Asianet Suvarna News Asianet Suvarna News

Racial Abuse ಭಾರತೀಯ ಅಭಿಮಾನಿಗಳತ್ತ ಜನಾಂಗೀಯ ನಿಂದನೆ: ಇಂಗ್ಲೆಂಡ್ ಕ್ರಿಕೆಟ್ ತನಿಖೆ

* ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯದ ವೇಳೆ ಭಾರತೀಯ ಅಭಿಮಾನಿಗಳ ಮೇಲೆ ಜನಾಂಗೀಯ ನಿಂದನೆ
* ಟ್ವೀಟ್‌ ಮೂಲಕ ತಮಗಾದ ಅವಮಾನ ಹೊರಹಾಕಿದ ಟೀಂ ಇಂಡಿಯಾ ಫ್ಯಾನ್ಸ್‌
* ಜನಾಂಗೀಯ ನಿಂದನೆ ಕುರಿತಾಗಿ ಕೇಳಿ ಬಂದ ಆರೋಪದ ಬಗ್ಗೆ ತನಿಖೆ ಆರಂಭಿಸುವುದಾಗಿ ತಿಳಿಸಿದ ಇಸಿಬಿ

Ind vs Eng Racist Abuse over Indian Fans among the crowd at Edgbaston being investigated Says ECB kvn
Author
Bengaluru, First Published Jul 6, 2022, 11:34 AM IST

ಬರ್ಮಿಂಗ್‌ಹ್ಯಾಮ್(ಜು.06‌): ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ 5ನೇ ಟೆಸ್ಟ್‌ ವೇಳೆ ಕೆಲ ಕಿಡಿಗೇಡಿಗಳು ಭಾರತೀಯ ಅಭಿಮಾನಿಗಳತ್ತ ಜನಾಂಗೀಯ ನಿಂದನೆ ನಡೆಸಿದ ಘಟನೆ ನಡೆದಿದ್ದು, ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ಮತ್ತು ವಾರ್ವಿಕ್‌ಶೈರ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ ತನಿಖೆ ಆರಂಭಿಸಿವೆ. ಹಲವು ಭಾರತೀಯ ಅಭಿಮಾನಿಗಳು ಘಟನೆ ಬಗ್ಗೆ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದು, ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಇಂಗ್ಲೆಂಡ್‌ನ ಕೆಲ ಅಭಿಮಾನಿಗಳು ಅವಾಚ್ಯ ಶಬ್ಧಗಳಿಂದ ತಮ್ಮನ್ನು ನಿಂದಿಸಿದ್ದಾಗಿ ಭಾರತೀಯರು ಟ್ವೀಟ್‌ ಮಾಡಿದ್ದಾರೆ.

ಓರ್ವ ನೆಟ್ಟಿಗ ತಾವು ಎಜ್‌ಬಾಸ್ಟನ್‌ನಲ್ಲಿ ಎದುರಿಸಿದ ಜನಾಂಗೀಯ ನಿಂದನೆಯ ಬಗ್ಗೆ ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದರು. ಈ ಟ್ವೀಟ್‌ ಅನ್ನು ಯಾರ್ಕ್‌ಶೈರ್ ತಂಡದ ಕ್ರಿಕೆಟಿಗ ರಫಿಕ್‌ ರಿಟ್ವೀಟ್ ಮಾಡಿದ್ದಾರೆ. ಈ ಬಳಿಕ ಈ ವಿಚಾರ ಹೆಚ್ಚು ಗಮನ ಸೆಳೆದಿದೆ. ಎಜ್‌ಬಾಸ್ಟನ್‌ನ 22ನೇ ಬ್ಲಾಕ್‌ನ ಎರಿಕ್‌ ಹೋಲಿಸ್‌ನಲ್ಲಿ ಭಾರತೀಯ ಅಭಿಮಾನಿಗಳ ಮೇಲೆ ಜನಾಂಗೀಯ ನಿಂದನೆಗಳನ್ನು ಮಾಡಿದ್ದಾರೆ. ನಮ್ಮನ್ನು ಅಶ್ಲೀಲ ಪದಗಳಿಂದ ನಿಂದಿಸಿದರು. ನಾವಾಗ ಸ್ಥಳೀಯ ಸಿಬ್ಬಂದಿಯ ಬಳಿ ಹೋಗಿ ಕನಿಷ್ಠ 10 ಬಾರಿ ಇವರೇ ನೋಡಿ ಈ ರೀತಿ ಜನಾಂಗೀಯ ನಿಂದನೆ ಮಾಡುತ್ತಿದ್ದಾರೆ ಎಂದು ತಿಳಿಸಿದರೂ ಸಹಾ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರು.

ಭಾರತದೆದುರು ಟೆಸ್ಟ್ ಸರಣಿ ಡ್ರಾ ಮಾಡಿಕೊಂಡ ಇಂಗ್ಲೆಂಡ್

ಟೆಸ್ಟ್‌ ಪಂದ್ಯಗಳಲ್ಲಿ ಕಠಿಣ ಗುರಿಗಳನ್ನು ಸುಲಭವಾಗಿ ಬೆನ್ನತ್ತುವುದನ್ನು ಅಭ್ಯಾಸ ಮಾಡಿಕೊಂಡಿರುವ ಜಾನಿ ಬೇರ್‌ಸ್ಟೋವ್‌ (Jonny Bairstow) ಮತ್ತು ಜೋ ರೂಟ್‌ (Joe Root), ಭಾರತ ವಿರುದ್ಧ ಮರುನಿಗದಿತ 5ನೇ ಟೆಸ್ಟ್‌ನಲ್ಲಿ ಮನಮೋಹಕ ಶತಕಗಳನ್ನು ಸಿಡಿಸಿ ಇಂಗ್ಲೆಂಡ್‌ 378 ರನ್‌ ಗುರಿ ಬೆನ್ನತ್ತಿ ದಾಖಲೆ ಬರೆಯಲು ನೆರವಾದರು. ಇದು ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಯಶಸ್ವಿಯಾಗಿ ಬೆನ್ನತ್ತಿದ ಅತಿದೊಡ್ಡ ಮೊತ್ತ. 5 ಪಂದ್ಯಗಳ ಸರಣಿಯನ್ನು 2-2ರಲ್ಲಿ ಡ್ರಾ ಮಾಡಿಕೊಂಡು, ಪಟೌಡಿ ಟ್ರೋಫಿಯನ್ನು ಇಂಗ್ಲೆಂಡ್‌ ತನ್ನಲ್ಲೇ ಉಳಿಸಿಕೊಂಡಿದೆ. 2007ರ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಭಾರತದ ಕನಸು ಈಡೇರಲಿಲ್ಲ.

Birmingham Test ಭಾರತೀಯರ ಮೇಲೆ ಇಂಗ್ಲೆಂಡ್‌ ಫ್ಯಾನ್ಸ್‌ ಜನಾಂಗೀಯ ನಿಂದನೆ..!

ಆಕ್ರಮಣಕಾರಿ ಆಟ: ಇಂಗ್ಲೆಂಡ್‌ 378 ರನ್‌ಗಳನ್ನು 76.4 ಓವರಲ್ಲಿ ತಲುಪಿತು. 4.93ರ ರನ್‌ರೇಟ್‌ನಲ್ಲಿ ರನ್‌ ಕಲೆಹಾಕಿದ ಇಂಗ್ಲಿಷ್‌ ಬ್ಯಾಟರ್‌ಗಳು ಇನ್ನಿಂಗ್‌್ಸನಲ್ಲಿ ಒಟ್ಟು 48 ಬೌಂಡರಿ, 2 ಸಿಕ್ಸರ್‌ಗಳನ್ನು ಸಿಡಿಸಿದರು. ಭಾರತೀಯ ಬೌಲರ್‌ಗಳ ಯಾವ ತಂತ್ರವೂ ಕೆಲಸ ಮಾಡಲಿಲ್ಲ.

ಸತತ 4 ಟೆಸ್ಟ್‌ಗಳನ್ನು ಚೇಸ್‌ ಮಾಡಿ ಗೆದ್ದ ಇಂಗ್ಲೆಂಡ್‌!

ಕಳೆದ ತಿಂಗಳು ನ್ಯೂಜಿಲೆಂಡ್‌ ವಿರುದ್ಧ 3 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಇಂಗ್ಲೆಂಡ್‌, ಮೂರೂ ಪಂದ್ಯಗಳನ್ನು ಗುರಿ ಬೆನ್ನತ್ತಿ ಗೆದ್ದಿತ್ತು. ಮೊದಲ ಪಂದ್ಯದಲ್ಲಿ 277 ರನ್‌ ಚೇಸ್‌ ಮಾಡಿದ್ದ ಇಂಗ್ಲೆಂಡ್‌, 2ನೇ ಟೆಸ್ಟ್‌ನಲ್ಲಿ 299 ರನ್‌ ಬೆನ್ನತ್ತಿ ಗೆದ್ದಿತ್ತು. 3ನೇ ಪಂದ್ಯದಲ್ಲಿ 296 ರನ್‌ ಗುರಿಯನ್ನು 54.2 ಓವರಲ್ಲಿ ಚೇಸ್‌ ಮಾಡಿತ್ತು. ಇದೀಗ ಭಾರತ ವಿರುದ್ಧ 378 ರನ್‌ ಗುರಿಯನ್ನು ಸುಲಭವಾಗಿ ಬೆನ್ನತ್ತಿ ಗಮನ ಸೆಳೆದಿದೆ.

ಈ ವರ್ಷ ವಿದೇಶದಲ್ಲಿ ಭಾರತಕ್ಕೆ ಸತತ 3ನೇ ಸೋಲು

ಈ ವರ್ಷ ಆರಂಭದಲ್ಲಿ ದ.ಆಫ್ರಿಕಾ ಪ್ರವಾಸದಲ್ಲಿ 2 ಟೆಸ್ಟ್‌ಗಳನ್ನು ಸೋತಿದ್ದ ಭಾರತ ಇದೀಗ ಇಂಗ್ಲೆಂಡ್‌ ವಿರುದ್ಧ ಪರಾಭವಗೊಂಡಿದೆ. ದ.ಆಫ್ರಿಕಾ ವಿರುದ್ಧ 240, 212 ರನ್‌ಗಳನ್ನು ರಕ್ಷಿಸಿಕೊಳ್ಳಲು ಭಾರತ ವಿಫಲವಾಗಿತ್ತು. ಇಂಗ್ಲೆಂಡ್‌ ವಿರುದ್ಧ 378 ರನ್‌ ಬಿಟ್ಟುಕೊಟ್ಟು ಪಂದ್ಯ ಸೋತಿದೆ.

Follow Us:
Download App:
  • android
  • ios