ಪುಣೆ(ಮಾ.  28)   ಟಿ20, ಟೆಸ್ಟ್ ಸರಣಿಗಳಲ್ಲಿ ಇಂಗ್ಲೆಂಡ್  ಬಗ್ಗು ಬಡಿದಿದ್ದ ಭಾರತ ಏಕದಿನದಲ್ಲಿಯೂ ಪರಾಕ್ರಮ ಮೆರೆದಿದೆ. ರೋಚಕ ಪಂದ್ಯದಲ್ಲಿ ಕೊನೆಗೂ ಭಾರತ ಏಳು ರನ್ ಗಳಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್  ಮಾಡಿದ ಭಾರತ  48.2 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 329 ರನ್ ಗಳಿಸಿ ಎದುರಾಳಿ ತಂಡಕ್ಕೆ ಗೆಲ್ಲಲು 330 ರನ್ ಗಳ ಗುರಿ ನೀಡಿತು.  ಈ ಗುರಿ ಬೆನ್ನು ಹತ್ಇತದ ಇಂಗ್ಲೆಂಡ್ ಗೆ ಭುವನೇಶ್ವರ ಕುಮಾರ್ ಆಘಾತ ನೀಡಿದರು.

ಕಳೆದ ಎರಡು ಪಂದ್ಯಗಳಲ್ಲಿ ಶತಕದ ಜತೆಯಾಟ ನೀಡಿದ್ದ ಇಂಗ್ಲೆಂಡ್ ಆರಂಭಿಕರನ್ನು ಭುವಿ ಬಲಿಪಡೆದರು.  ಬಳಿಕ ಜೊತೆಯಾದ ಬೆನ್ ಸ್ಟೋಕ್ಸ್, ಡೇವಿಡ್ ಮಲನ್ ಉತ್ತಮ ಜೊತೆಯಾಟದ ಮೂಲಕ ತಂಡದ ರನ್ ಚೇತರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. 

ಪಂತ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಇಂಜಮಾಮ್

ಸ್ಯಾಮ್ ಕರನ್ ದಿಟ್ಟ  ಹೋರಾಟ; ಎಂಟನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಸ್ಯಾಮ್ ಕರನ್ ಏಕಾಂಗಿಯಾಗಿ ಇಂಗ್ಲೆಂಡ್ ತಂಡವನ್ನು ಗೆಲುವಿನ ಸಮೀಪ ತಂದಿದ್ದರು. ಸಮಬಲದ ಹೋರಾಟದಲ್ಲಿ ಕರನ್ ಆಟ ಮಾತ್ರ ಎಲ್ಲ ಕ್ರಿಕೆಟ್ ಪಂಡಿತರಿಂದ ಮೆಚ್ಚುಗೆಗೆ ವ್ಯಕ್ತವಾಯಿತು. ಸ್ಯಾಮ್ ಕರನ್ ಅವರ ಏಕಾಂಗಿ ಹೋರಾಟ (83 ಎಸೆತಗಳಿಗೆ 95 ರನ್) ಇಂಗ್ಲೆಂಡ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲವಾಯಿತು. 

ಒಂದು ಕಡೆ  ಕ್ರೀಸ್ ಕಾಯ್ದುಕೊಂಡ ಕರನ್ ಕೆಲಸ ಸಂದರ್ಭದಲ್ಲಿ ಸಿಂಗಲ್ ರನ್ ತೆಗೆದುಕೊಳ್ಳಲಿಲ್ಲ. ಭಾರತದ ಫಿಲ್ಡಿಂಗ್ ಸಹ ಕಳಪೆಯಾಗಿತ್ತು. ವಿರಾಕ್  ಕೊಹ್ಲಿ ಅದ್ಭುತ ಕ್ಯಾಚ್ ಪಡೆದು ಮಿಂಚಿದರು. ಭಾರತ ಈ ಮೂಲಕ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಆಯಿತು . ಕರನ್ ಪಂದ್ಯ ಪುರುಷರಾದರೆ ಬ್ಯಾರ್ ಸ್ಟೋವ್ ಸರಣಿ ಸರ್ವೋತ್ತಮರಾದರು.