ಪುಣೆ(ಮಾ.26):  ಜಾನಿ ಬೈರ್‌ಸ್ಟೋ ಶತಕದ ಬೆನ್ನಲ್ಲೇ ಬೆನ್ ಸ್ಟೋಕ್ಸ್ ಸಿಡಿಸಿದ 99 ರನ್ ಇಂಗ್ಲೆಂಡ್ ತಂಡಕ್ಕೆ ಸರಣಿಯಲ್ಲಿ ಭರ್ಜರಿ ಕಮ್‍‌ಬ್ಯಾಕ್ ಅವಕಾಶ ನೀಡಿದೆ..ಇಬ್ಬರ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನತ್ತ ದಾಪುಗಾಲಿಟ್ಟಿದೆ. ಭಾರತ ಬೃಹತ್ ಮೊತ್ತ ಸಿಡಿಸಿದರೂ ಇಂಗ್ಲೆಂಡ್ ನಿರಾಯಾಸವಾಗಿ ಗುರಿ ತಲುಪುವ ಸೂಚನೆ ನೀಡಿದೆ.

ಕೆಎಲ್ ರಾಹುಲ್ ಸೆಂಚುರಿಗೆ ದಿಗ್ಗಜರ ಸಲಾಂ; ಟೀಕಿಸಿದವರಿಂದಲೇ ಶಹಬ್ಬಾಷ್‌ಗಿರಿ!.

337 ರನ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಜಾನಿ ಬೈರ್‌ಸ್ಟೋ ಸ್ಫೋಟಕ ಬ್ಯಾಟಿಂಗ್ ಮೂಲಕ ನೆರವಾದರು. ಇತ್ತ ಬೆನ್ ಸ್ಟೋಕ್ಸ್ ಕೂಡ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಬೈರ್‌ಸ್ಟೋ 109 ಎಸೆತದಲ್ಲಿ 123 ರನ್ ಸಿಡಿಸಿದರು. ಇತ್ತ ಬೆನ್ ಸ್ಟೋಕ್ಸ್ 99 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 1 ರನ್‌ಗಳಿಂದ ಶತಕ ವಂಚಿತರಾದರು.

ಆರಂಭಿಕ ಜೇಸನ್ ರಾಯ್ ಕೂಡ 55 ರನ್ ಕಾಣಿಕೆ ನೀಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡ ಭಾರತದ ಬೃಹತ್ ಮೊತ್ತವನ್ನು ಸುಲಭವಾಗಿ ಚೇಸ್ ಮಾಡುವ ಎಲ್ಲಾ ಸೂಚನೆ ನೀಡಿದೆ. ಜೇಸನ್ ರಾಯ್ ರನೌಟ್ ಆಗಿದ್ದರೆ, ಸ್ಟೋಕ್ಸ್ ವೇಗಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಕೇವಲ 2 ವಿಕೆಟ್ ಪಡೆದ ಟೀಂ ಇಂಡಿಯಾ ತೀವ್ರ ಹಿನ್ನಡೆ ಅನುಭವಿಸಿದೆ.