Asianet Suvarna News Asianet Suvarna News

ನಾಲ್ಕೇ ದಿನಕ್ಕೆ ಮುಗಿದ ಲೀಡ್ಸ್‌ ಟೆಸ್ಟ್‌: ಟೀಂ ಇಂಡಿಯಾಗೆ 76 ರನ್‌ಗಳ ಇನಿಂಗ್ಸ್‌ ಸೋಲು..!

* ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಟೀಂ ಇಂಡಿಯಾಗೆ ಹೀನಾಯ ಸೋಲು

* ಇಂಗ್ಲೆಂಡ್ ಎದುರು ಇನಿಂಗ್ಸ್ ಹಾಗೂ 76 ರನ್‌ಗಳ ಅಂತರದ ಸೋಲು

* 5 ವಿಕೆಟ್ ಕಬಳಿಸಿ ಮಿಂಚಿದ ಓಲಿ ರಾಬಿನ್‌ಸನ್‌

Ind vs Eng England Thrashed Team India by Innings and 76 Runs in Leeds Test kvn
Author
Leeds, First Published Aug 28, 2021, 5:26 PM IST

ಲೀಡ್ಸ್‌(ಆ.28): ವೇಗಿ ಓಲಿ ರಾಬಿನ್‌ಸನ್‌ ಮಾರಕ ದಾಳಿ ಹಾಗೂ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ದಯಾನೀಯ ಬ್ಯಾಟಿಂಗ್ ವೈಫಲ್ಯದ ಪರಿಣಾಮ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್ ತಂಡವು ಮೂರನೇ ಟೆಸ್ಟ್‌ ಪಂದ್ಯವನ್ನು ಇನಿಂಗ್ಸ್‌ ಹಾಗೂ 76 ರನ್‌ಗಳ ಅಂತರದ ಗೆಲುವು ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿವೆ. 

ಮೂರನೇ ದಿನದಾಟದಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 215 ರನ್‌ ಗಳಸಿದ್ದ ಟೀಂ ಇಂಡಿಯಾ, ನಾಲ್ಕನೇ ದಿನದಾಟದಲ್ಲಿ ನಾಟಕೀಯ ಕುಸಿತ ಕಾಣುವ ಮೂಲಕ ಆಘಾತಕಾರಿ ಸೋಲಿನತ್ತ ಮುಖ ಮಾಡಿತು. ನಾಲ್ಕನೇ ದಿನದಾಟದ ಆರಂಭದಲ್ಲಿ ಕೇವಲ 42 ರನ್‌ಗಳ ಅಂತರದಲ್ಲಿ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿತು. ಪೂಜಾರ ನಾಲ್ಕನೇ ದಿನದಾಟದಲ್ಲಿ ಖಾತೆಗೆ ಒಂದು ಸೇರಿಸದೇ ವಿಕೆಟ್ ಒಪ್ಪಿಸಿದರೆ, ಕೊಹ್ಲಿ 55 ರನ್‌ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಉಪನಾಯಕ ರಹಾನೆ 10 ಹಾಗೂ ಜಡೇಜಾ 30 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಪಂತ್ ಒಂದು ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 278 ರನ್‌ಗಳಿಗೆ ಸರ್ವಪತನ ಕಂಡಿತು. 

ಲೀಡ್ಸ್‌ ಟೆಸ್ಟ್‌: ಟೀಂ ಇಂಡಿಯಾ ದಿಢೀರ್ ಕುಸಿತ, ಕೊಹ್ಲಿ,ರಹಾನೆ,ಪಂತ್ ಔಟ್‌..!

ಇಂಗ್ಲೆಂಡ್ ಪರ ವೇಗಿ ಓಲಿ ರಾಬಿನ್‌ಸನ್ 5 ವಿಕೆಟ್ ಪಡೆದರೆ, ಕ್ರೆಗ್ ಓವರ್‌ಟನ್‌ 3 ಹಾಗೂ ಮೋಯಿನ್ ಅಲಿ ಮತ್ತು ಆಂಡರ್‌ಸನ್‌ ತಲಾ ಒಂದೊಂದು ವಿಕೆಟ್ ಪಡೆದರು.

ಹೀಗಿತ್ತು ಮೂರನೇ ಟೆಸ್ಟ್: ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 78 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಆಕರ್ಷಕ ಶತಕ, ಬರ್ನ್ಸ್‌, ಹಮೀದ್ ಹಾಗೂ ಮಲಾನ್ ಸಮಯೋಚಿತ ಅರ್ಧಶತಕಗಳ ನೆರವಿನಿಂದ 432 ರನ್‌ಗಳನ್ನು ಕಲೆಹಾಕುವ ಮೂಲಕ 354 ರನ್‌ಗಳ ಮುನ್ನಡೆ ಗಳಿಸಿತ್ತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಮೂರನೇ ದಿನ ದಿಟ್ಟ ಪ್ರತಿರೋಧ ತೋರಿತಾದರೂ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ.
 

Follow Us:
Download App:
  • android
  • ios