ಕರಾಚಿ(ಮಾ.28): ರಿಷಭ್‌ ಪಂತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದಿನದಿಂದಲೂ ಧೋನಿ ಹಾಗೂ ಗಿಲ್‌ಕ್ರಿಸ್ಟ್‌ ಜತೆ ಹೋಲಿಕೆ ಮಾಡುವ ಚರ್ಚೆಗಳು ಆರಂಭವಾಗಿವೆ. ವಿಸ್ಪೋಟಕ ಬ್ಯಾಟಿಂಗ್‌ ಹಾಗೂ ವಿಕೆಟ್‌ ಹಿಂದೆ ಚುರುಕಿನ ಕೀಪಿಂಗ್‌ ಮೂಲಕ ಎಂ ಎಸ್‌ ಧೋನಿ ಹಾಗೂ ಆಡಂ ಗಿಲ್‌ಕ್ರಿಸ್ಟ್‌ ದಿಗ್ಗಜ ವಿಕೆಟ್‌ ಕೀಪರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಡೆಲ್ಲಿ ಮೂಲದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಪಂತ್‌, ಈ ಇಬ್ಬರು ದಿಗ್ಗಜರ ಸಾಲಿಗೆ ಸೇರಬೇಕೆಂದಿದ್ದರೆ ಸಾಕಷ್ಟು ಹಾದಿ ಸವೆಸಬೇಕಿದೆ. ಹೀಗಿರುವಾಗಲೇ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ 23 ವರ್ಷದ ಪಂತ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅಂಪೈರ್‌ ಎಡವಟ್ಟು: ವಿಶ್ವಕಪ್‌ ಫೈನಲ್‌ನಲ್ಲಿ ಹೀಗಾಗಿದ್ದರೆ ಏನ್ಮಾಡ್ತೀರಾ ಎಂದ ಚೋಪ್ರಾ..!

ರಿಷಭ್‌ ಪಂತ್‌ ಟೀಂ ಇಂಡಿಯಾ ಕೂಡಿಕೊಂಡ ಬಳಿಕ ಕೆಳ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಾಢ್ಯವಾಗಿದೆ. ಕಳೆದ ಆರೇಳು ತಿಂಗಳುಗಳಿಂದ ರಿಷಭ್‌ ಪಂತ್‌ರನ್ನು ಗಮನಿಸುತ್ತಿದ್ದೇನೆ. ವಿವಿಧ ಕ್ರಮಾಂಕದಲ್ಲಿ ಪಂತ್ ಬ್ಯಾಟಿಂಗ್ ಮಾಡಿ ಚುರುಕಾಗಿ ರನ್‌ ಗಳಿಸುವುದನ್ನು ನೋಡಿ ಖುಷಿಯಾಗುತ್ತದೆ ಎಂದು ಇಂಜಿ ಹೇಳಿದ್ದಾರೆ.

ಪಂತ್ ರೀತಿ ಸ್ಪೋಟಕ ಬ್ಯಾಟಿಂಗ್‌ ನಡೆಸುವ ವಿಕೆಟ್‌ ಕೀಪರ್‌ಗಳನ್ನು ಕಳೆದ 30-35 ವರ್ಷದಲ್ಲಿ ಕೇವಲ ಇಬ್ಬರನ್ನಷ್ಟೇ ನೋಡಿದ್ದೇನೆ. ಆಡಂ ಗಿಲ್‌ಕ್ರಿಸ್ಟ್‌ ಹಾಗೂ ಮಹೇಂದ್ರ ಸಿಂಗ್ ಧೋನಿ ನೋಡನೋಡುತ್ತಿದ್ದಂತೆ ಪಂದ್ಯದ ಗತಿಯನ್ನೇ ಬದಲಿಸಿ ಬಿಡುತ್ತಿದ್ದರು. ಸದ್ಯ ಪಂತ್ ಇದೇ ರೀತಿ ಆಟವನ್ನು ದೀರ್ಘಕಾಲ ಆಡಿದರೆ, ಧೋನಿ ಹಾಗೂ ಗಿಲ್‌ಕ್ರಿಸ್ಟ್‌ರನ್ನು ಹಿಂದಿಕ್ಕಿ ಬಹುದೂರ ಸಾಗಲಿದ್ದಾರೆ ಎಂದು ಇಂಜಮಾಮ್ ಹೇಳಿದ್ದಾರೆ.