* ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ 5ನೇ ಟೆಸ್ಟ್‌ ಪಂದ್ಯ ರದ್ದು* 300 ಕೋಟಿ ರುಪಾಯಿ ನಷ್ಟದ ಸುಳಿಗೆ ಸಿಲುಕಿದ ಇಂಗ್ಲೆಂಡ್* ವಿವಾದ ಬಗೆಹರಿಸುವಂತೆ ಐಸಿಸಿ ಮೊರೆ ಹೋದ ಇಂಗ್ಲೆಂಡ್‌

ಲಂಡನ್(ಸೆ.13)‌: ಭಾರತ ವಿರುದ್ಧ ನಡೆಯಬೇಕಿದ್ದ 5ನೇ ಟೆಸ್ಟ್‌ ಪಂದ್ಯ ಕೊರೋನಾ ಸೋಂಕಿನ ಭೀತಿಯಿಂದ ದಿಢೀರ್‌ ರದ್ದಾದ ಕಾರಣ, ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) 300 ಕೋಟಿ ರುಪಾಯಿ ನಷ್ಟದ ಸುಳಿಗೆ ಸಿಲುಕಿದೆ. 

ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯದ ಫಲಿತಾಂಶವನ್ನು ಏನೆಂದು ಘೋಷಿಸಬೇಕು ಎನ್ನುವ ಬಗ್ಗೆ ಇಸಿಬಿ ಹಾಗೂ ಬಿಸಿಸಿಐ ಇನ್ನೂ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ, ಮಧ್ಯಸ್ಥಿಕೆ ವಹಿಸುವಂತೆ ಇಸಿಬಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಗೆ ಅಧಿಕೃತವಾಗಿ ಮನವಿ ಸಲ್ಲಿಸಿದೆ. ಐಸಿಸಿ, ಪಂದ್ಯವನ್ನು ರದ್ದು ಎಂದು ಘೋಷಿಸಿದರೆ 5 ಪಂದ್ಯಗಳ ಸರಣಿ 2-1ರ ಅಂತರದಲ್ಲಿ ಭಾರತದ ಪಾಲಾಗಲಿದೆ. ಆಗ ಪಂದ್ಯದ ವಿಮೆ ಹಣ ಇಸಿಬಿಗೆ ಸಿಗುವುದಿಲ್ಲ.

Scroll to load tweet…

ಕೊಹ್ಲಿ ಸೈನ್ಯಕ್ಕೆ ಕೊರೋನಾ ಆತಂಕ; ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ ರದ್ದು!

ಪಂದ್ಯವನ್ನು ಭಾರತ ಬಿಟ್ಟುಕೊಟ್ಟಿದೆ ಎಂದು ನಿರ್ಧಾರವಾದರೆ, ಆಗ ಸರಣಿ 2-2ರಲ್ಲಿ ಡ್ರಾಗೊಳ್ಳಲಿದ್ದು ಇಸಿಬಿಗೆ ವಿಮೆ ಹಣ ಸಿಗಲಿದೆ. ಪಂದ್ಯವನ್ನು ಬೇರೊಂದು ದಿನ ಆಯೋಜಿಸುವ ಬಗ್ಗೆ ಇಸಿಬಿ ಹಾಗೂ ಬಿಸಿಸಿಐ ಘೋಷಿಸಿದ್ದರೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ. ಜೊತೆಗೆ ಎರಡೂ ತಂಡಗಳಿಗೆ ಬಿಡುವಿಲ್ಲದ ವೇಳಾಪಟ್ಟಿ ಇರುವ ಕಾರಣ ಮುಂದಿನ ವರ್ಷ ಜೂನ್‌, ಜುಲೈ ವರೆಗೂ ಪಂದ್ಯ ಆಯೋಜನೆ ಕಷ್ಟ ಎನ್ನಲಾಗಿದೆ.