Asianet Suvarna News Asianet Suvarna News

ಟಾಸ್‌ನಲ್ಲಿ ಫಜೀತಿ, ತಂಡದ ನಿರ್ಧಾರ ತಿಳಿಸಲು ಪರದಾಡಿದ ರೋಹಿತ್!

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದ ಆರಂಭದಲ್ಲಿ ವಿಶೇಷ ಘಟನೆಯೊಂದು ನಡೆದಿದೆ.  ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಅಥವಾ ಬೌಲಿಂಗ್ ಎಂದು ಹೇಳಲು ಕೆಲ ಹೊತ್ತು ತೆಗೆದುಕೊಂಡಿದ್ದಾರೆ. ತಂಡ ನಿರ್ಧಾರ ಏನೂ ಅನ್ನೋದೇ ರೋಹಿತ್‌ಗೆ ಮರೆತು ಹೋದ ಘಟನೆ ನಡೆದಿದೆ.

IND vs NZ 2nd ODI Captain Rohit sharma forgets team decision after wining toss at Raipur ckm
Author
First Published Jan 21, 2023, 5:06 PM IST

ರಾಯಪುರ(ಜ.21):  ಟಾಸ್ ವೇಳೆ ಹಲವು ನಾಯಕರು ತಂಡದಲ್ಲಿನ ಬದಲಾವಣೆ, ತಂಡ ಸೇರಿಕೊಂಡ ಆಟಗಾರರ ಹೆಸರು ಮರೆಯುವುದು ಸಾಮಾನ್ಯ. ಬಹುತೇಕ ನಾಯಕರು ಈ ಸವಾಲು ಎದುರಿಸಿದ್ದಾರೆ. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದ ಬಳಿಕ ತಂಡದ ನಿರ್ಧಾರ ಏನು? ಅನ್ನೋದೇ ಮರೆತುಬಿಟ್ಟಿದ್ದಾರೆ. ಕೆಲ ಹೊತ್ತು ಪರದಾಡಿದ ರೋಹಿತ್ ಕೊನೆಗೂ ಬೌಲಿಂಗ್ ಎಂದಿದ್ದಾರೆ. ರೋಹಿತ್ ಪರದಾಟ ನೋಡಿದ ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್‌ಗೆ ಸಾಕಷ್ಟು ಶ್ರಮವಹಿಸಿದರು ನಗು ತಡೆಯಲು ಸಾಧ್ಯವಾಗಲಿಲ್ಲ. ರೋಹಿತ್ ಪರಿಸ್ಥಿತಿ ನೋಡಿ ನಕ್ಕು ಬಿಟ್ಟರು. ಇತ್ತ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಕೂಡ ರೋಹಿತ್ ನಡೆಗೆ ನಕ್ಕಿದ್ದಾರೆ.

ರಾಯ್‌ಪುರದ ಕ್ರೀಡಾಂಣಗದಲ್ಲಿನ 2ನೇ ಏಕದಿನ ಪಂದ್ಯದ ಟಾಸ್ ವೇಳೆ ಈ ಘಟನೆ ನಡೆದಿದೆ. ಟಿವಿ ನಿರೂಪಕ ರವಿ ಶಾಸ್ತ್ರಿ ಟಾಸ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವೇಳೆ ಇಬ್ಬರು ನಾಯಕರನ್ನು ಸ್ವಾಗತಿಸಿದ ರವಿ ಶಾಸ್ತ್ರಿ, ಜಾವಗಲ್ ಶ್ರೀನಾಥ್‌ಗೂ ಸ್ವಾಗತ ಕೋರಿದ್ದಾರೆ. ಬಳಿಕ ನಾಯಕ ರೋಹಿತ್ ಶರ್ಮಾ ನಾಣ್ಯ ಚಿಮ್ಮಿಸಲಿದ್ದಾರೆ ಎಂದಿದ್ದಾರೆ.

IND VS NZ ನ್ಯೂಜಿಲೆಂಡ್‌ಗೆ ಟೀಂ ಇಂಡಿಯಾ ವೇಗಿಗಳ ಶಾಕ್, 108 ರನ್‌ಗೆ ಆಲೌಟ್!

ನಾಣ್ಯ ನೆಲಕ್ಕೆ ಬೀಳುವ ಮೊದಲು ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್  ಹೆಡ್ಸ್ ಎಂದಿದ್ದಾರೆ. ಆದರೆ ಟೈಲ್ ಬಿದ್ದಿದೆ. ಹೀಗಾಗಿ ಭಾರತ ಟಾಸ್ ಗೆದ್ದುಕೊಂಡಿತು. ಟಾಸ್ ಹೆಕ್ಕಿದ ಜಾವಗಲ್ ಶ್ರೀನಾಥ್ ರೋಹಿತ್ ಬಳಿ ನೋಡಿದರು. ಸಾಮಾನ್ಯವಾಗಿ ಟಾಸ್ ಗೆದ್ದ ತಕ್ಷಣವೇ ನಾಯಕರು ನಿರ್ಧಾರ ಘೋಷಿಸುತ್ತಾರೆ. ಆದರೆ ಜಾಗವಗಲ್ ಶ್ರೀನಾಥ್ ನೋಡುತ್ತಲೇ ಇದ್ದಾರೆ. ರೋಹಿತ್ ಶರ್ಮಾ ಮಾತ್ರ ನಿರ್ಧಾರ ಹೇಳಲೇ ಇಲ್ಲ. ತಲೆ ತಲೆ ಕೆರೆದುಕೊಂಡು, ತಂಡದ ನಿರ್ಧಾರ ಏನು ಅನ್ನೋದನ್ನು ಆಲೋಚಿಸಿದ್ದಾರೆ.

