ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭಆಸ್ಟ್ರೇಲಿಯಾ ಎದುರಿನ ನಾಗ್ಪುರ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ರೋಹಿತ್ ಶರ್ಮಾ ಪಡೆಯ ಹಾದಿ ಮತ್ತಷ್ಟು ಸುಗಮ
ನಾಗ್ಪುರ(ಫೆ.12): ನಿರೀಕ್ಷೆಯಂತೆಯೇ ಸ್ಪಿನ್ ಪರಾಕ್ರಮಕ್ಕೆ ಸಾಕ್ಷಿಯಾದ ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಕಠಿಣ ಅಭ್ಯಾಸದ ಹೊರತಾಗಿಯೂ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾರ ಸ್ಪಿನ್ ದಾಳಿ ಎದುರಿಸಲು ಪರದಾಡಿದ ಆಸೀಸ್ 2ನೇ ಇನ್ನಿಂಗ್್ಸನಲ್ಲಿ ಕೇವಲ 91 ರನ್‌ಗೆ ಗಂಟುಮೂಟೆ ಕಟ್ಟಿಇನ್ನಿಂಗ್‌್ಸ ಹಾಗೂ 132 ರನ್ಗಳ ಹೀನಾಯ ಸೋಲುಂಡಿದೆ. ಇದರೊಂದಿಗೆ ರೋಹಿತ್ ಬಳಗ 4 ಪಂದ್ಯಗಳ ಮಹತ್ವದ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಆಸ್ಪ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಇನ್ನಷ್ಟು ಹತ್ತಿರವಾಗಿದೆ. ಸದ್ಯ ಭಾರತ 61.67 ಗೆಲುವಿನ ಪ್ರತಿಶತದೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಆಸ್ಪ್ರೇಲಿಯಾ(ಶೇ.70.83) ಅಗ್ರಸ್ಥಾನದಲ್ಲಿದೆ.
ಉಳಿದ 3 ಪಂದ್ಯಗಳಲ್ಲಿ ಭಾರತ 2ರಲ್ಲಿ ಗೆದ್ದರೆ 2ನೇ ಸ್ಥಾನದಲ್ಲೇ ಉಳಿಯಲಿದೆ. ಒಂದು ವೇಳೆ ಭಾರತ 4-0ಯಲ್ಲಿ ಕ್ಲೀನ್ಸ್ವೀಪ್ ಮಾಡಿದರೆ ಭಾರತ ಅಗ್ರಸ್ಥಾನಕ್ಕೇರಲಿದ್ದು, ಆಗ 2ನೇ ಸ್ಥಾನಕ್ಕೆ ಆಸ್ಪ್ರೇಲಿಯಾ, ಶ್ರೀಲಂಕಾ ನಡುವೆ ಪೈಪೋಟಿ ಎದುರಾಗಲಿದೆ. ನ್ಯೂಜಿಲೆಂಡ್ ವಿರುದ್ಧ ಲಂಕಾ 2-0ಯಿಂದ ಗೆದ್ದರೆ ಆಗ ಆಸ್ಪ್ರೇಲಿಯಾವನ್ನು ಹಿಂದಿಕ್ಕಿ ಲಂಕಾ 2ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.
ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲೂ ಭಾರತ ಫೈನಲ್ ಪ್ರವೇಶಿಸಿತ್ತಾದರೂ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. 2021ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಹೀನಾಯ ಸೋಲು ಕಾಣುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮತ್ತೊಮ್ಮೆ ಟೆಸ್ಟ್ ವಿಶ್ವಕಪ್ ಫೈನಲ್ ಆಡಲು ಮತ್ತಷ್ಟು ಹತ್ತಿರವಾಗುತ್ತಿದೆ.
