Asianet Suvarna News Asianet Suvarna News

IND vs SA ಕಾರ್ತಿಕ್- ಪಾಂಡ್ಯ ಹೋರಾಟ, ಸೌತ್ ಆಫ್ರಕಾಗೆ ಸ್ಪರ್ಧಾತ್ಮಕ ಟಾರ್ಗೆಟ್!

  • ಟಾಪ್ ಆರ್ಡರ್ ವೈಫಲ್ಯ, ಮತ್ತೆ ಕುಸಿದ ಭಾರತ
  • ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಹೋರಾಟ
  • ಸೌತ್ ಆಫ್ರಿಕಾ ತಂಡಕ್ಕೆ 170 ರನ್ ಟಾರ್ಗೆಟ್
     
IND vs SA 4th T20  Dinesh Karthik help Team India to set 170 run target to South Africa ckm
Author
Bengaluru, First Published Jun 17, 2022, 8:42 PM IST | Last Updated Jun 17, 2022, 8:55 PM IST

ರಾಜ್‌ಕೋಟ್(ಜೂ.17): ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಹೋರಾಟದಿಂದ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ  ಪಾರಾಗಿದೆ. ಸೌತ್ ಆಫ್ರಿಕಾ ವಿರುದ್ಧದ 4ನೇ ಹಾಗೂ ಮಹತ್ವದ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿದೆ.

4ನೇ ಪಂದ್ಯದಲ್ಲೂ ಟಾಸ್ ಸೋತ ಟೀಂ ಇಂಡಿಯಾ ಒಲ್ಲದ ಮನಸ್ಸಿನಿಂದ ಬ್ಯಾಟಿಂಗ್ ಇಳಿಯಿತು. ಜೊತೆಗೆ ಉತ್ತಮ ಆರಂಭವೂ ಸಿಗಲಿಲ್ಲ. ರುತುರಾಜ್ ಗಾಯಕ್ವಾಡ್ 5 ರನ್ ಸಿಡಿಸಿ ಔಟಾದರು. ಇತ್ತ ಇಶಾನ್ ಕಿಶನ್ ಹೋರಾಟದ ಸೂಚನೆ ನೀಡಿದರು. ಆದರೆ ಶ್ರೇಯಸ್ ಅಯ್ಯರ್ 4 ರನ್ ಸಿಡಿಸಿ ಔಟಾದರು.

6 ತಿಂಗಳಲ್ಲಿ ಟೀಂ ಇಂಡಿಯಾಗೆ 5 ನಾಯಕರು!

ಇಶಾನ್ ಕಿಶನ್ 27 ರನ್ ಸಿಡಿಸಿ ಔಟಾದರು. ನಾಯಕ ರಿಷಬ್ ಪಂತ್ ಆಟ 17 ರನ್‌ಗೆ ಅಂತ್ಯವಾಯಿತು. 81 ರನ್‌ಗಳಿಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡಿತು.  ಆದರೆ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಹೋರಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. 

ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್‌ನಿಂದ  ಅಲ್ಪಮೊತ್ತಕ್ಕೆ ಕುಸಿಯು ಭೀತಿಯಿಂದ ಪಾರಾಯಿತು. ಹಾರ್ದಿಕ್ ಪಾಂಡ್ಯ 31 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 46 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ ಜೊತೆ ಹೋರಾಟ ಮುಂದುವರಿಸಿದ ದಿನೇಶ್ ಕಾರ್ತಿಕ್ ಭಾರತದ ಸ್ಪರ್ಧಾತ್ಮಕ ಮೊತ್ತ ಸಿಡಿಸುವಲ್ಲಿ ನೆರವಾದರು.

ದಿನೇಶ್ ಕಾರ್ತಿಕ್ 27 ಎಸೆತದಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 55 ರನ್ ಸಿಡಿಸಿ ಔಟಾದರು . ಈ ಮೂಲಕ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿತು. 

Ind vs SA: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ ನಮ್ಮ ಮೆಟ್ರೋ..!

4ನೇ ಟಿ20 ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ಕಾರಣ ಆರಂಭಿಕ 2 ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ 3ನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತ್ತು. ಈ ಮೂಲಕ ಸರಣಿಯನ್ನು ಜೀವಂತವಾಗಿರಿಸಿತು. ಇದೀಗ ನಾಲ್ಕನೇ ಪಂದ್ಯವೂ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಮುಂದಿನ ಪಂದ್ಯದಲ್ಲಿ ಸರಣಿ ಯಾರಿಗೆ ಅನ್ನೋದು ನಿರ್ಧಾರವಾಗಲಿದೆ. ಈಗಾಗಲೇ 2 ಪಂದ್ಯ ಗೆದ್ದಿರುವ ಸೌತ್ ಆಫ್ರಿಕಾ ಸರಣಿ ಕೈವಶ ಮಾಡಲು ಸಜ್ಜಾಗಿದೆ.

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿತು. ಭಾರತದ ಬೃಹತ್ ಮೊತ್ತ ಬೆನ್ನಟ್ಟಿದ ಸೌತ್ ಆಫ್ರಿಕಾ 7 ವಿಕೆಟ್ ಗೆಲುವು ಕಂಡಿತ್ತು. ಇತ್ತ ಎರಡನೇ ಪಂದ್ಯದಲ್ಲೂ ಭಾರತ ಮುಗ್ಗರಿಸಿತು. ಬ್ಯಾಟಿಂಗ್‌ನಲ್ಲಿ ಎಡವಿದ ಭಾರತ ಸಾಧಾರಣ ಮೊತ್ತ ಪೇರಿಸಿತ್ತು. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ 4 ವಿಕೆಟ್ ಗೆಲುವು ಕಂಡಿತು. ಆದರೆ ಮೂರನೇ ಪಂದ್ಯದಲ್ಲಿ ಭಾರತ ಕಮ್‌ಬ್ಯಾಕ್ ಮಾಡಿತು. ಈ ಮೂಲಕ 48 ರನ್ ಗೆಲುವು ದಾಖಲಿಸಿತು. ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿತು.

Latest Videos
Follow Us:
Download App:
  • android
  • ios