 

 

ಇತ್ತ ಶ್ರೀನಾಥ್ ಹಾಗೂ ಟಾಮ್ ಲಾಥಮ್ ನಕ್ಕು ಬಿಟ್ಟಿದ್ದಾರೆ. ಇಷ್ಟಾದರೂ ರೋಹಿತ್ ತಲೆಗೆ ಬ್ಯಾಟಿಂಗ್ ತೆಗೆದುಕೊಳ್ಳಬೇಕೋ? ಬೌಲಿಂಗ್ ಆಯ್ಕೆ ಮಾಡಿಕೊಳ್ಳಬೇಕೋ ಅನ್ನೋದು ಹೊಳೆಯಲೇ ಇಲ್ಲ. ಕೊನೆಗೆ ರೋಹಿತ್ ಶರ್ಮಾ ಬೌಲಿಂಗ್ ಎಂದು ನಿರ್ಧಾರ ಹೇಳಿದ್ದಾರೆ. ರವಿ ಶಾಸ್ತ್ರಿಯತ್ತ ತಿರುಗಿದ ರೋಹಿತ್ ಶರ್ಮಾ ಬಳಿ ಅಷ್ಟೊಂದು ಆಲೋಚನೆ ಏನಿತ್ತು? ಎಂದು ಪ್ರಶ್ನಿಸಿದ್ದಾರೆ. ತಂಡದಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿದೆ. ಟಾಸ್ ಗೆದ್ದರೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಚರ್ಚೆ ನಡೆಸಲಾಗಿತ್ತು. ಇದರ ಜೊತೆಗೆ ಯಾವುದೇ ಕಂಡೀಷನ್‌ನಲ್ಲಿ ವಿರುದ್ಧವಾಗಿ ನಿರ್ಧಾರ ಪ್ರಕಟಿಸಿ ತಂಡವನ್ನು ಸಜ್ಜುಗೊಳಿಸವು ಕುರಿತು ಮಾತುಕತೆ ನಡೆದಿತ್ತು. ಹೀಗಾಗಿ ಒಂದು ಕ್ಷಣ ತಂಡದ ನಿರ್ಧಾರವೇ ಮರೆತು ಹೋಯಿತು ಎಂದು ರೋಹಿತ್ ಶರ್ಮಾ ಉತ್ತರಿಸಿದ್ದಾರೆ.

ಟಾಸ್‌ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ: ಸರಣಿ ಗೆಲ್ಲುವ ವಿಶ್ವಾಸದಲ್ಲಿ ಟೀಂ ಇಂಡಿಯಾ

ಇದೀಗ ರೋಹಿತ್ ಶರ್ಮಾ ವಿಡಿಯೋ ವೈರಲ್ ಆಗಿದೆ. ಈ ರೀತಿ ಟಾಸ್ ಬಳಿಕ ತಂಡದ ನಿರ್ಧಾರ ಮರೆತಿರುವುದು ಇದೇ ಮೊದಲಲ್ಲ. ಈ ಹಿಂದೆ ಪಾಕಿಸ್ತಾನ ನಾಯಕ ಜಾವೇದ್ ಮಿಯಾಂದಾದ್ ಕೂಡ ನಿರ್ಧಾರ ಮರೆತಿದ್ದರು. ಬಳಿಕ ನಾನು ತಂಡದ ಬಳಿ ಕೇಳಿ ತಿಳಿಸುತ್ತೇನೆ ಎಂದಿದ್ದರು. 

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಟೀಂ ಇಂಡಿಯಾ ಅತ್ಯುತ್ತಮ ಹೋರಾಟ ನೀಡಿತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ನ್ಯೂಜಿಲೆಂಡ್ ಬಳಿ ಉತ್ತರವೇ ಇರಲಿಲ್ಲ. 15ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಗ್ಲೆನ್ ಫಿಲಿಪ್ಸ್ ಹಾಗೂ ಮೆಚೆಲ್ ಬ್ರೇಸ್‌ವೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಹೋರಾಟದಿಂದ ನ್ಯೂಜಿಲೆಂಡ್ 108 ರನ್ ಸಿಡಿಸಿ ಆಲೌಟ್ ಆಗಿದೆ.
 

Follow Us:
Download App:
  • android
  • ios