ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಹೋರಾಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇದರ ನಡುವೆ ವಿರಾಟ್ ಕೊಹ್ಲಿ ಹಾಗೂ ಪಾಕ್ ವೇಗಿ ಶಾಹೀನ್ ಆಫ್ರಿದಿ ಭೇಟಿ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಈ ಭೇಟಿಯಲ್ಲಿ ಶಾಹೀನ್ ಆಫ್ರಿದಿ ಆಡಿದ ಮಾತುಗಳು ಬಹಿರಂಗವಾಗಿದೆ. 

ದುಬೈ(ಆ.26): ಏಷ್ಯಾ ಕಪ್ ಟೂರ್ನಿ ಆಗಸ್ಟ್ 27 ರಿಂದ ಆರಂಭಗೊಳ್ಳುತ್ತಿದೆ. ಆದರೆ ಇಡೀ ಜಗತ್ತು ಆಗಸ್ಟ್ 28ರ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೋರಾಟಕ್ಕೆ ಕಾದುಕುಳಿತಿದೆ. ಹೈವೋಲ್ಟೇಜ್ ಪಂದ್ಯಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ದುಬೈನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಅಭ್ಯಾಸದಲ್ಲಿ ನಿರತವಾಗಿದೆ. ಇದರ ನಡುವೆ ಪಾಕಿಸ್ತಾನ ವೇಗಿ ಶಾಹೀನ್ ಆಫ್ರಿದಿ, ಟೀಂ ಇಂಡಿಯಾ ಕ್ರಿಕಟಿಗ ವಿರಾಟ್ ಕೊಹ್ಲಿ ಭೇಟಿಯಾಗಿದ್ದಾರೆ. ಕೆಲವೇ ನಿಮಿಷಗಳ ಈ ಭೇಟಿಯಲ್ಲಿ ಶಾಹೀನ್ ಆಫ್ರಿದಿ ಆಡಿದ ಮಾತುಗಳು ಬಹಿರಂಗವಾಗಿದೆ. ಇಂಜುರಿ ಕುರಿತು ವಿಚಾರಿಸಿದ ವಿರಾಟ್ ಕೊಹ್ಲಿಗೆ ಶಾಹೀನ್ ಆಫ್ರಿದಿ, ತಾವು ಶೀಘ್ರದಲ್ಲೇ ಫಾರ್ಮ್‌ಗೆ ಮರಳಲು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಹಲವು ಕಾರಣಗಳಿಂದ ಹೈವೋಲ್ಟೇಜ್ ಪಂದ್ಯವಾಗಿ ಮಾರ್ಪಟ್ಟಿದೆ. ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಯುದ್ಧ ಶುರುಮಾಡಿದ್ದಾರೆ. ಆದರೆ ಆಟಗಾರರಿಗೆ ಇಂದು ಮತ್ತೊಂದು ಪಂದ್ಯ. ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ಆಟಗಾರರು ಸ್ಮರಣೀಯ ನೆನೆಪುಗಳನ್ನು ಕಟ್ಟಿಕೊಟ್ಟಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಹಾಗೂ ಶಾಹೀನ್ ಆಫ್ರಿದಿ ಭೇಟಿ ಕೂಡ ಭಾರಿ ಮೆಚ್ಚುಗೆ ಪಾತ್ರವಾಗಿದೆ. 

ಸೇಡಿನ ಕದನ: ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್‌ ನಡುವೆ ಶುರುವಾಯ್ತು 'ಮೀಮ್ಸ್‌ ವಾರ್‌'..!

ನೀವು ಶೀಘ್ರದಲ್ಲೇ ಕಮ್‌ಬ್ಯಾಕ್ ಮಾಡುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಹೀನ್ ಆಫ್ರಿದಿ ಹೇಳಿದ ಮಾತು ಟೀಂ ಇಂಡಿಯಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡು ಕೆಲದಿನಗಳೇ ಉರುಳಿದೆ. ಕೊಹ್ಲಿ ಫಾರ್ಮ್ ಸಮಸ್ಸೆ ಟೀಂ ಇಂಡಿಯಾದ ಆತಂಕಕ್ಕೂ ಕಾರಣಾಗಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕೊಹ್ಲಿ ಅಬ್ಬರಿಸಲೇಬೇಕಿದೆ. ಹೀಗಾಗಿ ಕೊಹ್ಲಿ ಫಾರ್ಮ್ ಅತೀ ಮುಖ್ಯ. ಇದೀಗ ಎದುರಾಳಿ ತಂಡದ ಆಟಾಗರನೇ ಕೊಹ್ಲಿ ಫಾರ್ಮ್ ಮರಳಲು ಹಾರೈಸಿರುವುದು ಉತ್ತಮ ಬೆಳವಣಿಗೆಯಾಗಿದೆ.

Scroll to load tweet…

ಗಾಯಾಳು ವೇಗಿ ಶಾಹೀನ್‌ ಏಷ್ಯಾ ಕಪ್‌ನಿಂದ ಹೊರಕ್ಕೆ
ಆ.27ರಿಂದ ಆರಂಭವಾಗಲಿರುವ ಏಷ್ಯಾ ಕಪ್‌ ಟಿ20 ಟೂರ್ನಿಗೂ ಮುನ್ನ ಪಾಕಿಸ್ತಾನಕ್ಕೆ ಆಘಾತ ಎದುರಾಗಿದ್ದು, ಗಾಯಕ್ಕೆ ತುತ್ತಾಗಿದ್ದ ತಂಡದ ಪ್ರಮುಖ ವೇಗಿ ಶಾಹೀನ್‌ ಅಫ್ರಿದಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ಮಂಡಿ ಗಾಯಕ್ಕೆ ತುತ್ತಾಗಿದ್ದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಅವರಿಗೆ ವೈದ್ಯರು 4-6 ವಾರಗಳ ವಿಶ್ರಾಂತಿಗೆ ಸೂಚಿಸಿದ್ದು, ಏಷ್ಯಾ ಕಪ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಸೆಪ್ಟಂಬರ್‌ನಲ್ಲಿ ನಡೆಯಲಿರುವ ತವರಿನ ಸರಣಿಗೂ ಗೈರಾಗಲಿದ್ದಾರೆ. ಆದರೆ ಅಕ್ಟೋಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಿಗದಿಯಾಗಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅವರು ಆಡುವ ಸಾಧ್ಯತೆ ಇದೆ.

ಭಾರತ ತಂಡದ ‘ರನ್‌ ಮಷಿನ್‌’ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸದೆ 1,000ಕ್ಕೂ ದಿನಗಳಾಗಿವೆ..ಗಾಯದ ಸಮಸ್ಯೆ ಎದುರಿಸುತ್ತಿರುವ ವಿರಾಟ್‌, ವೆಸ್ಟ್‌ಇಂಡೀಸ್‌ ಮತ್ತು ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದರು. ಏಷ್ಯಾಕಪ್‌ ಟಿ20ಯಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ಕೊನೆಯ ಬಾರಿಗೆ ವಿರಾಟ್‌ರ ಬ್ಯಾಟ್‌ನಿಂದ ಶತಕ ಸಿಡಿದಿದ್ದು 2019ರ ನವೆಂಬರ್‌ 23ರಂದು. ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ 136 ರನ್‌ ಗಳಿಸಿದ್ದರು.