Asianet Suvarna News Asianet Suvarna News

Ind vs SA: ಭಾರತದ ನೆಚ್ಚಿನ ತಾಣದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಜಯಭೇರಿ

* ಜೋಹಾನ್ಸ್‌ಬರ್ಗ್ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ

* ಹರಿಣಗಳ ತಂಡವನ್ನು ಗೆಲುವಿನ ದಡ ಸೇರಿಸಿದ ನಾಯಕ ಡೀನ್ ಎಲ್ಗಾರ್

* ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ, ಮೂರನೇ ಪಂದ್ಯ ಜನವರಿ 11ರಿಂದ ಆರಂಭ

Ind vs SA 2nd Test South Africa beat India by 7 wickets in Johannesburg Test and Series Level kvn
Author
Bengaluru, First Published Jan 7, 2022, 7:56 AM IST | Last Updated Jan 7, 2022, 7:56 AM IST

ಜೋಹಾನ್ಸ್‌ಬರ್ಗ್‌(ಜ.07): ಟೆಸ್ಟ್‌ ಕ್ರಿಕೆಟ್‌ (Test Cricket) ಜೀವಂತ ಉಳಿಯುವುದು ಇಂತಹ ಪಂದ್ಯಗಳಿಂದಲೇ. ಭಾರೀ ರೋಚಕತೆಯಿಂದ ಕೂಡಿದ್ದ ಭಾರತ ವಿರುದ್ಧದ 2ನೇ ಟೆಸ್ಟ್‌ ಪಂದ್ಯವನ್ನು ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ. ಸೆಂಚೂರಿಯನ್‌ನಲ್ಲಿ ಗೆದ್ದು ಭಾರತ, ದಕ್ಷಿಣ ಆಫ್ರಿಕಾದ ಭದ್ರಕೋಟೆಯನ್ನು ಭೇದಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ, ಜೋಹಾನ್ಸ್‌ಬರ್ಗ್‌ನಲ್ಲಿ ಭಾರತಕ್ಕೆ ಮೊದಲ ಸೋಲುಣಿಸಿದೆ. ಈ ಹಿಂದಿನ 5 ಪಂದ್ಯಗಳಲ್ಲಿ ಭಾರತ ಅಜೇಯವಾಗಿ ಉಳಿದಿತ್ತು.

ಗೆಲ್ಲಲು 240 ರನ್‌ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ (South Africa Cricket Team), 3ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 118 ರನ್‌ ಗಳಿಸಿತ್ತು. 4ನೇ ದಿನವಾದ ಗುರುವಾರ ಆತಿಥೇಯ ತಂಡಕ್ಕೆ ಗೆಲ್ಲಲು ಇನ್ನೂ 122 ರನ್‌ ಬೇಕಿತ್ತು. ಬೆಳಗ್ಗೆಯಿಂದಲೇ ಮಳೆ ಸುರಿದ ಕಾರಣ, ಮೊದಲೆರಡು ಅವಧಿಗಳ ಆಟ ವ್ಯರ್ಥವಾಯಿತು. ಇಡೀ ದಿನವೇ ಮಳೆಗೆ ಬಲಿಯಾಗುವ ಸಾಧ್ಯತೆಯೂ ಇತ್ತು. ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಚರಂಡಿ ವ್ಯವಸ್ಥೆ ಉತ್ತಮವಾಗಿರುವ ಕಾರಣ, ಪಂದ್ಯ ಭಾರತೀಯ ಕಾಲಮಾನ ಸಂಜೆ 7.15ಕ್ಕೆ ಆರಂಭಗೊಂಡಿತು. ದಿನದಾಟದಲ್ಲಿ 35 ಓವರ್‌ ಬೌಲ್‌ ಮಾಡಬಹುದು ಎಂದು ಪಂದ್ಯದ ಅಧಿಕಾರಿಗಳು ತಿಳಿಸಿದರು. ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 27.4 ಓವರ್‌ ಸಾಕಾಯಿತು.

