* ಗಾಯದ ಸಮಸ್ಯೆಯಿಂದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ* ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಜುಲೈ 14ರಂದು ಆರಂಭ* ವಿರಾಟ್ ಕೊಹ್ಲಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಪ್ರಗ್ಯಾನ್ ಓಜಾ 

ನವದೆಹಲಿ(ಜು.13): ಫಾರ್ಮ್‌ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ವಿರಾಟ್ ಕೊಹ್ಲಿಯ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಅಚ್ಚರಿಯ ಹೇಳಿಕೆ ನೀಡಿದ್ದು, ಒಂದು ವೇಳೆ ವಿರಾಟ್ ಕೊಹ್ಲಿ ಎರಡನೇ ಏಕದಿನ ಪಂದ್ಯದಲ್ಲಿಯೂ ಕಣಕ್ಕಿಳಿಯದೇ ಹೋದರೇ ಗಾಯಕ್ಕಿಂತಲೂ ಬೇರೆ ಇನ್ನೇನೋ ಇದೆ ಎಂದರ್ಥವೆಂದು ಓಜಾ ಹೇಳಿದ್ದಾರೆ.

ಒಂದು ವೇಳೆ ಜುಲೈ 14ರಂದು ಲಾರ್ಡ್ಸ್‌ ಮೈದಾನದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ಆದರೆ ಅವರು ಕಣಕ್ಕಿಳಿಯಬೇಕು. ಒಂದು ವೇಳೆ ಕೊಹ್ಲಿ ಎರಡನೇ ಪಂದ್ಯದಲ್ಲೂ ಕಣಕ್ಕಿಳಿಯದೇ ಹೋದರೇ ತೊಡೆಸಂದಿನ ನೋವು ಮತ್ತಷ್ಟು ಕಾಡಿದೆ ಎಂಬರ್ಥದ ಮಾತುಗಳನ್ನು ಓಜಾ ಆಡಿದ್ದಾರೆ. ವಿರಾಟ್ ಕೊಹ್ಲಿ ಒಂದು ವೇಳೆ ಸಂಪೂರ್ಣ ಫಿಟ್ ಆಗಿದ್ದರೇ ಅವರು ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಬೇಕು. ಮೊದಲ ಏಕದಿನ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯರಿಲ್ಲ, ಆದರೆ ಎರಡನೇ ಹಾಗೂ ಮೂರನೇ ಏಕದಿನ ಪಂದ್ಯಕ್ಕೆ ಅವರು ಲಭ್ಯರಾಗಿರಲಿದ್ದಾರೆ ಎಂದು ಕೇಳಿದ್ದೇನೆ ಎಂದು ಕ್ರಿಕ್‌ಬಜ್‌ ಜತೆಗಿನ ಮಾತುಕತೆ ವೇಳೆ ತಿಳಿಸಿದ್ದಾರೆ.

ನನ್ನ ಪ್ರಕಾರ ವಿರಾಟ್ ಕೊಹ್ಲಿ ಗಾಯಕ್ಕಿಂತ ಮಿಗಿಲಾಗಿ ಮುನ್ನೆಚ್ಚರಿಕೆಯಿಂದ ಅವರು ವಿಶ್ರಾಂತಿ ಪಡೆದಿರಬಹುದು. ಗಾಯದ ಸಮಸ್ಯೆ ತೀವ್ರವಾಗಿ ಇದ್ದಂತೆ ಇಲ್ಲ. ಆದರೆ ಒಂದು ವೇಳೆ ವಿರಾಟ್ ಕೊಹ್ಲಿ ಮುಂದಿನ ಪಂದ್ಯವನ್ನೂ ಆಡದೇ ಹೋದರೇ ಅಲ್ಲಿ ಗಾಯಕ್ಕಿಂತ ಬೇರೆಯದ್ದೇನೋ ಇದೆ ಎಂದು ಅರ್ಥೈಸಬೇಕಾಗುತ್ತದೆ ಎಂದು ಪ್ರಗ್ಯಾನ್ ಓಜಾ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ, ತೊಡೆ ಸಂದು ನೋವಿನ ಪ್ರಮಾಣ ನಾವು ತಿಳಿದುಕೊಂಡಿದ್ದಕ್ಕಿಂತ ಕೊಂಚ ತೀವ್ರವಾಗಿದ್ದರೂ ಆಗಿರಬಹುದು. ಒಂದು ವೇಳೆ ಕೊಹ್ಲಿ ಸಂಪೂರ್ಣ ಫಿಟ್ ಆಗಿ ತಂಡ ಕೂಡಿಕೊಂಡರೇ ಯಾರು ತಮ್ಮ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಒಂದು ವೇಳೆ ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ಆದರೆ ಶ್ರೇಯಸ್ ಅಯ್ಯರ್ ಇಲ್ಲವೇ ಸೂರ್ಯಕುಮಾರ್ ಯಾದವ್ ಇಬ್ಬರಲ್ಲಿ ಒಬ್ಬರು ತಮ್ಮ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ ಎಂದು ಓಜಾ ಹೇಳಿದ್ದಾರೆ.

9 ವರ್ಷಗಳಾಯ್ತು, ಈಗಲೂ ರೋಹಿತ್ ಶರ್ಮಾ ಜತೆಗಿನ ಬಾಂಧವ್ಯ ಗಟ್ಟಿಯಾಗಿದೆ ಎಂದ ಧವನ್..!

ಇನ್ನು ಟೀಂ ಇಂಡಿಯಾ ಮಾಜಿ ವೇಗಿ ಅರ್‌ಪಿ ಸಿಂಗ್, ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದು, ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ಆದರೆ ಶ್ರೇಯಸ್ ಅವರ ಬದಲಿಗೆ ತಂಡ ಕೂಡಿಕೊಳ್ಳಲಿ. ಯಾಕೆಂದರೆ ಸದ್ಯ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್‌ನಲ್ಲಿದ್ದು, ಅವರನ್ನು ಡಿಸ್ಟರ್ಬ್‌ ಮಾಡುವುದು ಸರಿಯಲ್ಲ. ಸೂರ್ಯಕುಮಾರ್ ಯಾದವ್, ಇಂಗ್ಲೆಂಡ್ ಎದುರಿನ ಟಿ220 ಸರಣಿಯಲ್ಲಿ ಶತಕ ಸಿಡಿಸಿದ್ದಾರೆ ಎಂದು ರುದ್ರಪ್ರತಾಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುವ ಮೂಲಕ 10 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿಗೆ ತತ್ತರಿಸಿ ಕೇವಲ 110 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಸುಲಭ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.