ಅಹಮ್ಮದಾಬಾದ್(ಮಾ.14);  ಜೇಸನ್ ರಾಯ್, ಡೇವಿಡ್ ಮಲನ್, ನಾಯಕ ಇಯಾನ ಮಾರ್ಗನ್ ಸೇರಿದಂತೆ ಇಂಗ್ಲೆಂಡ್ ಪ್ರಮುಖ ಬ್ಯಾಟ್ಸ್‌ಮನ್‌ಗಳ ಸಮಯೋಚಿತ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿದೆ.

ಟೆಸ್ಟ್ ಅಬ್ಬರಕ್ಕೆ ಬ್ರೇಕ್; ಟಿ20ಯಲ್ಲಿ ಟೀಂ ಇಂಡಿಯಾಗೆ ಮೊದಲ ಆಘಾತ

ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ಬೃಹತ್ ಮೊತ್ತ ಕನಸು ಪುಡಿಯಾಗಿದೆ. ಜೇಸನ್ ರಾಯ್ 46 ರನ್ ಸಿಡಿಸಿದರೆ, ಡೇವಿಡ್ ಮಿಲನ್ 24, ಜಾನಿ ಬೈರ್‌ಸ್ಟೋ 20, ನಾಯಕ ಇಯಾನ್ ಮಾರ್ಗನ್ 28, ಬೆನ್ ಸ್ಟೋಕ್ಸ್ 24 ರನ್ ಕಾಣಿಕೆ ನೀಡಿದರು.

ಅಂತಿಮವಾಗಿ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 164 ರನ್ ಸಿಡಿಸಿತು. ಸುಂದರ್ ಹಾಗೂ ಶಾರ್ದೂಲ್ ತಲಾ 2 ವಿಕೆಟ್ ಕಬಳಿಸಿದರು. ಭುವನೇಶ್ವರ್ ಕುಮಾರ್ ಹಾಗೂ ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಕಬಳಿಸಿದರು.