ಟೀಂ ಇಂಡಿಯಾಗೆ ಮೊದಲ ಸೂಪರ್ ಓವರ್, ಮೊದಲ ಗೆಲುವು!
ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪ್ರದರ್ಶನಕ್ಕೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಂತಿಮ ಕ್ಷಣದಲ್ಲಿ ಪಂದ್ಯಕ್ಕೆ ರೋಚಕ ತಿರುವು ನೀಡಿದ ಕೊಹ್ಲಿ ಸೈನ್ಯ, ಪಂದ್ಯನ್ನು ಟೈ ಮಾಡಿತು. ಇನ್ನು ಸೂಪರ್ ಓವರ್‌ನಲ್ಲಿ ಸತತ 2 ಸಿಕ್ಸರ್ ಮೂಲಕ ಗೆದ್ದುಕೊಂಡಿತು. ಸೂಪರ್ ಓವರ್‌ನಲ್ಲಿ ಭಾರತಕ್ಕಿದು ಮೊದಲ ಗೆಲುವು.
ಹ್ಯಾಮಿಲ್ಟನ್(ಜ.29): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಟಿ20 ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಪ್ರತಿ ಎಸೆತವೂ ಟೆನ್ಶನ್ ನೀಡಿತ್ತು. ಅಂತಿಮ ಓವರ್‌ನಲ್ಲಿ ಟೀಂ ಇಂಡಿಯಾ ಸೋಲಿನತ್ತ ವಾಲಿತ್ತು. ಆದರೆ ಮೊಹಮ್ಮದ್ ಶಮಿ ಅದ್ಭುತ ದಾಳಿಗೆ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಸತತ 2 ಸಿಕ್ಸರ್ ಸಿಡಿಸಿ ಅಷ್ಟೇ ರೋಚಕವಾಗಿ ಪಂದ್ಯ ಗೆಲ್ಲಿಸಿಕೊಟ್ಟರು.
ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಗಿಫ್ಟ್ : ಸೂಪರ್ ಓವರ್‌ನಲ್ಲಿ ಗೆದ್ದ ಭಾರತ
ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯದ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತ್ತು. ವಿಶೇಷ ಅಂದರೆ ಭಾರತಕ್ಕೆ ಇದು ಮೊದಲ ಸೂಪರ್ ಓವರ್ ಪಂದ್ಯವಾಗಿತ್ತು. ಟಿ20 ಮಾದರಿಯಲ್ಲಿ ಟೀಂ ಇಂಡಿಯಾ, ಕಿವೀಸ್ ವಿರುದ್ಧದ ಹ್ಯಾಮಿಲ್ಟನ್ ಪಂದ್ಯ ಸೇರಿದಂತೆ ಒಟ್ಟು 2 ಬಾರಿ ಪಂದ್ಯವನ್ನು ಟೈ ಮಾಡಿಕೊಂಡಿದೆ.
ಅಂತಿಮ ಎಸೆತದಲ್ಲಿ ಟೇಲರ್ ಕ್ಲೀನ್ ಬೋಲ್ಡ್, T20 ಪಂದ್ಯ ರೋಚಕ ಟೈ!
2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಪಂದ್ಯ ಟೈ ಮಾಡಿಕೊಂಡಿತ್ತು. ಫಲಿತಾಂಶಕ್ಕಾಗಿ ಅಂದು ಬಾಲೌಟ್ ಮೊರೆ ಹೋಗಲಾಗಿತ್ತು. ಓವರ್‌ನ ಆರಂಭಿಕ 3 ಎಸೆತಗಳನ್ನು ವಿಕೆಟ್‌ಗೆ ಹಾಕೋ ಮೂಲಕ ಪಂದ್ಯ ಗೆದ್ದುಕೊಂಡಿತು.
ಇದಾದ ಬಳಿಕ ಇದೀಗ ಹ್ಯಾಮಿಲ್ಟನ್ ಟಿ20 ಪಂದ್ಯ ಟೈಗೊಂಡಿತು. ಇದೀಗ ಟಿ20 ಪಂದ್ಯದ ಟೈಗೊಂಡರೆ ಸೂಪರ್ ಓವರ್ ನಡೆಸಲಾಗುತ್ತಿದೆ. ಭಾರತ ಎದುರಿಸಿದ ಮೊದಲ ಸೂಪರ್ ಓವರ್‌ನಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿ ದಾಖಲೆ ಬರೆಯಿತು.