ಉತ್ತಮ ಆರಂಭ: 4ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ನಾಯಕ ಡೀನ್‌ ಎಲ್ಗರ್‌ (Dean Elgar) ಹಾಗೂ ರಾಸಿ ವಾನ್‌ ಡೆರ್‌ ಡುಸ್ಸೆನ್‌, ತಂಡಕ್ಕೆ ಎಚ್ಚರಿಕೆಯ ಆರಂಭ ಒದಗಿಸಿದರು. ಪಿಚ್‌ನಲ್ಲಿ ತೇವಾಂಶವಿದ್ದ ಕಾರಣ ಭಾರತೀಯ ವೇಗಿಗಳು ಹೆಚ್ಚು ಪರಿಣಾಮಕಾರಿಯಾಗಬಹುದು ಎನ್ನುವ ನಿರೀಕ್ಷೆ ಇತ್ತು. ನಿರೀಕ್ಷೆಗೆ ತಕ್ಕಂತೆ ಬೌಲರ್‌ಗಳು ಬೌಲ್‌ ಮಾಡಿದರೂ ಎಲ್ಗರ್‌-ಡುಸ್ಸೆನ್‌ ಜೋಡಿಯನ್ನು ಸುಲಭವಾಗಿ ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಇವರಿಬ್ಬರು ಮೊದಲ ಒಂದು ಗಂಟೆಯಲ್ಲಿ 57 ರನ್‌ ಸೇರಿಸಿದರು. ಆಕರ್ಷಕ 40 ರನ್‌ ಗಳಿಸಿದ ಡುಸ್ಸೆನ್‌ರನ್ನು ಶಮಿ ಪೆವಿಲಿಯನ್‌ಗಟ್ಟುತ್ತಿದ್ದಂತೆ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿತು. ಆದರೆ ಬಂಡೆಯಂತೆ ಕ್ರೀಸ್‌ನಲ್ಲಿ ನೆಲೆಯೂರಿದ್ದ ಎಲ್ಗರ್‌ಗೆ ಜೊತೆಯಾದ ತೆಂಬ ಬವುಮಾ ಸಹ ಬಹಳ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಭಾರತೀಯ ಬೌಲರ್‌ಗಳನ್ನು ಎದುರಿಸಿದರು.

Ind vs SA Test: ರೋಚಕಘಟ್ಟ ತಲುಪಿದ ಜೋಹಾನ್ಸ್‌ಬರ್ಗ್‌ ಟೆಸ್ಟ್..! ಗೆಲುವು ಯಾರಿಗೆ.?

ಇವರಿಬ್ಬರು ಮುರಿಯದ 4ನೇ ವಿಕೆಟ್‌ಗೆ 68 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 188 ಎಸೆತ ಎದುರಿಸಿದ ಎಲ್ಗರ್‌ 10 ಬೌಂಡರಿಯೊಂದಿಗೆ 96 ರನ್‌ ಗಳಿಸಿ ಔಟಾಗದೆ ಉಳಿದರೆ, ಬವುಮಾ 23 ರನ್‌ ಕೊಡುಗೆ ನೀಡಿದರು.

ಜನವರಿ 11ರಿಂದ ಕೇಪ್‌ಟೌನ್‌ನಲ್ಲಿ 3ನೇ ಟೆಸ್ಟ್‌ ಪಂದ್ಯ ಶುರು

ಭಾರತ ಹಾಗೂ ದ.ಆಫ್ರಿಕಾ ನಡುವಿನ 3ನೇ ಟೆಸ್ಟ್‌ ಜ.11ರಿಂದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೇಪ್‌ಟೌನ್‌ನಲ್ಲಿ ಭಾರತ ಈ ವರೆಗೂ 5 ಟೆಸ್ಟ್‌ ಆಡಿದ್ದು, 3ರಲ್ಲಿ ಸೋತು, 2ರಲ್ಲಿ ಡ್ರಾ ಸಾಧಿಸಿದೆ. ಟೀಂ ಇಂಡಿಯಾ, ದ.ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ಬರೆಯಲು ಎದುರು ನೋಡುತ್ತಿದೆ.

ಎಲ್ಗರ್‌ ಹೋರಾಟಕ್ಕೆ ಒಲಿದ ಗೆಲುವು!

2018ರಲ್ಲಿ ವಾಂಡರರ್ಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಡೀನ್‌ ಎಲ್ಗರ್‌ ಏಕಾಂಗಿ ಹೋರಾಟ ನಡೆಸಿದ್ದರು. ಔಟಾಗದೆ 86 ರನ್‌ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮತ್ತೆ ತಂಡಕ್ಕೆ ಆಸರೆಯಾದ ಎಲ್ಗರ್‌, ಅಜೇಯ 96 ರನ್‌ ಗಳಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ನಾಯಕ ರಾಹುಲ್‌ಗೆ ಸೋಲಿನ ಆರಂಭ!

ಕನ್ನಡಿಗ ಕೆ.ಎಲ್‌.ರಾಹುಲ್‌ ಇದೇ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಮೊದಲ ಪಂದ್ಯದಲ್ಲೇ ರಾಹುಲ್‌ಗೆ ಸೋಲಿನ ಆಘಾತ ಎದುರಾಗಿದೆ. ಮುಂದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ವಾಪಸಾಗುವ ನಿರೀಕ್ಷೆ ಇದ್ದು, ರಾಹುಲ್‌ ನಾಯಕತ್ವ ಬಿಟ್ಟುಕೊಡಬೇಕಾಗಬಹುದು. ಬಳಿಕ ಏಕದಿನ ಸರಣಿಯಲ್ಲಿ ರಾಹುಲ್‌ ಮತ್ತೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
 

Latest Videos
Follow Us:
Download App:
  • android
  • ios