂರ್ ಬ್ರೇಕ್ ಹಾಕಿದರು. ಮಲನ್ 22 ರನ್ ಸಿಡಿಸಿ ಔಟಾದರ. ಇನ್ನು ನಾಯಕ ತೆಂಬಾ ಬವುಮಾ ಕೇವಲ 8ರನ್ ಸಿಡಿಸಿ ಔಟಾದರು. ಆ್ಯಡಿನ್ ಮರ್ಕ್ರಮ್ ಡಕೌಟ್ ಆದರು. 

ಇತ್ತ ದಿಟ್ಟ ಹೋರಾಟ ನೀಡಿದ ಡಿಕಾಕ್ 48ರನ್ ಸಿಡಿಸಿ ಔಟಾದರು. 110 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಹೆನ್ರಿಚ್ ಕಾಲ್ಸೇನ್ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಬ್ಯಾಟಿಂಗ್ ಪಂದ್ಯದ ಗತಿ ಬದಲಿಸಿತು. ಹೆನ್ರಿಚ್ ಹಾಗೂ ಮಿಲ್ಲರ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಹೆನ್ರಿಚ್ 65 ಎಸೆತದಲ್ಲಿ 74 ರನ್ ಸಿಡಿಸಿದರೆ, ಮಿಲ್ಲರ್ 63 ಎಸೆತದಲ್ಲಿ ಅಜೇಯ 75 ರನ್ ಸಿಡಿಸಿದರು. ಇದರೊಂದಿಗೆ 40 ಓವರ್‌ಗಳಲ್ಲಿ 249 ರನ್ ಸಿಡಿಸಿತು.

Follow Us:
Download App:
  • android
  • ios