Asianet Suvarna News Asianet Suvarna News

ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ ಇಡೀ ತಂಡವೇ ತಿರುಗಿಬೀಳುತ್ತೆ: ಕೆ.ಎಲ್ ರಾಹುಲ್‌ ಎಚ್ಚರಿಕೆ

* ಲಾರ್ಡ್ಸ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ

* ಇಂಗ್ಲೆಂಡ್ ಆಟಗಾರರಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕನ್ನಡಿಗ ಕೆ ಎಲ್ ರಾಹುಲ್

* ನಮ್ಮ ಒಬ್ಬ ಆಟಗಾರನನ್ನು ಕೆಣಕಿದರೆ, ಉಳಿದೆಲ್ಲರು ತಿರುಗೇಟು ನೀಡಲಿದ್ದೇವೆ

Ind vs Eng  If You Go After One Of Our Guys All 11 Will Come Right Back Says KL Rahul kvn
Author
London, First Published Aug 18, 2021, 9:09 AM IST
  • Facebook
  • Twitter
  • Whatsapp

ಲಂಡನ್(ಆ.18)‌: ನಮ್ಮ ತಂಡದ ಒಬ್ಬ ಆಟಗಾರನನ್ನು ಕೆಣಕಿದರೆ ಇಡೀ ತಂಡವನ್ನು ಕೆಣಕಿದಂತೆ ಎಂದು ಭಾರತದ ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್‌ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. 

2ನೇ ಟೆಸ್ಟ್‌ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರಾಹುಲ್‌, ಎದುರಾಳಿ ಆಟಗಾರರು ಯಾರಾದರೂ ನಮ್ಮ ಆಟಗಾರನನ್ನು ಕೆಣಕಿದರೆ ನಾವು ಉಳಿದ 10 ಮಂದಿ ಕೂಡಾ ಅವರ ವಿರುದ್ಧ ತಿರುಗಿ ಬೀಳುತ್ತೇವೆ. ಅಂತಹ ವಾತಾವರಣ ಮತ್ತು ತಂಡವನ್ನು ನಾವು ಹೊಂದಿದ್ದೇವೆ’ ಎಂದರು. ಭಾರತ 151 ರನ್‌ಗಳ ರೋಚಕ ಗೆಲುವು ಸಾಧಿಸಿದ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ಆಟಗಾರರ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು.

ಕೊಂಚ ತಡವಾದರೂ, ಸರಿಯಾಗಿಯೇ ಆಯ್ತು; ಲಾರ್ಡ್ಸ್ ಗೆಲುವನ್ನು ಬಣ್ಣಿಸಿದ ರೋಹಿತ್ ಶರ್ಮಾ

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್‌ ಮಾಡಲು ಭಾರತ ತಂಡವನ್ನು ಆಹ್ವಾನಿಸಿತ್ತು. ಕೆ.ಎಲ್‌. ರಾಹುಲ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 364 ರನ್‌ ಕಲೆಹಾಕಿತ್ತು. ರಾಹುಲ್‌ 250 ಎಸೆತಗಳಲ್ಲಿ 129 ರನ್‌ ಚಚ್ಚುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೆ.ಎಲ್‌. ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

Follow Us:
Download App:
  • android
  • ios