Asianet Suvarna News Asianet Suvarna News

ಇಂದು ಇಂಡೋ-ಆಸೀಸ್ ನಿರ್ಣಾಯಕ ಏಕದಿನ ಪಂದ್ಯ: ನಂ.1 ಪಟ್ಟ ಉಳಿಸಿಕೊಳ್ಳುತ್ತಾ ಭಾರತ?

ಇಂದು ಚೆನ್ನೈನಲ್ಲಿ ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯ
ತವರಿನಲ್ಲಿ ಸತತ 8ನೇ ಏಕದಿನ ಸರಣಿ ಗೆಲ್ಲುವ ವಿಶ್ವಾಸದಲ್ಲಿ ಟೀಂ ಇಂಡಿಯಾ
ಈಗಾಗಲೇ ಒಂದೊಂದು ಪಂದ್ಯ ಜಯಿಸಿರುವ ಉಭಯ ತಂಡಗಳು

Ind vs Aus 3rd ODI Rohit Sharma led Team India take on Australia in Decider Clash at Chennai kvn
Author
First Published Mar 22, 2023, 11:25 AM IST

ಚೆನ್ನೈ(ಮಾ.22): ಎರಡೂ ವಿಶ್ವದ ಶ್ರೇಷ್ಠ ತಂಡಗಳೇ. ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿವೆ. ಆದರೂ ಮೊದಲೆರಡು ಪಂದ್ಯಗಳಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. ಭಾರತದಲ್ಲಿ ಸತತ ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 200 ರನ್‌ ದಾಟದೆ ಇರುವುದು ತೀರಾ ಅಪರೂಪ.

ಬುಧವಾರ ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಲು ತಂಡಗಳು ಎದುರು ನೋಡುತ್ತಿವೆಯಾದರೂ, ಸರಣಿ ಗೆಲ್ಲುವುದು ಎರಡೂ ತಂಡಗಳ ಮುಂದಿರುವ ಬಹು ಮುಖ್ಯ ಗುರಿ. ಚೆಪಾಕ್‌ ಕ್ರೀಡಾಂಗಣ ದೊಡ್ಡ ಮೊತ್ತಕ್ಕೆ ಹೆಸರುವಾಸಿಯಲ್ಲ. ಅಲ್ಲದೇ ಇಲ್ಲಿ 2019ರ ಬಳಿಕ ಮೊದಲ ಬಾರಿಗೆ ಏಕದಿನ ಪಂದ್ಯ ನಡೆಯಲಿದೆ. ಈ ಅಂಶಗಳು ಪಂದ್ಯವನ್ನು ಮತ್ತಷ್ಟುರೋಚಕಗೊಳಿಸಲಿದೆ. ಜೊತೆಗೆ ಈ ಪಂದ್ಯದ ಫಲಿತಾಂಶ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಿಯನ್ನು ನಿರ್ಧರಿಸಲಿದೆ.

ಭಾರತ ತಂಡ ಆಗಸ್ಟ್‌ನಲ್ಲಿ ವಿಂಡೀಸ್‌ ಪ್ರವಾಸಕ್ಕೆ ತೆರಳುವವರೆಗೂ ಇನ್ನು ಏಕದಿನ ಪಂದ್ಯವನ್ನಾಡುವುದಿಲ್ಲ. ಅಲ್ಲದೇ ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಹೆಚ್ಚೆಂದರೆ ಇನ್ನು 3 ಪಂದ್ಯಗಳನ್ನಾಡಬಹುದು. ಹೀಗಾಗಿ ತಂಡ ಸಂಯೋಜನೆಯಲ್ಲಿ ಸಮತೋಲನ ಕಂಡುಕೊಳ್ಳಲು ಸಿಗುವ ಸೀಮಿತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ.

IPL 2023: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಬಲಿಷ್ಠ ಆಡುವ ಹನ್ನೊಂದರ ಬಳಗ ಆಯ್ಕೆ ಮಾಡಿದ ಆರ್ ಅಶ್ವಿನ್..!

