* ಟೆಸ್ಟ್ ವಿಶ್ವ  ಚಾಂಪಿಯನ್ ಪಟ್ಟ ಅಲಂಕರಿಸಿದ ನ್ಯೂಜಿಲೆಂಡ್* ಕೇನ್ ಮತ್ತು ಟೇಲರ್ ಆಟಕ್ಕೆ ತಲೆಬಾಗಿದ ಭಾರತ* ನ್ಯೂಜಿಲೆಂಡ್ ಆಟಗಾರರ ಆನಂದಭಾಷ್ಪ* ಇತಿಹಾಸ ಬರೆದ ವಿಲಿಯಮ್ಸನ್ ಪಡೆ

ಸೌಥಾಂಪ್ಟನ್(ಜೂ.23) ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಆಗಿ ನ್ಯೂಜಿಲೆಂಡ್ ಹೊರಹೊಮ್ಮಿದ್ದು ಇತಿಹಾಸ ನಿರ್ಮಾಣ ಮಾಡಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ವೃತ್ತಿ ಜೀವನ ಸ್ಮರಣೀಯವಾಗಿ ಅಂತ್ಯವಾಗುತ್ತಿದೆ.

ಭಾರತದ ವಿರುದ್ದ ನ್ಯೂಜಿಲೆಂಡ್ ಎಂಟು ವಿಕೆಟ್ ಜಯ ಸಾಧಿಸಿದೆ. ಮಳೆ ಕಾಡಿದ ಪಂದ್ಯವನ್ನು ಆರು ದಿನಕ್ಕೆ ವಿಸ್ತರಣೆ ಮಾಡಲಾಗಿತ್ತು. ಗೆಲ್ಲಲು ನ್ಯೂಜಿಲೆಂಡ್ ಗೆ ಭಾರತ 139 ರನ್ ಗುರಿ ನೀಡಿತ್ತು. ರಾಸ್ ಟೇಲರ್ ಮತ್ತು ಕೇನ್ ಜತೆಯಾಟ ಭಾರತದಿಂದ ಪಂದ್ಯ ಕಸಿದುಕೊಂಡಿತು.

ರಿಶಭ್ ಪಂತ್ ದಿಟ್ಟ ಹೋರಾಟ

ಒಂದು ಹಂತದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತ್ತು. ಎರಡೂ ತಂಡಗಳಿಗೂ ಗೆಲುವಿನ ಅವಕಾಶ ಇತ್ತು. ಅಂತಿಮವಾಗಿ ಗೆದ್ದ ನ್ಯೂಜಿಲೆಂಡ್ ಆಟಗಾರರ ಕಣ್ಣಲ್ಲಿ ನೀರಿತ್ತು.

ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಜತೆಯಾಟ ಗೆಲುವು ತಂದುಕೊಟ್ಟಿತು. ಅರ್ಧ ಶತಕ(52) ದಾಖಲಿಸಿದ ಕೇನ್, 47 ರನ್ ದಾಖಲಿಸಿದ ರಾಸ್ ಟೇಲರ್ ವಿಜಯದ ರೂವಾರಿಗಳಾದರು . ಭಾರತದ ಪರ ಅಶ್ವಿನ್ ಎರಡನೇ ಇನಿಂಗ್ಸ್ ನಲ್ಲಿ ಎರಡು ವಿಕೆಟ್ ಕಿತ್ತರು. Kyle Jamieson ನ್ಯೂಜಿಲೆಂಡ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 

Scroll to load tweet…