Asianet Suvarna News Asianet Suvarna News

ರಿಷಭ್ ಪಂತ್ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಇನಿಂಗ್ಸ್‌ ಆರಂಭಿಸಲಿ ಎಂದ ಮಾಜಿ ಕ್ರಿಕೆಟಿಗ..!

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿ ಜುಲೈ 7ರಿಂದ ಆರಂಭ
ಟಿ20 ಸರಣಿಯಲ್ಲಿ ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿಯಲಿ ಎಂದ ಜಾಫರ್
ಟಿ20 ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ವಾಸೀಂ ಜಾಫರ್

Ind vs Eng Team India should think about opening with Rishabh Pant in T20Is says Wasim Jaffer kvn
Author
Bengaluru, First Published Jul 6, 2022, 5:48 PM IST

ಮುಂಬೈ(ಜು.06): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಇದೀಗ ಉಭಯ ತಂಡಗಳು ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯತ್ತ ಗಮನ ಹರಿಸಿವೆ. ಜುಲೈ 07ರಿಂದ ಇಂಗ್ಲೆಂಡ್ ಎದುರು ಮೊದಲ ಟಿ20 ಪಂದ್ಯ ಆರಂಭವಾಗಲಿದ್ದು, ರಿಷಭ್ ಪಂತ್ ಅವರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿ, ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ರಿಷಭ್ ಪಂತ್, 2017ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡದ ವಿರುದ್ದವೇ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ರಿಷಭ್ ಪಂತ್‌ (Rishabh Pant) ಅಂತಾರಾಷ್ಟ್ರೀಯ ಕ್ರಿಕೆಟ್‌ ಮಾದರಿಗಳ ಪೈಕಿ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಕ್ಕಷ್ಟು ಯಶಸ್ಸು ಟಿ20 ಕ್ರಿಕೆಟ್‌ನಲ್ಲಿ ಸಿಕ್ಕಿಲ್ಲ. ಎಡಗೈ ಸ್ಪೋಟಕ ಬ್ಯಾಟರ್‌ ರಿಷಭ್ ಪಂತ್, ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಪರ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಆದರೆ ಐಪಿಎಲ್‌ನಲ್ಲಿ ಅಬ್ಬರಿಸಿದಷ್ಟು ಪಂತ್ ರಾಷ್ಟ್ರೀಯ ಟಿ20 ತಂಡದಲ್ಲಿ ಅಬ್ಬರಿಸಿಲ್ಲ. ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ 5 ಶತಕ ಬಾರಿಸಿದ್ದಾರೆ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಆಟಗಾರ ಎನಿಸಿಕೊಂಡಿಲ್ಲ. 

ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ರಿಷಭ್ ಪಂತ್ ನಾಯಕನಾಗಿ ಕಣಕ್ಕಿಳಿದಿದ್ದರೂ ಸಹಾ ನಾಯಕನ ಆಟವನ್ನು ಪ್ರದರ್ಶಿಸಲು ಯಶಸ್ವಿಯಾಗಿರಲಿಲ್ಲ. 24 ವರ್ಷದ ರಿಷಭ್ ಪಂತ್, ಇದುವರೆಗೂ ಭಾರತ ಕ್ರಿಕೆಟ್ ತಂಡದ (Indian Cricket Team) ಪರ 48 ಟಿ20 ಪಂದ್ಯಗಳನ್ನಾಡಿ 23.15ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಅರ್ಧಶತಕ ಸಹಿತ ಕೇವಲ 741 ರನ್ ಗಳಿಸಿದ್ದಾರೆ. ಇದೀಗ ರಿಷಭ್ ಪಂತ್, ಇಂಗ್ಲೆಂಡ್ ವಿರುದ್ದ ಜುಲೈ 07ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ವಾಸೀಂ ಜಾಫರ್ (Wasim Jaffer), ಪಂತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವುದು ಒಳ್ಳೆಯ ನಿರ್ಧಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.

Ind vs Eng ಸೀಮಿತ ಓವರ್‌ಗಳ ಸರಣಿ: ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರಲೇಬೇಕಾದ ಸಂಗತಿಗಳಿವು

ಈ ಕುರಿತಂತೆ ಟ್ವೀಟ್ ಮಾಡಿರುವ ರಿಷಭ್ ಪಂತ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಅವರನ್ನು ಆರಂಭಿರನ್ನಾಗಿ ಕಣಕ್ಕಿಳಿಸುವ ಕುರಿತಂತೆ ಭಾರತೀಯ ಥಿಂಕ್ ಟ್ಯಾಂಕ್ ಆಲೋಚಿಸಬೇಕಾಗಿದೆ. ನನಗನಿಸುವ ಪ್ರಕಾರ ಅವರು ಆರಂಭಿಕರಾಗಿ ಯಶಸ್ವಿಯಾಗಬಲ್ಲರು ಎಂದು ವಾಸೀಂ ಜಾಫರ್ ಟ್ವೀಟ್ ಮಾಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿ ಜುಲೈ 7ಕ್ಕೆ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಸೌಥಾಂಪ್ಟನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬಳಿಕ ಜುಲೈ 9, 10ಕ್ಕೆ ಉಳಿದೆರಡು ಪಂದ್ಯಗಳು ಕ್ರಮವಾಗಿ ಬಮಿಂಗ್‌ಹ್ಯಾಮ್‌ ಹಾಗೂ ನಾಟಿಂಗ್‌ಹ್ಯಾಮ್‌ನಲ್ಲಿ ನಿಗದಿಯಾಗಿವೆ. ಏಕದಿನ ಪಂದ್ಯಗಳು ಜುಲೈ 12, 14 ಮತ್ತು 17ಕ್ಕೆ ಕ್ರಮವಾಗಿ ಓವಲ್‌, ಲಾರ್ಡ್ಸ್ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿವೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೀಮಿತ ಓವರ್‌ಗಳ ಸರಣಿಯನ್ನು ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಇದಷ್ಟೇ ಅಲ್ಲದೇ Sony LIV app ಮೂಲಕವೂ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಯನ್ನು ವೀಕ್ಷಿಸಬಹುದಾಗಿದೆ.

ಭಾರತ-ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ

ಜುಲೈ 07 - ಮೊದಲ ಟಿ20- ಸೌಥಾಂಪ್ಟನ್- ರಾತ್ರಿ 10.30
ಜುಲೈ 09 - ಎರಡನೇ ಟಿ20- ಬರ್ಮಿಂಗ್‌ಹ್ಯಾಮ್- ಸಂಜೆ 7.00
ಜುಲೈ 10 - ಮೂರನೇ ಟಿ20 - ನಾಟಿಂಗ್‌ಹ್ಯಾಮ್‌- ಸಂಜೆ 7.00  

Follow Us:
Download App:
  • android
  • ios