Asianet Suvarna News Asianet Suvarna News

IND vs NZ T20: ನ್ಯೂಜಿಲೆಂಡ್ ಅಬ್ಬರಕ್ಕೆ ಟೀಂ ಇಂಡಿಯಾ ಬ್ರೇಕ್, 154 ರನ್ ಟಾರ್ಗೆಟ್!

  • ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ20
  • ಟೀಂ ಇಂಡಿಯಾಗೆ 154 ರನ್ ಟಾರ್ಗೆಟ್ ನೀಡಿದ ಕಿವೀಸ್
  • ರಾಂಚಿಯಲ್ಲಿ ನಡೆಯುತ್ತಿರು ಮಹತ್ವ ಪಂದ್ಯ
IND vs NZ 2nd T20 New zealand set 154 run target to Team India in Ranchi ckm
Author
Bengaluru, First Published Nov 19, 2021, 8:58 PM IST
  • Facebook
  • Twitter
  • Whatsapp

ರಾಂಚಿ(ನ.19):  ಮಾರ್ಟಿನ್ ಗಪ್ಟಿಲ್ ಹಾಗೂ ಡರಿಲ್ ಮೆಚೆಲ್ ಅಬ್ಬರದ ಆರಂಭ ನೀಡಿದರೂ ಟೀಂ ಇಂಡಿಯಾ(Team India) ಬೌಲರ್‌ಗಳ ಕರಾರುವಕ್ ದಾಳಿಗೆ ನ್ಯೂಜಿಲೆಂಡ್(New Zealand) ತತ್ತರಿಸಿತು. ಅಬ್ಬರ ಒಪನಿಂಗ್‌ಗೆ ಮಾತ್ರ ಸೀಮಿತಗೊಂಡಿತು. ಹೀಗಾಗಿ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿದೆ. 

ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ(Rohit Sharma) ನೇರವಾಗಿ ಫೀಲ್ಡಿಂಗ್ ಆಯ್ಕೆಮಾಡಿಕೊಂಡರು. ಚೇಸಿಂಗ್ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿರುವ ಕಾರಣ ರೋಹಿತ್ ಯಾವುದೇ ಪ್ರಯೋಗಾತ್ಮಕ ನಿರ್ಧಾರಕ್ಕೆ ಮುಂದಾಗಲಿಲ್ಲ. ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಇಳಿದ ಬೆನ್ನಲ್ಲೇ ಟೀಂ ಇಂಡಿಯಾ ತನ್ನ ನಿರ್ಧಾರವನ್ನು ಅವಲೋಕಿಸಿತು.

Australian Legendary Cricketer ರಿಕಿ ಪಾಂಟಿಂಗ್ ಟೀಂ ಇಂಡಿಯಾ ಹೆಡ್‌ ಕೋಚ್ ಹುದ್ದೆ ಅಫರ್‌ ನಿರಾಕರಿಸಿದ್ದೇಕೆ..?

ಮಾರ್ಟಿನ್ ಗಪ್ಟಿಲ್(Martin Guptil) ಹಾಗೂ ಡರಿಲ್ ಮಿಚೆಲ್ ಅಬ್ಬರದ ಆರಂಭ, ಟೀಂ ಇಂಡಿಯಾದಲ್ಲಿ ಆತಂಕಕ್ಕೆ ಕಾರಣವಾಯಿತು. ಗಪ್ಟಿಲ್ ಸ್ಫೋಟಕ ಆರಂಭ ನೀಡಿದರು. 15 ಎಸೆತದಲ್ಲಿ 3 ಬೌಂಡರಿ ಹಾಗೂ4 ಸಿಕ್ಸರ್ ಮೂಲಕ 31 ರನ್ ಸಿಡಿಸಿದರು. ಈ ಮೂಲಕ ಗಪ್ಟಿಲ್ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.  ಇಷ್ಟೇ ಅಲ್ಲ ಗರಿಷ್ಠ ರನ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿಯನ್ನು(Virat Kohli) ಹಿಂದಿಕ್ಕಿದರು.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಾಧಕರು(ಅಂತಾರಾಷ್ಟ್ರೀಯ ಕ್ರಿಕೆಟ್)
3231 ರನ್, ಮಾರ್ಟಿನ್ ಗಪ್ಟಿಲ್
3227 ರನ್, ವಿರಾಟ್ ಕೊಹ್ಲಿ 
3086 ರನ್, ರೋಹಿತ್ ಶರ್ಮಾ 
2608 ರನ್, ಆ್ಯರೋನ್ ಫಿಂಚ್ 
2570 ರನ್, ಪೌಲ್ ಸ್ಟಿರ್ಲಿಂಗ್ 