ತಂಡದ ಬ್ಯಾಟಿಂಗ್‌ ಪಡೆ ದಯನೀಯ ವೈಫಲ್ಯ ಕಾಣುತ್ತಿದ್ದು, ಕೆಲ ಬದಲಾವಣೆಗಳ ಅಗತ್ಯವಿದೆ ಎನ್ನುವುದು ಸ್ಪಷ್ಟವಾಗಿದೆ. ಎಡಗೈ ವೇಗಿಗಳು ಭಾರತದ ಅಗ್ರ ಕ್ರಮಾಂಕದ ವಿರುದ್ಧ ಸತತವಾಗಿ ಯಶಸ್ಸು ಕಾಣುತ್ತಿದ್ದು, ವಿಶ್ವಕಪ್‌ಗೂ ಮುನ್ನ ಈ ಸಮಸ್ಯೆಗೆ ಪರಿಹಾರ ಹುಡುಕಬೇಕಾದ ಒತ್ತಡ ನಾಯಕ ರೋಹಿತ್‌ ಶರ್ಮಾ, ಕೋಚ್‌ ರಾಹುಲ್ ದ್ರಾವಿಡ್‌ ಮೇಲಿದೆ. ಇದೆಲ್ಲದರ ಜೊತೆ ಮೊದಲೆರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟ್‌ ಆಗಿದ್ದ ಸೂರ್ಯಕುಮಾರ್‌ ಯಾದವ್‌ ಈ ಪಂದ್ಯದಲ್ಲಾದರೂ ಖಾತೆ ತೆರೆಯುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಈ ಪಂದ್ಯದಲ್ಲೂ ಭಾರತ ಮೂವರು ಸ್ಪಿನ್ನರ್‌ಗಳೊಂದಿಗೆ ಆಡುವ ಸಾಧ್ಯತೆಯೇ ಹೆಚ್ಚು. ತಂಡದಲ್ಲಿ ಬದಲಾವಣೆ ಆಗುವ ನಿರೀಕ್ಷೆಯೂ ಇಲ್ಲ.

ಮತ್ತೊಂದೆಡೆ ಆಸ್ಪ್ರೇಲಿಯಾ ಸಹ ಐಸಿಸಿ ಏಕದಿನ ವಿಶ್ವಕಪ್‌ಗೂ ಮೊದಲು ಭಾರತದಲ್ಲಿ ಕೊನೆ ಪಂದ್ಯವಾಡಲಿದ್ದು, ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವರೆಗೂ ತಂಡ ಏಕದಿನ ಪಂದ್ಯವನ್ನಾಡುವುದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ತನ್ನ ಮಧ್ಯಮ ಕ್ರಮಾಂಕ ಪರೀಕ್ಷೆಗೆ ಒಳಪಟ್ಟರೆ ಉತ್ತಮ ಎನ್ನುವ ಆಲೋಚನೆ ತಂಡದಲ್ಲಿರಬಹುದು. ಡೇವಿಡ್ ವಾರ್ನರ್‌ ಫಿಟ್‌ ಆಗಿದ್ದು ಆಯ್ಕೆಗೆ ಲಭ್ಯವಿದ್ದರೆ ಮಾರ್ನಸ್ ಲಬುಶೇನ್‌ಗೆ ವಿಶ್ರಾಂತಿ ನೀಡಿ, ಮಿಚೆಲ್‌ ಮಾರ್ಷ್‌ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬಹುದು. ಹೆಚ್ಚುವರಿ ಸ್ಪಿನ್ನರ್‌ ರೂಪದಲ್ಲಿ ಆಸ್ಟನ್‌ ಏಗಾರ್‌ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ ಎಲ್ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಮೊಹಮದ್‌ ಶಮಿ, ಮೊಹಮ್ಮದ್ ಸಿರಾಜ್‌.

ಆಸ್ಪ್ರೇಲಿಯಾ: ಡೇವಿಡ್ ವಾರ್ನರ್‌, ಟ್ರಾವಿಸ್ ಹೆಡ್‌, ಸ್ಟೀವ್ ಸ್ಮಿತ್‌(ನಾಯಕ), ಮಿಚೆಲ್ ಮಾರ್ಶ್, ಅಲೆಕ್ಸ್‌ ಕೇರಿ, ಕ್ಯಾಮರೋನ್ ಗ್ರೀನ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋಯ್ನಿಸ್‌, ಆಸ್ಟನ್ ಏಗಾರ್‌, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಚ್‌

ಚೆಪಾಕ್‌ನ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಲಿದ್ದು, ಇಲ್ಲಿ ದೊಡ್ಡ ಮೊತ್ತ ನಿರೀಕ್ಷಿಸುವುದು ಕಷ್ಟ. ಇಲ್ಲಿ 22 ಏಕದಿನ ಪಂದ್ಯಗಳಲ್ಲಿ 13ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ. ಆದರೆ ಸಂಜೆ ಮೇಲೆ ಇಬ್ಬನಿ ಬೀಳುವ ಕಾರಣ, ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಬಹುದು.

Follow Us:
Download App:
  • android
  • ios