Asianet Suvarna News Asianet Suvarna News

IND vs AUS ಏಷ್ಯಾಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧವೂ ಮುಗ್ಗರಿಸಿದ ಭಾರತ!

ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ಇದೀಗ ತವರಿನ ಸರಣಿಯ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ.

IND vs AUS t20 Australia all round performance help to beat team india by 4 wickets in first match ckm
Author
First Published Sep 20, 2022, 10:35 PM IST

ಮೊಹಾಲಿ(ಸೆ.20): ಬ್ಯಾಟಿಂಗ್‌ನಲ್ಲಿ 208 ರನ್ ಸಿಡಿಸಿ ಬೀಗಿದ್ದ ಟೀಂ ಇಂಡಿಯಾ, ಬೌಲಿಂಗ್‌ನಲ್ಲಿ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ, ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಏಷ್ಯಾಕಪ್ ಟೂರ್ನಿ ಸೋಲಿನ ಬಳಿಕ ಟಿ20 ವಿಶ್ವಕಪ್ ಟೂರ್ನಿ ಮೇಲೆ ಕಣ್ಣಿಟ್ಟಿದ್ದ ಟೀಂ ಇಂಡಿಯಾಗೆ ಇದೀಗ ತವರಿನಲ್ಲೇ ಮೊದಲು ಸೋಲು ತೀವ್ರ ಹಿನ್ನಡೆ ತಂದಿದೆ. 209 ರನ್ ಟಾರ್ಗೆಟನ್ನು ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ ಟಿ20ಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ಮುಂದುವರಿದಿದೆ.

ಗೆಲುವಿಗೆ 209 ರನ್ ಬೃಹತ್ ಟಾರ್ಗೆಟ್ ಪಡೆದಿದ್ದ ಆಸ್ಟ್ರೇಲಿಯಾ(Australia) ಡಿಸೆಂಟ್ ಆರಂಭ ಪಡೆಯಿತು.  ನಾಯಕ ಆ್ಯರೋನ್ ಫಿಂಚ್ ಕ್ಯಾಮರೋನ್ ಗ್ರೀನ್ 39 ರನ್ ಜೊತೆಯಾಟ ನೀಡಿದರು. ಆದರೆ ಫಿಂಚ್ ಅಬ್ಬರ 22 ರನ್‌ಗೆ ಔಟಾದರು. ಮೊದಲ ವಿಕೆಟ್ ಪತನದ ಬಳಿಕ ಕ್ಯಾಮರೊನ್ ಗ್ರೀನ್ ಹಾಗೂ ಸ್ಟೀವನ್ ಸ್ಮಿತ್ ಜೊತೆಯಾಟ ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿತು. ಗ್ರೀನ್ ಸ್ಪೋಟಕ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ ವೇಗವಾಗಿ ರನ್ ಕಲೆಹಾಕಿತು. ಕೇವಲ 30 ಎಸೆತದಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 61 ರನ್ ಸಿಡಿಸಿ ಗ್ರೀನ್ ಔಟಾದರು. 

Yuvraj Singh Six 6s: ಇಂಗ್ಲೀಷರ ಅಹಂಕಾರ ಅಡಗಿಸಿದ್ದ 6 ಸಿಕ್ಸರ್‌ಗಳಿಗೆ 15 ವರ್ಷ!

ಇತ್ತ ಸ್ಟೀವನ್ ಸ್ಮಿತ್ 24 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಸ್ಮಿತ್ ಔಟ್‌ಗಾಗಿ ನಾಯಕ ರೋಹಿತ್ ಶರ್ಮಾ(Rohit sharma) ಡಿಆರ್‌ಎಸ್ ಮೊರೆ ಹೋಗಿದ್ದರು. ಇದು ಭಾರತದ ಪರವಾಗಿ ಬಂದಿತ್ತು. ಇದರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಕೂಡ ಪತನಗೊಂಡಿತು. ಸ್ಮಿತ್ ಹಾಗೂ ಮ್ಯಾಕ್ಸ್‌ವೆಲ್ ವಿಕೆಟ್ ಪಡೆಯಲು ಭಾರತ ಡಿಆರ್‌ಎಸ್(DRS) ಬಳಸಿಕೊಂಡಿತು. ಉಮೇಶ್ ಯಾದವ್ ಮಿಂಚಿನ ದಾಳಿಯಲ್ಲಿ ಎರಡು ಪ್ರಮುಖ ವಿಕೆಟ್ ಪತನ ಟೀಂ ಇಂಡಿಯಾಗೆ(Team India) ಭರ್ಜರಿ ಮೇಲುಗೈ ತಂದುಕೊಟ್ಟಿತು. 

ಸತತ ವಿಕೆಟ್ ಪತನ ಆಸ್ಟ್ರೇಲಿಯಾ ತಂಡದಲ್ಲಿ ಆತಂಕ ಹೆಚ್ಚಿಸಿತು. ಜೋಶ್ ಇಂಗ್ಲಿಸ್ 17 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್(Axar patel) ಸ್ಪಿನ್ ಮೋಡಿಯೂ ಆಸೀಸ್‌ಗೆ ಕಂಟಕವಾಯಿತು. ಆದರೆ ಟಿಮ್ ಡೇವಿಡ್ ಹಾಗೂ ಮಾಥ್ಯೂ ವೇಡ್ ಹೋರಾಟ ಪಂದ್ಯದ ಗತಿಯನ್ನು ಬದಲಿಸಲು ಆರಂಭಿಸಿತು. ಯಶಸ್ಸಿನಲ್ಲಿದ್ದ ಟೀಂ ಇಂಡಿಯಾದಲ್ಲೂ ಒತ್ತಡ ಹೆಚ್ಚಾಯಿತು. ವೇಡ್ ಹಾಗೂ ಡೇವಿಡ್ ಹೋರಾಟದಿಂದ ಆಸ್ಟ್ರೇಲಿಯಾ ಗೆಲುವಿಗೆ ಅಂತಿಮ 12 ಎಸೆತದಲ್ಲಿ 18 ರನ್ ಅವಶ್ಯಕತೆ ಇತ್ತು.

ಟೀಂ ಇಂಡಿಯಾ ನೂತನ ಜರ್ಸಿ ಅನಾವರಣ, ಮರುಕಳಿಸಿತು 2007ರ ಚಾಂಪಿಯನ್ ಕಲರ್!

ಪಂದ್ಯ ನಿಧಾನವಾಗಿ ಆಸ್ಟ್ರೇಲಿಯಾದತ್ತ ವಾಲಿತು. 19ನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ಸತತ ಮೂರು ಬೌಂಡರಿ ಸಿಡಿಸಿ ಗೆಲುವು ಖಚಿತಪಡಿಸಿದರು. ಅಂತಿಮ ಓವರ್‌ನಲ್ಲಿ ಕೇವಲ 2 ರನ್ ಅವಶ್ಯಕತೆ ಇತ್ತು. ಈ ವೇಳೆ ಟಿಮ್ ಡೇವಿಡ್ 18 ರನ್ ಸಿಡಿಸಿ ಔಟಾದರು. ಆದರೆ ಆಸ್ಟ್ರೇಲಿಯಾ ನಿರಾಯಾಸವಾಗಿ 4 ವಿಕೆಟ್ ಗೆಲುವು ಕಂಡಿತು. 

Follow Us:
Download App:
  • android
  • ios