ಆಸ್ಟ್ರೇಲಿಯಾದಿಂದ ಒತ್ತಡ ತಡೆಯದೆ ಪಿಚ್ ಬಗ್ಗೆ ದೂರು: ರೋಹಿತ್
ಕೇವಲ ಒಂದೇ ಅವಧಿಯಲ್ಲಿ ಆಸೀಸ್ ಆಲೌಟ್ ಆಗುತ್ತೆ ಎಂದು ಊಹಿಸಿರಲಿಲ್ಲ. ಪಿಚ್ ನಿಧಾನವಾಗಿ ವರ್ತಿಸಲು ಶುರು ಮಾಡಿದರೂ ಆಸೀಸ್ ಪೈಪೋಟಿ ನೀಡುವ ನಿರೀಕ್ಷೆಯಿತ್ತು. ಆಸೀಸ್ ಆಟಗಾರರು ಒತ್ತಡ ತಡೆಯದೆ ಪಿಚ್ ಬಗ್ಗೆ ದೂರುತ್ತಿದ್ದಾರೆ. ಇದೇ ಪಿಚ್ನಲ್ಲಿ ನಾವು 3-4 ವರ್ಷಗಳಿಂದ ಆಡುತ್ತೇವೆ. ಹೀಗಾಗಿ ಪಿಚ್ ಬಗ್ಗೆ ಇನ್ನು ಏನೂ ಮಾತನಾಡುವುದಿಲ್ಲ. ಆಸ್ಪ್ರೇಲಿಯಾ ಬಲಿಷ್ಠ ತಂಡ. ಖಂಡಿತಾ ಕಮ್ಬ್ಯಾಕ್ ಮಾಡುತ್ತಾರೆ - ರೋಹಿತ್ ಶರ್ಮಾ, ಭಾರತದ ನಾಯಕ
IND vs AUS ಆಸ್ಟ್ರೇಲಿಯಾ ವಿರುದ್ಧ 1ನೇ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಶಾಕ್, ಜಡೇಜಾಗೆ ದಂಡ!
ರಾಹುಲ್ ಆಯ್ಕೆಯಲ್ಲಿ ಪಕ್ಷಪಾತ: ವೆಂಕಟೇಶ್
ಬೆಂಗಳೂರು: ಹಲವು ಅವಕಾಶಗಳು ಸಿಕ್ಕರೂ ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಕೆ.ಎಲ್.ರಾಹುಲ್ ಬಗ್ಗೆ ಭಾರತದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಕಿಡಿಕಾರಿದ್ದು, ರಾಹುಲ್‌ರನ್ನು ಪಕ್ಷಪಾತದಿಂದಾಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಪ್ರದರ್ಶನದ ಆಧಾರದಲ್ಲಿ ಆಯ್ಕೆ ಮಾಡಿಲ್ಲ ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಹುಲ್ ವಿಫಲತೆಯಲ್ಲೇ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಉತ್ತಮ ಪ್ರದರ್ಶನ ನೀಡದಿದ್ದರೂ ಸತತ 8 ವರ್ಷದಿಂದ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಶುಭ್ಮನ್ ಗಿಲ್, ಸರ್ಫರಾಜ್ ಖಾನ್ ಸೇರಿ ಹಲವರು ಅವಕಾಶ ವಂಚಿತರಾಗಿದ್ದಾರೆ. ರಾಹುಲ್‌ಗೆ ಉಪನಾಯಕ ಪಟ್ಟವೂ ಸೂಕ್ತವಲ್ಲ. ಅವರ ಬದಲು ಅಶ್ವಿನ್, ಪೂಜಾರ ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ ಎಂದು ಟೀಕಿಸಿದ್ದಾರೆ.
ಧರ್ಮಶಾಲಾದಲ್ಲಿ 3ನೇ ಟೆಸ್ಟ್ ಡೌಟ್!
3ನೇ ಟೆಸ್ಟ್ ಪಂದ್ಯ ಮಾರ್ಚ್ 1ರಿಂದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದರೂ ಪಂದ್ಯ ಅಲ್ಲಿಂದ ಬೇರೆಡೆಗೆ ಸ್ಥಳಂತರಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಧರ್ಮಶಾಲಾ ಮೈದಾನದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಫೆಬ್ರವರಿ 12ರಂದು ಬಿಸಿಸಿಐ ತಂಡ ಮೈದಾನಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದು, ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಒಂದು ವೇಳೆ ಧರ್ಮಶಾಲಾ ಕ್ರೀಡಾಂಗಣ ಆಡಲು ಫಿಟ್ ಎನಿಸದಿದ್ದರೆ ಪಂದ್ಯ ಮೊಹಾಲಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಕೂಡಾ ಆತಿಥ್ಯ ರೇಸ್ನಲ್ಲಿದೆ. 2ನೇ ಮತ್ತು 4ನೇ ಪಂದ್ಯ ಕ್ರಮವಾಗಿ ಡೆಲ್ಲಿ, ಅಹಮದಾಬಾದ್ನಲ್ಲಿ ನಡೆಯಬೇಕಿದೆ.
