* 5ನೇ ಟೆಸ್ಟ್‌ ಪಂದ್ಯಕ್ಕೆ ಕೋಚ್‌ ಕ್ರಿಸ್ ಸಿಲ್ವರ್‌ವುಡ್‌ ಇಂಗ್ಲೆಂಡ್‌ ತಂಡ ಪ್ರಕಟ* ಸೆಪ್ಟೆಂಬರ್ 10ರಿಂದ ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯ ಆರಂಭ* ಜೋಸ್ ಬಟ್ಲರ್‌ ಹಾಗೂ ಜ್ಯಾಕ್ ಲೀಚ್‌ ಇಂಗ್ಲೆಂಡ್ ತಂಡ ಸೇರ್ಪಡೆ

ಮ್ಯಾಂಚೆಸ್ಟರ್(ಸೆ.08)‌: ಭಾರತ ವಿರುದ್ಧ 5ನೇ ಹಾಗೂ ಅಂತಿಮ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟಗೊಂಡಿದ್ದು, ಜೋಸ್‌ ಬಟ್ಲರ್‌ ಹಾಗೂ ಎಡಗೈ ಸ್ಪಿನ್ನರ್‌ ಜ್ಯಾಕ್‌ ಲೀಚ್‌ ತಂಡಕ್ಕೆ ವಾಪಸಾಗಿದ್ದಾರೆ. 

ಸೆಪ್ಟೆಂಬರ್‌ 10 ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ 5 ಹಾಗೂ ಕೊನೆಯ ಟೆಸ್ಟ್‌ ಪಂದ್ಯಕ್ಕೆ ಕೋಚ್‌ ಕ್ರಿಸ್‌ ಸಿಲ್ವರ್‌ವುಡ್‌ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದ್ದು, ಬಟ್ಲರ್‌ ಹಾಗೂ ಲೀಚ್‌ಗೆ ಮಣೆ ಹಾಕಿದ್ದಾರೆ. ತಮ್ಮ ಪತ್ನಿ 2ನೇ ಮಗುವಿಗೆ ಜನ್ಮ ನೀಡಿದ ಕಾರಣ ಬಟ್ಲರ್‌ ರಜೆ ಪಡೆದು 4ನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಬಟ್ಲರ್‌ ಬದಲು ತಂಡ ಕೂಡಿಕೊಂಡಿದ್ದ ಸ್ಯಾಮ್‌ ಬಿಲ್ಲಿಂಗ್ಸ್‌ ಕೌಂಟಿ ಕ್ರಿಕೆಟ್‌ಗೆ ಮರಳಿದ್ದಾರೆ. 

ಅಜಿಂಕ್ಯ ರಹಾನೆಗೆ ಟೀಂ ಇಂಡಿಯಾದಲ್ಲಿ ಮತ್ತೊಂದು ಚಾನ್ಸ್‌ ಸಿಕ್ಕಿದ್ರೆ ಅದೃಷ್ಟ..!

Scroll to load tweet…

ಓವಲ್‌ನಲ್ಲಿ ನಡೆದ 4ನೇ ಟೆಸ್ಟ್‌ ಪಂದ್ಯದಲ್ಲಿ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್ ತಂಡವು ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಇಂಗ್ಲೆಂಡ್‌ 157 ರನ್‌ಗಳ ಅಂತರದಲ್ಲಿ ಟೀಂ ಇಂಡಿಯಾಗೆ ಶರಣಾಗಿತ್ತು. ಇದರೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-1ರ ಮುನ್ನಡೆ ಕಾಯ್ದುಕೊಂಡಿದೆ. ಸರಣಿ ಡ್ರಾ ಮಾಡಿಕೊಳ್ಳಬೇಕಿದ್ದರೆ ಇಂಗ್ಲೆಂಡ್ ತಂಡವು ಕೊನೆಯ ಟೆಸ್ಟ್‌ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 

ತಂಡ: ರೂಟ್‌(ನಾಯಕ), ಬರ್ನ್‌‍, ಹಮೀದ್‌, ಮಲಾನ್‌, ಬೇರ್‌ಸ್ಟೋವ್‌, ಪೋಪ್‌, ಅಲಿ, ಬಟ್ಲರ್‌, ಸ್ಯಾಮ್‌ ಕರ್ರನ್‌, ಲಾರೆನ್ಸ್‌, ವೋಕ್ಸ್‌, ವುಡ್‌, ಓವರ್‌ಟನ್‌, ಆ್ಯಂಡರ್‌ಸನ್‌, ಲೀಚ್‌, ರಾಬಿನ್ಸನ್‌.