ಫಾರ್ಮ್‌ನಲ್ಲಿದ್ರೆ ಸೆಂಚುರಿ, ಇಲ್ದಿದ್ರೆ ಶೂನ್ಯ; ರಾಹುಲ್ ಬ್ಯಾಟಿಂಗ್ ಸೀಕ್ರೆಟ್ ಬಿಚ್ಚಿಟ್ಟ ಗಂಭೀರ್
ಕ್ರಿಕೆಟ್‌ನಲ್ಲಿ ಎಂತಾ ದಿಗ್ಗಜ ಆಟಗಾರ ಕೂಡ ಫಾರ್ಮ್ ಸಮಸ್ಯೆ ಅನುಭವಿಸಿದ್ದಾನೆ. ಸತತ ಕಳಪೆ ಪ್ರದರ್ಶನದ ಬಳಿಕ ಅಷ್ಟೇ ಅತ್ಯುತ್ತಮವಾಗಿ ಕಮ್‌ಬ್ಯಾಕ್ ಮಾಡಿದ ಅದೆಷ್ಟೋ ಉದಾಹರಣೆಗಳಿವೆ. ಆದರೆ ಫಾರ್ಮ್ ಹಾಗೂ ಕಳಪೆ ಫಾರ್ಮ್ ನಡುವೆ ಒಂದು ಪರ್ಫಾಮೆನ್ಸ್ ಇದೆ. ಆದರೆ ಈ ಫರ್ಮಾಮೆನ್ಸ್ ಕೆಎಲ್ ರಾಹುಲ್ ಬಳಿ ಇಲ್ಲ ಎಂದು ಗಂಭೀರ್ ಹೇಳಿದ್ದಾರೆ. ರಾಹುಲ್ ಬ್ಯಾಟಿಂಗ್ ಚಿತ್ರಣ ಕುರಿತು ಗಂಭೀರ್ ಮಾತು ಇಲ್ಲಿದೆ.
ನವದೆಹಲಿ(ಮಾ.18): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಹಿನ್ನಡೆ ತಂಡದ ಬ್ಯಾಟಿಂಗ್ ವೈಫಲ್ಯವೇ ಕಾರಣ. ಅದರಲ್ಲೂ ಕೆಎಲ್ ರಾಹುಲ್ ಬ್ಯಾಟಿಂಗ್ ತಂಡದ ಸಮಸ್ಯೆಯಾಗಿ ಪರಿಣಮಿಸಿದೆ. ಆರಂಭದಲ್ಲೇ ವಿಕೆಟ್ ಪತನ ಟೀಂ ಇಂಡಿಯಾ ಸೋಲಿಗೆ ಕಾರಣವಾಗುತ್ತಿದೆ. ಇದೀಗ ಕೆಎಲ್ ರಾಹುಲ್ ಬ್ಯಾಟಿಂಗ್ ವಿಶ್ಲೇಷಣೆ ಮಾಡಿದ ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಕೆಲ ಸೂಕ್ಷ್ಮ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
ಕನ್ನಡಿಗ ಕೆ.ಎಲ್. ರಾಹುಲ್‌ಗೆ ಸಿಗುತ್ತಾ ಮತ್ತೊಮ್ಮೆ ಚಾನ್ಸ್?.
ಕೆಎಲ್ ರಾಹುಲ್ ಬ್ಯಾಟಿಂಗ್ ಎರಡು ಭಿನ್ನ ಮುಖಗಳನ್ನು ಒಳಗೊಂಡಿದೆ. ಒಂದು ಸತತ ಅಬ್ಬರ. ಅದು ಯಾವ ಮಾದರಿ ಕ್ರಿಕೆಟ್ ಆದರೂ ಸರಿ, ರಾಹುಲ್ ಅಬ್ಬರಿಸುತ್ತಲೆ ಇರುತ್ತಾರೆ. ಸತತ ಸೆಂಚುರಿ ಅರ್ಧಶತಕ ಸಿಡಿಸುತ್ತಾರೆ. ಸಂಪೂರ್ಣ ತಂಡ ರನ್ ಗಳಿಸಲು ತಿಣುಕಾಡಿದರೂ, ರಾಹುಲ್ ಅಬ್ಬರಿಸುತ್ತಾರೆ. ಆದರೆ ವೈಫಲ್ಯ ಆವರಿಸಿಕೊಂಡರೆ ರಾಹುಲ್ ಸಂಪೂರ್ಣವಾಗಿ ಕ್ರಿಕೆಟ್‌ನಿಂದ ದೂರ ಉಳಿದಂತೆ ಕಾಣಿಸುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಳಪೆ ಫಾರ್ಮ್‌ನಲ್ಲಿದ್ದಾಗ ತಂಡಕ್ಕಾಗಿ ಅಲ್ಪಕೊಡುಗೆ ನೀಡುತ್ತಾರೆ. ರನ್ ಗಳಿಸಲು ಪ್ರಯತ್ನಿಸುತ್ತಾರೆ. ಆದರೆ ರಾಹುಲ್ ಹಾಗಲ್ಲ. ಕಳಪೆಯಾದರೆ ಒಂದಂಕಿ ದಾಟಲ್ಲ ಎಂದು ಗಂಭೀರ್ ಹೇಳಿದ್ದಾರೆ. ಗಂಭೀರ್ ರಾಹುಲ್ ಬ್ಯಾಟಿಂಗ್ ಎಳೆ ಬಿಚ್ಚಿಡಲು ಕಾರಣ, ಸದ್ಯ ನಡಯುತ್ತಿರುವ ಟಿ20 ಸರಣಿಯಲ್ಲಿನ ಪ್ರದರ್ಶನ.
ಇಂಗ್ಲೆಂಡ್ ವಿರುದ್ಧದ ಆರಂಭಿಕ 3 ಪಂದ್ಯದಲ್ಲಿ ಕೆಎಲ್ ರಾಹುಲ್ ಪ್ರದರ್ಶನ ಗಂಭೀರ್ ಮಾತನ್ನು ಪುಷ್ಠೀಕರಿಸುತ್ತದೆ. ಕಾರಣ 1 ಮತ್ತು 2ನೇ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ಡಕೌಟ್ ಆದರೆ, 3ನೇ ಪಂದ್ಯದಲ್ಲಿ 1 ರನ್ ಸಿಡಿಸಿದ್ದಾರೆ. ಇದೀಗ ರಾಹುಲ್‌ಗೆ ವಿಶ್ರಾಂತಿ ನೀಡುವ ಮಾತುಗಳು ಕೇಳಿಬರುತ್ತಿದೆ.