ಪುಣೆ(ಮಾ.26): ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಾ 336 ರನ್ ಸಿಡಿಸಿದೆ. ಈ ಬೃಹತ್ ಮೊತ್ತದ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಸೆಂಚುರಿ ಶ್ರಮವಿದೆ. ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನದಿಂದ ಡ್ರಾಪ್ ಆಗಿದ್ದ ಕೆಎಲ್ ರಾಹುಲ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ ಇದೀಗ ಅದೇ ಟೀಕಾಕಾರರು ರಾಹುಲ್‌ಗೆ ಸಲಾಂ ಹೇಳಿದ್ದಾರೆ. 

ಕನ್ನಡಿಗ ಕೆ.ಎಲ್‌. ರಾಹುಲ್‌ ಕೆಚ್ಚೆದೆಯ ಶತಕ

114 ಎಸೆತ ಎದುರಿಸಿದ ಕೆಎಲ್ ರಾಹುಲ್ 108 ರನ್ ಸಿಡಿಸಿದರು.  ಟೀಂ ಇಂಡಿಯಾದ ಕಳೆದ ಎರಡು ಶತಕಗಳೂ ಮೂಡಿಬಂದಿರುವುದು ಕೆಎಲ್ ರಾಹುಲ್ ಅವರಿಂದಲೇ ಅನ್ನೋದು ಮತ್ತೊಂದು ವಿಶೇಷ. ರಾಹುಲ್ ದಿಟ್ಟ ಹೋರಾಟಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಹುಲ್‌, ಪಂತ್ ಅಬ್ಬರ; ಇಂಗ್ಲೆಂಡ್‌ಗೆ ಕಠಿಣ ಗುರಿ.