ಮೂರು ಮಾದರಿಯಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಈಗಾಗಲೇ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ಟೀಂ ಇಂಡಿಯಾಗೆ ಅತೀ ದೊಡ್ಡ ಹಿನ್ನಡೆಯಾಗಿದೆ. ಇದೀಗ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯಿಂದಲೂ ಬುಮ್ರಾ ಹೊರಗುಳಿಯುತ್ತಿದ್ದಾರೆ.

ಮುಂಬೈ(ಮಾ.02); ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಗೆ ಮತ್ತೊಂದು ಶಾಕ್ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ತಮ್ಮನ್ನು ಕೈಬಿಡಲು ಮಾಡಿದ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದೆ. ಹೀಗಾಗಿ 4ನೇ ಟಸ್ಟ್ ಪಂದ್ಯದಿಂದ ಬುಮ್ರಾ ಹೊಗುಳಿದಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ನಿಗದಿತ ಓವರ್ ಕ್ರಿಕೆಟ್‌ಗೆ ಬುಮ್ರಾ ಅಲಭ್ಯ ಅನ್ನೋ ಮಾಹಿತಿ ಹೊರಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಸ್ಪ್ರೀತ್ ಮನವಿಗೆ ಸ್ಪಂದಿಸಿದ ಬಿಸಿಸಿಐ; 4ನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅಲಭ್ಯ!..

ಇಂಗ್ಲೆಂಡ್ ವಿರುದ್ಧದ 3 ಪಂದ್ಯದ ಏಕದಿನ ಸರಣಿ ಮಾರ್ಚ್ 23 ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಟಿ20 ಸರಣಿಯಿಂದ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಏಕದಿನ ಸರಣಿಗೆ ಬುಮ್ರಾ ವಾಪಾಸ್ ಸಾಧ್ಯತೆ ಇಲ್ಲ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಈ ಮೂಲಕ ಟೀಂ ಇಂಡಿಯಾಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ.

ವೈಯುಕ್ತಿ ಕಾರಣಗಳನ್ನು ನೀಡಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಬುಮ್ರಾ ಹೊರಗುಳಿದಿದ್ದಾರೆ. ಬುಮ್ರಾ ಮನವಿಗೆ ಸ್ಪಂದಿಸಿದ ಬಿಸಿಸಿಐ, ಬುಮ್ರಾರನ್ನು 4ನೇ ಟೆಸ್ಟ್ ಪಂದ್ಯದ ಆಯ್ಕೆಯಿಂದ ಕೈಬಿಟ್ಟಿತು. ಇದೀಗ ಏಕದಿನದಿಂದಲೂ ಹೊರಗುಳಿಯಲು ಬುಮ್ರಾ ನಿರ್ಧರಿಸಿದ್ದಾರೆ. 

ಇಂಗ್ಲೆಂಡ್ ವಿರುದ್ಧದ ನಿಗದಿತ ಓವರ್ ಸರಣಿಯಿಂದ ಹೊರಗುಳಿಯಲಿರುವ ಬುಮ್ರಾಗೆ ಮುಂದಿನ ಸರಣಿ ಐಪಿಎಲ್. 2021ರ ಐಪಿಎಲ್ ಟೂರ್ನಿಗೆ ಬುಮ್ರಾ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.