ಹ್ಯಾಮಿಲ್ಟನ್(ಜ.29): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಟಿ20 ಪಂದ್ಯ ರೋಚಕ ಟೈ ಕಂಡಿದೆ. ಅಂತಿಮ ಎಸೆತದಲ್ಲಿ ರಾಸ್ ಟೇಲರ್ ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಪಂದ್ಯವನ್ನು ಟೈ ಮಾಡಿಕೊಂಡಿತು. ಈ ಮೂಲಕ ಫಲಿತಾಂಶ ನಿರ್ಧಾರಕ್ಕೆ ಸೂಪರ್ ಓವರ್ ಮೊರೆ ಹೋಗಲಾಯಿತು.

ಭಾರತ ನೀಡಿದ 180 ರನ್ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಜಡ್ ದಿಟ್ಟ ಹೋರಾಟ ನೀಡಿತು,. ನಾಯಕ ಕೇನ್ ವಿಲಿಯಮ್ಸನ್ 95 ರನ್ ನೀಡಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಭಾರತೀಯ ಬೌಲರ್‌ಗಳ ಅದ್ಬುತ ಬೌಲಿಂಗ್ ಪ್ರದರ್ಶನದಿಂದ ಪಂದ್ಯ ರೋಚಕ ಘಟ್ಟ ತಲುಪಿತು.

ಅಂತಿಮ ಎಸೆತದಲ್ಲಿ ನ್ಯೂಜಿಲೆಂಡ್ ತಂಡಕ್ಕೆ 1 ರನ್ ಅವಶ್ಯಕತೆ ಇತ್ತು. ಮೊಹಮ್ಮದ್ ಶಮಿ, ಟೇಲರ್ ವಿಕೆಟ್ ಕಬಳಿಸಿದರು. ಈ ಮೂಲಕ ಭಾರತ ಪಂದ್ಯವನ್ನು ಟೈ ಮಾಡಿಕೊಂಡಿತು. ಇದೀಗ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಲಾಗಿದೆ.