ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೂರನೇ ಟೆಸ್ಟ್ ಇಂದೋರ್ ಶಿಫ್ಟ್ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೂರನೇ ಪಂದ್ಯಮೂರನೇ ಟೆಸ್ಟ್‌ ಪಂದ್ಯವು ಮಾರ್ಚ್‌ 01ರಿಂದ 5ರ ವರೆಗೆ ನಡೆಯಲಿದೆ

ನವದೆಹಲಿ(ಫೆ.14): ಮಾರ್ಚ್‌ 1ರಿಂದ 5ರ ವರೆಗೂ ನಡೆಯಲಿರುವ ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ 3ನೇ ಟೆಸ್ಟ್‌ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಗೊಂಡಿದೆ. ಧರ್ಮಶಾಲಾ ಕ್ರೀಡಾಂಗಣ ಇತ್ತೀಚೆಗೆ ನವೀಕರಣಗೊಂಡಿದ್ದು, ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯಕ್ಕೆ ಇನ್ನೂ ಯೋಗ್ಯವಲ್ಲದ ಕಾರಣ ಸ್ಥಳಾಂತರಗೊಳಿಸಲಾಗಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಇಂದೋರ್‌ನ ಹೋಲ್ಕರ್‌ ಕ್ರೀಡಾಂಗಣ ಈವರೆಗೂ 2 ಟೆಸ್ಟ್‌ಗಳಿಗೆ ಆತಿಥ್ಯ ವಹಿಸಿದ್ದು, ಎರಡರಲ್ಲೂ ಭಾರತ ದೊಡ್ಡ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್‌ ವಿರುದ್ಧ 2016ರಲ್ಲಿ ನಡೆದಿದ್ದ ಪಂದ್ಯವನ್ನು 321 ರನ್‌ಗಳಿಂದ ಗೆದ್ದಿದ್ದ ಭಾರತ, 2019ರಲ್ಲಿ ಬಾಂಗ್ಲಾ ವಿರುದ್ಧ ಇನ್ನಿಂಗ್‌್ಸ ಹಾಗೂ 130 ರನ್‌ಗಳ ಜಯ ದಾಖಲಿಸಿತ್ತು. ಈ ಮೈದಾನದಲ್ಲಿ ರವಿಚಂದ್ರನ್ ಅಶ್ವಿನ್‌ 2 ಟೆಸ್ಟ್‌ನಲ್ಲಿ ಬರೋಬ್ಬರಿ 18 ವಿಕೆಟ್‌ ಕಬಳಿಸಿದ್ದಾರೆ.

Scroll to load tweet…

ಅಶ್ವಿನ್‌ ಭೀತಿಯಲ್ಲಿ ಆಸೀಸ್‌: ನಾಗ್ಪುರ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ರವಿಚಂದ್ರನ್‌ ಮಾರಕ ದಾಳಿಗೆ ತತ್ತರಿಸಿ ಹೋಗಿತ್ತು. ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿದ್ದ ಅಶ್ವಿನ್‌, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 37 ರನ್‌ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು 91 ರನ್‌ಗಳಿಗೆ ಆಲೌಟ್‌ ಮಾಡುವಲ್ಲಿ ಯಶಸ್ವಿಯಾದರು. ಉಸ್ಮಾನ್‌ ಖವಾ​ಜ​ರನ್ನು ಅಶ್ವಿನ್‌ 5ಕ್ಕೆ ಔಟ್‌ ಮಾಡಿದರೆ, ಬಳಿಕ ಡೇವಿಡ್‌ ವಾರ್ನ​ರ್‌​(10), ರೆನ್ಶಾ​(02), ಪೀಟ​ರ್‌ ಹ್ಯಾಂಡ್‌್ಸ​ಕಂಬ್‌​(06), ಅಲೆಕ್ಸ್‌ ಕೇರಿ​(10) ಅಶ್ವಿ​ನ್‌ ಬೌಲಿಂಗ್‌ಗೆ ವಿಕೆಟ್‌ ಒಪ್ಪಿ​ಸಿ​ದರು. ಈ ನಾಲ್ವರೂ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದೀಗ ಡೆಲ್ಲಿ ಟೆಸ್ಟ್‌ ಪಂದ್ಯದಲ್ಲೂ ಕಾಂಗರೂ ಪಡೆ ಅಶ್ವಿನ್ ಭೀತಿಯಲ್ಲಿಯೇ ಕಣಕ್ಕಿಳಿಯುವ ಸಾಧ್ಯತೆಯಿದೆ

ಆಸೀಸ್‌ ಏಕ​ದಿನ ಸರ​ಣಿ​ಗೂ ವೇಗಿ ಬುಮ್ರಾ ಅಲ​ಭ್ಯ?

