* ಓವಲ್ ಟೆಸ್ಟ್‌ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ ಟೀಂ ಇಂಡಿಯಾ* ಓವಲ್‌ನಿಂದ ಮ್ಯಾಂಚೆಸ್ಟರ್‌ನತ್ತ ಮುಖಮಾಡಿದ ವಿರಾಟ್ ಕೊಹ್ಲಿ ಪಡೆ* ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯವು ಸೆಪ್ಟೆಂಬರ್ 10ರಿಂದ ಆರಂಭ

ಮ್ಯಾಂಚೆಸ್ಟರ್(ಸೆ.08)‌: ಇಂಗ್ಲೆಂಡ್‌ ವಿರುದ್ಧ ಸೆಪ್ಟೆಂಬರ್ 10ರಿಂದ ಆರಂಭಗೊಳ್ಳಲಿರುವ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಡಲು ಭಾರತ ತಂಡ ಮಂಗಳವಾರ ಲಂಡನ್‌ನಿಂದ ಮ್ಯಾಂಚೆಸ್ಟರ್‌ಗೆ ಪ್ರಯಾಣಿಸಿತು. 

Add Asianetnews Kannada as a Preferred SourcegooglePreferred

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬುಧವಾರದಿಂದ ಅಭ್ಯಾಸ ಆರಂಭಿಸಲಿದೆ. ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಕೋಚ್‌ ರವಿಶಾಸ್ತ್ರಿ ಹಾಗೂ ಇತರ ಸಹಾಯಕ ಸಿಬ್ಬಂದಿ ಲಂಡನ್‌ನಲ್ಲಿ ಉಳಿದಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2-1ರ ಮುನ್ನಡೆ ಹೊಂದಿರುವ ಟೀಂ ಇಂಡಿಯಾ, ಕೊನೆಯ ಟೆಸ್ಟ್‌ ಪಂದ್ಯವನ್ನು ಗೆದ್ದು ಗೆಲುವಿನೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಮುಕ್ತಾಯಗೊಳಿಸುವ ಲೆಕ್ಕಾಚಾರದಲ್ಲಿದೆ.

ಓವಲ್‌ ಟೆಸ್ಟ್‌ ಪಂದ್ಯವನ್ನು 157 ರನ್‌ಗಳಿಂದ ಜಯಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ವಿರಾಟ್ ಕೊಹ್ಲಿ ಪಡೆ, ಮ್ಯಾಂಚೆಸ್ಟರ್‌ನಲ್ಲೂ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಲಂಡನ್‌ನಿಂದ ಇಂಗ್ಲೆಂಡ್‌ಗೆ ತೆರಳುತ್ತಿರುವ ಚಿತ್ರಗಳನ್ನು ಅಕ್ಷರ್ ಪಟೇಲ್‌, ವೃದ್ದಿಮಾನ್ ಸಾಹ, ಉಮೇಶ್ ಯಾದವ್ ಸೇರಿದಂತೆ ಹಲವು ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

Ind vs Eng 5ನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

Scroll to load tweet…
Scroll to load tweet…
View post on Instagram

ಇಂಗ್ಲೆಂಡ್‌ ನೆಲದಲ್ಲಿ ಬರೋಬರಿ 14 ವರ್ಷಗಳಿಂದ ಟೆಸ್ಟ್ ಸರಣಿ ಗೆಲ್ಲಲು ಟೀಂ ಇಂಡಿಯಾ ಹರಸಾಹಸ ಪಡುತ್ತಿದೆಯಾದರೂ ಇನ್ನೂ ಯಶಸ್ವಿಯಾಗಿಲ್ಲ. ಒಂದು ವೇಳೆ ಟೀಂ ಇಂಡಿಯಾ ಕೊನೆಯ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರು 2-1 ಅಂತರದಲ್ಲಿ ಟೆಸ್ಟ್ ಸರಣಿ ಟೀಂ ಇಂಡಿಯಾ ಪಾಲಾಗಲಿದೆ. 2007ರಲ್ಲಿ ರಾಹುಲ್‌ ದ್ರಾವಿಡ್‌ ನೇತೃತ್ವದ ಟೀಂ ಇಂಡಿಯಾ ಕಡೆಯ ಬಾರಿಗೆ ಇಂಗ್ಲೆಂಡ್‌ ನೆಲದಲ್ಲಿ ಟೆಸ್ಟ್ ಸರಣಿ ಗೆಲುವಿನ ಸಂಭ್ರಮವನ್ನು ಆಚರಿಸಿತ್ತು. ಇದೀಗ ವಿರಾಟ್ ಕೊಹ್ಲಿ ಟೆಸ್ಟ್‌ ಸರಣಿ ಗೆಲುವಿನ ಹೊಸ್ತಿಲಲ್ಲಿದೆ.