ಮಳೆಯಿಂದ ಪಂದ್ಯ ಮತ್ತೆ ತಾತ್ಕಾಲಿಕ ಸ್ಥಗಿತ, DLS ಅನ್ವಯಿಸಿದರೆ ಆಸೀಸ್ ಟಾರ್ಗೆಟ್ ಎಷ್ಟು?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಚೇಸಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು 52 ರನ್ ಸಿಡಿಸಿದ ವೇಳೆ ಮಳೆ ವಕ್ಕರಿಸಿದೆ. ಮಳೆಯಿಂದ ಓವರ್ ಕಡಿತಗೊಂಡರೆ ಡಿಎಲ್‌ಎಸ್ ಪ್ರಕಾರ ಆಸ್ಟ್ರೇಲಿಯಾಗೆ ನೀಡುವ ಟಾರ್ಗೆಟ್ ಎಷ್ಟು?
ಇಂದೋರ್(ಸೆ.24) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯ ಮತ್ತೆ ಸ್ಥಗಿತಗೊಂಡಿದೆ. ಭಾರತ ನೀಡಿರುವ 400 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಆಸ್ಟ್ರೇಲಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಮಳೆ ವಕ್ಕರಿಸಿ ಪಂದ್ಯವನ್ನೇ ಸ್ಥಗಿತಗೊಳಿಸಿದೆ. ನಿರಂತರ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ಸದ್ಯ ಮಳೆ ನಿಂತಿದ್ದು ಪಂದ್ಯ ಪುನರ್ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ 9 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು 52 ರನ್ ಸಿಡಿಸಿದೆ.
ಭಾರತ ಬ್ಯಾಟಿಂಗ್ ವೇಳೆ ಮಳೆ ವಕ್ಕರಿಸಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಇದೀಗ 2ನೇ ಬಾರಿಗೆ ಪಂದ್ಯ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಹೆಚ್ಚು ಹೊತ್ತು ಪಂದ್ಯ ಸ್ಥಗಿತಗೊಂಡರೆ ಸಮಯದ ಕಾರಣದಿಂದ ಓವರ್ ಕಡಿತಗೊಳ್ಳಲಿದೆ. ಡಕ್ ವರ್ತ್ ಲೂಯಿಸಿ ನಿಯಮ ಅನ್ವಯಿಸಿದರೆ ಆಸ್ಟ್ರೇಲಿಯಾಗೆ ನೀಡುವ ಟಾರ್ಗೆಟ್ ಕುರಿತು ಮಾಹಿತಿ ಇಲ್ಲಿದೆ.
ಗಿಲ್-ಅಯ್ಯರ್ ತಲಾ ನೂರು, ಆಸೀಸ್‌ಗೆ ಪಂದ್ಯ ಗೆಲ್ಲಲು ಗುರಿ ನಾನೂರು..!
ಡಕ್ ವರ್ತ್ ನಿಯಮ ಅನ್ವಯಿಸಿದರೆ ಆಸ್ಟ್ರೇಲಿಯಾ ಟಾರ್ಗೆಟ್ ವಿವರ
40 ಓವರ್‌ಗೆ 354 ರನ್ ಟಾರ್ಗೆಟ್
35 ಓವರ್‌ಗೆ 328 ರನ್ ಟಾರ್ಗೆಟ್
20 ಓವರ್‌ಗೆ 230 ರನ್ ಟಾರ್ಗೆಟ್
ಮಳೆ ಕಾರಣದಿಂದ 10 ಓವರ್ ಕಡಿತಗೊಂಡರೆ ಆಸ್ಟ್ರೇಲಿಯಾ 40 ಓವರ್‌ಗಳಲ್ಲಿ 354 ರನ್ ಟಾರ್ಗೆಟ್ ಚೇಸ್ ಮಾಡಬೇಕಿದೆ. ಇನ್ನು ಹೆಚ್ಚು ಹೊತ್ತು ಮಳೆ ಅಡ್ಡಿಯಾದರೆ ಪಂದ್ಯವನ್ನು 35 ಓವರ್‌ಗೆ ಸೀಮಿತಗೊಳ್ಳಲಿದೆ. ಹೀಗಾದಲ್ಲಿ ಆಸ್ಟ್ರೇಲಿಯಾಗೆ 328 ರನ್ ಟಾರ್ಗೆಟ್ ನೀಡಲಾಗುತ್ತದೆ. ಇನ್ನು ಪಂದ್ಯವನ್ನು 20 ಓವರ್‌ಗೆ ಸೀಮಿತಗೊಳಿಸಿದರೆ ಆಸ್ಟ್ರೇಲಿಯಾ 230 ರನ್ ಟಾರ್ಗೆಟ್ ಚೇಸಮಾಡಬೇಕು.
400 ರನ್ ಟಾರ್ಗೆಟ್ ಪಡೆದಿರುವ ಆಸ್ಟ್ರೇಲಿಯಾ ಮ್ಯಾಥ್ಯೂ ಶಾರ್ಟ್ ಹಾಗೂ ನಾಯಕ ಸ್ಟೀವ್ ಸ್ಮಿತ್ ವಿಕೆಟ್ ಕಳೆದುಕೊಂಡಿದೆ. ಡೇವಿಡ್ ವಾರ್ನರ್ ಅಜೇಯ 26 ಹಾಗೂ ಮಾರ್ನಸ್ ಲಬುಶೆನ್ ಅಜೇಯ 17 ರನ್ ಸಿಡಿಸಿ ಕ್ರಿಸ್ ಕಾಯ್ದುಕೊಂಡಿದ್ದಾರೆ.
ಕಾಂಗರೂಗಳ ಮೇಲೆ ಗಿಲ್-ಅಯ್ಯರ್ ಸವಾರಿ, ಭರ್ಜರಿ ಶತಕ ಚಚ್ಚಿದ ಕಿಲಾಡಿ ಜೋಡಿ..!
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 399 ರನ್ ಸಿಡಿಸಿದೆ. ಶುಭಮನ್ ಗಿಲ್ 104 ರನ್, ಶ್ರೇಯಸ್ ಅಯ್ಯರ್ 105 ರನ್, ನಾಯಕ ಕೆಎಲ ರಾಹುಲ್ 52, ಇಶಾನ್ ಕಿಶನ್ 31, ಸೂರ್ಯಕುಮಾರ್ ಯಾದವ್ 72 ಹಾಗೂ ರವೀಂದ್ರ ಜಡೇಜಾ 13 ರನ್ ಸಿಡಿಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ 399 ರನ್ ಸಿಡಿಸಿದೆ.