ನವ​ದೆ​ಹ​ಲಿ: ಭಾರತದ ಪ್ರಮುಖ ವೇಗಿ ಜಸ್‌​ಪ್ರೀತ್‌ ಬುಮ್ರಾ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿ ಮಾತ್ರ​ವ​ಲ್ಲದೇ ಏಕದಿನ ಸರ​ಣಿ​ಯಲ್ಲೂ ಆಡುವ ಸಾಧ್ಯ​ತೆ​ಗ​ಳಿಲ್ಲ ಎಂದು ಮಾಧ್ಯಮಗಳಲ್ಲಿ ವರ​ದಿ​ಯಾ​ಗಿದೆ. ಅವರು ಐಪಿ​ಎಲ್‌ ಮೂಲಕ ಸ್ಪರ್ಧಾ​ತ್ಮಕ ಕ್ರಿಕೆ​ಟ್‌ಗೆ ಮರ​ಳುವ ನಿರೀ​ಕ್ಷೆ​ಯಿ​ದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ, ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಏಕದಿನ ವಿಶ್ವಕಪ್‌ ಇದೇ ವರ್ಷ ನಡೆಯಲಿರುವ ಕಾರಣ, ಅವರನ್ನು ಆತುರದಲ್ಲಿ ತಂಡಕ್ಕೆ ಸೇರಿಸಿಕೊಳ್ಳದಿರಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. 

WPL Auction ಆರ್‌ಸಿಬಿ ಪವರ್‌-ಪ್ಲೇ ಹರಾಜು ಸೂಪರ್..! 5 ಆಟಗಾರ್ತಿಯರಿಗೆ 9 ಕೋಟಿ ರುಪಾಯಿ ಖರ್ಚು

ಇದೇ ವೇಳೆ ಬೆನ್ನು ನೋವಿ​ನಿಂದಾಗಿ ಆಸ್ಪ್ರೇ​ಲಿಯಾ ವಿರು​ದ್ಧದ ಆರಂಭಿಕ ಟೆಸ್ಟ್‌ಗೆ ಅಲ​ಭ್ಯರಾ​ಗಿದ್ದ ಶ್ರೇಯಸ್‌ ಅಯ್ಯ​ರ್‌ 2ನೇ ಟೆಸ್ಟ್‌ಗೂ ಗೈರಾ​ಗುವ ಸಾಧ್ಯತೆ ಇದೆ. ಸದ್ಯ ಅವರು ಬೆಂಗ​ಳೂ​ರಿ​ನಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾ​ಡೆ​ಮಿ​(​ಎ​ನ್‌​ಸಿ​ಎ​)​ಯಲ್ಲಿ ಪುನ​ಶ್ಚೇ​ತನ ಶಿಬಿ​ರ​ದ​ಲ್ಲಿದ್ದಾರೆ.

ಶು​ಭ್‌​ಮನ್‌ ಗಿಲ್‌ ಐಸಿ​ಸಿ ಜನ​ವರಿ ತಿಂಗಳ ಆಟ​ಗಾ​ರ

ನವ​ದೆ​ಹ​ಲಿ: ಅಭೂ​ತ​ಪೂರ್ವ ಲಯ​ದ​ಲ್ಲಿ​ರುವ ಭಾರ​ತದ ತಾರಾ ಬ್ಯಾಟರ್‌ ಶುಭ್‌​ಮನ್‌ ಗಿಲ್‌ ಐಸಿಸಿ ಜನ​ವರಿ ತಿಂಗಳ ಆಟ​ಗಾರ ಪ್ರಶ​ಸ್ತಿಗೆ ಭಾಜ​ನ​ರಾ​ಗಿ​ದ್ದಾರೆ. ಇತ್ತೀ​ಷೆ​ಗಷ್ಟೇ ನ್ಯೂಜಿ​ಲೆಂಡ್‌ ವಿರು​ದ್ಧದ ಏಕ​ದಿನ ಸರ​ಣಿ​ಯಲ್ಲಿ ಭರ್ಜರಿ ದ್ವಿಶ​ತಕ ಹಾಗೂ ಶತಕ ಬಾರಿ​ಸಿದ್ದ ಗಿಲ್‌, ಏಕ​ದಿನ ಕ್ರಿಕೆಟ್‌ ನಂ.1 ಬೌಲರ್‌ ಮೊಹ​ಮದ್‌ ಸಿರಾಜ್‌ ಹಾಗೂ ನ್ಯೂಜಿ​ಲೆಂಡ್‌ ಬ್ಯಾಟರ್‌ ಡೆವೋನ್‌ ಕಾನ್‌ವೇ ಅವ​ರನ್ನು ಹಿಂದಿಕ್ಕಿ ಈ ಗೌರ​ವಕ್ಕೆ ಪಾತ್ರ​ರಾ​ಗಿ​ದ್ದಾ​ರೆ. ಮಹಿ​ಳೆ​ಯರ ವಿಭಾ​ಗ​ದಲ್ಲಿ ಇಂಗ್ಲೆಂಡ್‌ನ ಗ್ರೇಸ್‌ ಸ್ಕ್ರೀವನ್ಸ್‌ ಪ್ರಶಸ್ತಿ ಪಡೆ​ದಿ​ದ್ದಾ​ರೆ.