Asianet Suvarna News Asianet Suvarna News

Ind vs NZ Kanpur Test: ಶ್ರೇಯಸ್ ಅಯ್ಯರ್ ದಾಖಲೆಯ ಅರ್ಧಶತಕ, ಟೀಂ ಇಂಡಿಯಾಗೆ 216 ರನ್‌ಗಳ ಮುನ್ನಡೆ

* ಕಾನ್ಪುರ ಟೆಸ್ಟ್‌ನಲ್ಲಿ ಕಿವೀಸ್‌ಗೆ ತಿರುಗೇಟು ನೀಡುವತ್ತ ಟೀಂ ಇಂಡಿಯಾ ದಿಟ್ಟ ಹೆಜ್ಜೆ

* ಎರಡನೇ ಇನಿಂಗ್ಸ್‌ನಲ್ಲಿ 216 ರನ್‌ಗಳ ಮುನ್ನಡೆ ಸಾಧಿಸಿದ ಭಾರತ

* ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದ ಶ್ರೇಯಸ್ ಅಯ್ಯರ್

 

Ind vs NZ Kanpur Test Shreyas Iyer Fifty Helps Team India Driver Seat Against New Zealand on Day 4 kvn
Author
Bengaluru, First Published Nov 28, 2021, 2:24 PM IST
  • Facebook
  • Twitter
  • Whatsapp

ಕಾನ್ಪುರ(ನ.28): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್(Shreyas Iyer) ಮತ್ತೊಮ್ಮೆ ಆಕರ್ಷಕ ಬ್ಯಾಟಿಂಗ್ ಮಾಡುವ ಮೂಲಕ ಶ್ರೇಯಸ್ ಭರ್ಜರಿ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಮೂಲಕ ಪಾದಾರ್ಪಣೆ ಟೆಸ್ಟ್‌ ಪಂದ್ಯದಲ್ಲೇ ಶತಕ ಹಾಗೂ ಅರ್ಧಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್‌ ಎನ್ನುವ ಅಪರೂಪದ ದಾಖಲೆಯನ್ನು ಅಯ್ಯರ್‌ ಬರೆದಿದ್ದಾರೆ. ಇದೀಗ ಕಾನ್ಪುರ ಟೆಸ್ಟ್‌ (Kanpur Test) ಪಂದ್ಯದ ನಾಲ್ಕನೇ ದಿನದಾಟದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ (Team India) 7 ವಿಕೆಟ್ ಕಳೆದುಕೊಂಡು 167 ರನ್‌ ಬಾರಿಸಿದ್ದು, ಒಟ್ಟಾರೆ 216 ರನ್‌ಗಳ ಮುನ್ನಡೆ ಸಾಧಿಸಿದೆ

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ (Green Park Stadium) ಮೊದಲ ಇನಿಂಗ್ಸ್‌ನಲ್ಲಿ 49 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಭಾರತ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 14 ರನ್‌ ಬಾರಿಸಿತ್ತು. ಇನ್ನು ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಕಿವೀಸ್‌ ಬೌಲರ್‌ಗಳು ಮಾರಕ ದಾಳಿ ನಡೆಸುವ ಮೂಲಕ ತಬ್ಬಿಬ್ಬಾಗುವಂತೆ ಮಾಡಿದರು. ಒಂದು ಹಂತದಲ್ಲಿ ಕೇವಲ 51 ರನ್‌ಗಳಿಗೆ ಟೀಂ ಇಂಡಿಯಾದ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ಸಮಯೋಚಿತ ಜತೆಯಾಟ ನಿಭಾಯಿಸಿದ ಅಶ್ವಿನ್-ಅಯ್ಯರ್: ಹೌದು, ಕೇವಲ 51 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಆರನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಹಾಗೂ ಶ್ರೇಯಸ್‌ ಅಯ್ಯರ್ 52 ರನ್‌ಗಳ ಸಮಯೋಚಿತ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರವಿಚಂದ್ರನ್ ಅಶ್ವಿನ್‌ 62 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 32 ರನ್‌ ಬಾರಿಸಿ ಕೈಲ್ ಜೇಮಿಸನ್‌ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

Ind vs NZ Kanpur Test: ಭಾರತದ 4 ವಿಕೆಟ್‌ ಪತನ, ಅಶ್ವಿನ್-ಅಯ್ಯರ್ ಜತೆಯಾಟದ ಮೇಲೆ ಎಲ್ಲರ ಚಿತ್ತ