ಮಾರ್ಕ್ ಚಂಪನ್ 21 ರನ್ ಕಾಣಿಕೆ ನೀಡಿದರು. ಡರಿಲ್ ಮಿಚೆಲ್ 28 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು. ಗ್ಲೆನ್ ಫಿಲಿಪ್ಸ್ ಹೋರಾಟ ಮುಂದುವರಿಸಿದರೆ, ಟಿಮ್ ಸೈಫರ್ಟ್ ಅಬ್ಬರಿಸಲಿಲ್ಲ. ಸೈಫರ್ಟ್ 13 ರನ್ ಸಿಡಿಸಿ ಔಟಾದರು.  ಆರಂಭದಲ್ಲಿ ಸ್ಫೋಟಕ ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ನ್ಯೂಜಿಲೆಂಡ್ ತಂಡವನ್ನು ಟೀಂ ಇಂಡಿಯಾ ಬೌಲರ್‌ಗಳು ನಿಯಂತ್ರಿಸುವಲ್ಲಿ ಯಶಸ್ವಿಯಾದರು. 

Ab De Villiers Retires: ಕಳಚಿತು ಕ್ರಿಕೆಟ್ ಕೊಂಡಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಎಬಿಡಿ ಗುಡ್‌ ಬೈ..!

ಗ್ಲೆನ್ ಪಿಲಿಪ್ಸ್ 34 ರನ್ ಸಿಡಿಸಿ ಹರ್ಷಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ಸಿರಾಜ್ ಬದಲು ಟೀಂ ಇಂಡಿಯಾ ಸೇರಿಕೊಂಡ ಹರ್ಷಲ್ ಪಟೇಲ್ ತಮ್ಮ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. 30ನೇ ವಯಸ್ಸಿನಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಹರ್ಷಲ್ ಪಟೇಲ್ 2 ವಿಕೆಟ್ ಕಬಳಿಸಿ ಟೀಂ ಇಂಡಿಯಾಗೆ ಪ್ರಮುಖ ಯಶಸ್ಸು ತಂದುಕೊಟ್ಟರು.

ಜೇಮ್ಸ್ ನೀಶಮ್ ಕೇವಲ 3 ರನ್ ಸಿಡಿಸಿ ಔಟಾದರು. ಮಿಚೆಲ್ ಸ್ಯಾಂಟ್ನರ್ ಅಜೇಯ 8 ರನ್ ಹಾಗೂ ಆ್ಯಡಮ್ ಮಿಲ್ನೇ ಅಜೇಯ 5 ರನ್ ಸಿಡಿಸಿದರು. ಇದರೊಂದಿಗೆ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿತು. ಈ ಮೂಲಕ ಟೀಂ ಇಂಡಿಯಾಗೆ 154 ರನ್ ಟಾರ್ಗೆಟ್ ನೀಡಿದೆ. ಭಾರತದ ಪರ ಹರ್ಷಲ್ ಪಟೇಲ್ 2 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್, ಅಕ್ಸರ್ ಪಟೇಲ್, ದೀಪಕ್ ಚಹಾರ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. 

ರಾಂಚಿ ಮೈದಾನದಲ್ಲಿನ ಸರಾಸರಿ ಸ್ಕೋರ್ ನ್ಯೂಜಿಲೆಂಡ್ ದಾಖಲಿಸಿದೆ. ಇದೀಗ ಟೀಂ ಇಂಡಿಯಾ ಚೇಸಿಂಗ್ ಸಜ್ಜಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಇಂದಿನ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಟೀಂ ಇಂಡಿಯಾಗೆ ಸರಣಿ ವಶಪಡಿಸಿಕೊಳ್ಳುವ ತವಕವಾಗಿದ್ದರೆ, ನ್ಯೂಜಿಲೆಂಡ್ ತಂಡಕ್ಕೆ ಸರಣಿ ಉಳಿಸಿಕೊಳ್ಳುವ ಪ್ರಯತ್ನ. ಹೀಗಾಗಿ ರೋಚಕ ಹೋರಾಟ ಏರ್ಪಡಲಿದೆ.

Follow Us:
Download App:
  • android
  • ios