ದಾಖಲೆಯ ಅರ್ಧಶತಕ ಬಾರಿಸಿದ ಶ್ರೇಯಸ್‌ ಅಯ್ಯರ್: ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ಮೊದಲ ಇನಿಂಗ್ಸ್‌ ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಮುಂಬೈ ಮೂಲದ ಶ್ರೇಯಸ್‌ ಅಯ್ಯರ್, ಇದೀಗ ಎರಡನೇ ಇನಿಂಗ್ಸ್‌ನಲ್ಲೂ ಸಮಯೋಚಿತ ಅರ್ಧಶತಕ ಬಾರಿಸಿ ತಂಡದ ಪಾಲಿಗೆ ಆಪತ್ಭಾಂಧವನಾಗಿದ್ದಾರೆ. ಆರಂಭಿಕ ಆಘಾತದ ಸಂಕಷ್ಟದಿಂದ ಪಾರು ಮಾಡಿದ್ದಷ್ಟೇ ಅಲ್ಲದೇ ಚೊಚ್ಚಲ ಟೆಸ್ಟ್‌ನಲ್ಲಿ ಅಪರೂಪದ ದಾಖಲೆಗೂ ಶ್ರೇಯಸ್ ಅಯ್ಯರ್ ಭಾಜನರಾಗಿದ್ದಾರೆ. ಹೌದು, ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್‌ ಎನ್ನುವ ಶ್ರೇಯ ಅಯ್ಯರ್ ಪಾಲಾಗಿದೆ. 109 ಎಸೆತಗಳನ್ನು ಎದುರಿಸಿ ಅಯ್ಯರ್ ಅರ್ಧಶತಕ ಬಾರಿಸಿದರು. ಅಂತಿಮವಾಗಿ ಶ್ರೇಯಸ್ ಅಯ್ಯರ್ 125 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 65 ರನ್‌ ಬಾರಿಸಿ ಟಿಮ್ ಸೌಥಿಗೆ ವಿಕೆಟ್‌ ಒಪ್ಪಿಸಿದರು

ಮುನ್ನಡೆ ಇನ್ನೂರರ ಗಡಿ ದಾಟಲು ನೆರವಾದ ಸಾಹ-ಅಯ್ಯರ್ ಜತೆಯಾಟ: ರವಿಚಂದ್ರನ್ ಅಶ್ವಿನ್ ವಿಕೆಟ್ ಪತನದ ಬಳಿಕ ಅಯ್ಯರ್ ಕೂಡಿಕೊಂಡ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ದಿಮಾನ್ ಸಾಹ ಆಕರ್ಷಕ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮುನ್ನಡೆಯನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಏಳನೇ ವಿಕೆಟ್‌ಗೆ ಈ ಜೋಡಿ 64 ರನ್‌ಗಳ ಜತೆಯಾಟವಾಡುವ ತಂಡಕ್ಕೆ ಆಸರೆಯಾದರು. ಚಹಾ ವಿರಾಮಕ್ಕೂ ಮುನ್ನ ಅಯ್ಯರ್ ವಿಕೆಟ್ ಒಪ್ಪಿಸಿದರೆ, ಮತ್ತೊಂದು ತುದಿಯಲ್ಲಿ ವೃದ್ದಿಮಾನ್ ಸಾಹ 22 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. 

ಸಂಕ್ಷಿಪ್ತ ಸ್ಕೋರ್

ಭಾರತ: 345/10

ಶ್ರೇಯಸ್ ಅಯ್ಯರ್: 105
ಟಿಮ್ ಸೌಥಿ: 69/5

ನ್ಯೂಜಿಲೆಂಡ್: 296/10

ಟಾಮ್ ಲೇಥಮ್: 95
ಅಕ್ಷರ್ ಪಟೇಲ್: 62/5

ಭಾರತ: 167/7 (ಎರಡನೇ ಇನಿಂಗ್ಸ್‌)

ಶ್ರೇಯಸ್ ಅಯ್ಯರ್: 65
ಕೈಲ್ ಜೇಮಿಸನ್: 26/3

(* ನಾಲ್ಕನೇ ದಿನದಾಟದ ಚಹಾ ಬ್ರೇಕ್ ವೇಳೆಗೆ)

Follow Us:
Download App:
  • android
  • ios