ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ಫೆಬ್ರವರಿ 17ರಿಂದ ಆರಂಭಗೊಳ್ಳುತ್ತಿದೆ. ಆದರೆ ಸಾಮಾನ್ಯವಾಗಿ ದೆಹಲಿಯಲ್ಲಿ ಟೀಂ ಇಂಡಿಯಾ ಉಳಿದುಕೊಳ್ಳುತ್ತಿದ್ದ ಹೊಟೆಲ್ ಬದಲಾಗಿದೆ. ಇಷ್ಟೇ ಅಲ್ಲ ಟೀಂ ಇಂಡಿಯಾ ಜೊತೆ ವಿರಾಟ್ ಕೊಹ್ಲಿ ಉಳಿಯುತ್ತಿಲ್ಲ.

ನವದೆಹಲಿ(ಫೆ.16): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಇದೀಗ ಎರಡನೇ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ 2ನೇ ಟೆಸ್ಟ್ ಪಂದ್ಯ ನಡೆಯಲಿದೆ. ದೆಹಲಿಗೆ ಆಗಮಿಸಿದ ಟೀಂ ಇಂಡಿಯಾ ಸಾಮಾನ್ಯವಾಗಿ ಉಳಿದುಕೊಳ್ಳುವ ಹೊಟೆಲ್ ಈ ಬಾರಿ ಬದಲಾಗಿದೆ. ಜಿ20 ಅಧ್ಯಕ್ಷತೆ ವಹಿಸಿರುವ ಕಾರಣ ದೆಹಲಿಯ 5 ಸ್ಟಾರ್ ಹೊಟೆಲ್‌ಗಳು ವಿದೇಶಿ ಅತಿಥಿಗಳು, ಅಧಿಕಾರಿಗಳಿಗಾಗಿ ಬುಕ್ ಮಾಡಲಾಗಿದೆ. ಇತ್ತ ಹಲವು ಸೆಲೆಬ್ರೆಟಿಗಳು, ಉದ್ಯಮಿಗಳ ಮದುವೆ ಕಾರ್ಯಕ್ರಮವೂ ಆಯೋಜನೆಗೊಂಡಿದೆ. ಹೀಗಾಗಿ ಟೀಂ ಇಂಡಿಯಾ ಖಾಯಂ ಹೊಟೆಲ್ ಸಿಕ್ಕಿಲ್ಲ. ಸಾಮಾನ್ಯವಾಗಿ ಟೀಂ ಇಂಡಿಯಾ ಕ್ರಿಕೆಟಿಗರು ದೆಹಲಿಯಲ್ಲಿ ತಾಜ್ ಪ್ಯಾಲೆಸ್ ಅಥವಾ ಐಟಿಸಿ ಮೌರ್ಯ ಹೊಟೆಲ್‌ನಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಈ ಬಾರಿ ಕರ್ಕಾರದುಮಾ ಬಳಿ ಇರುವ ಹೊಟೆಲ್ ಲೀಲಾದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.ಆದರೆ ತಂಡದ ಜೊತೆ ವಿರಾಟ್ ಕೊಹ್ಲಿ ಉಳಿದುಕೊಳ್ಳುತ್ತಿಲ್ಲ.

ಫೆಬ್ರವರಿ 17 ರಿಂದ ಆರಂಭಗೊಳ್ಳುತ್ತಿರುವ 2ನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಇದೀಗ ಹೊಟೆಲ್ ಲೀಲಾದಲ್ಲಿ ಉಳಿದುಕೊಂಡಿದೆ. ಆದರೆ ವಿರಾಟ್ ಕೊಹ್ಲಿ ತಂಡದ ಜೊತೆಗೆ ಉಳಿದಿಲ್ಲ. ಕೊಹ್ಲಿ ಗುರುಗ್ರಾಂನಲ್ಲಿರುವ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕುಟುಂಬದ ಜೊತೆ ಕೆಲ ಹೊತ್ತು ಕಳೆಯಲು ನಿರ್ಧರಿಸಿದ ವಿರಾಟ್ ಕೊಹ್ಲಿ, ನಿವಾಸದಿಂದ ಪ್ರತಿ ದಿನ ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಾರೆ.

ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಅಭಿಮಾನಿಗಳ ನಡುವೆ ಮಾರಾಮಾರಿ, ಕಾರು ಪುಡಿ ಪುಡಿ!

ವಿರಾಟ್ ಕೊಹ್ಲಿ ತಮ್ಮ ಐಷಾರಾಮಿ ಹಾಗೂ ದುಬಾರಿ ಕಾರಿನಲ್ಲಿ ಅಭ್ಯಾಸಕ್ಕಾಗಿ ಆಗಮಿಸಿ ಬಳಿಕ ಮನೆಗೆ ತೆರಳುತ್ತಿರುವ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಹ್ಲಿ ಜೊತೆ ಕೆಲ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

ಭಾರತ ತಂಡ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಭರ್ಜರಿ ನೆಟ್ಸ್‌ ಅಭ್ಯಾಸ ನಡೆಸಿದೆ. ತಂಡದ ಇತರ ಸದಸ್ಯರಿಗಿಂತ ಅರ್ಧಗಂಟೆ ಮೊದಲೇ ಕ್ರೀಡಾಂಗಣಕ್ಕೆ ಆಗಮಿಸಿದ ವಿರಾಟ್‌ ಕೊಹ್ಲಿ ನೆಟ್ಸ್‌ನಲ್ಲಿ ಸ್ಪಿನ್ನರ್‌ಗಳನ್ನು ಹೆಚ್ಚಾಗಿ ಎದುರಿಸಿದರು. ಆರಂಭದಲ್ಲಿ ಡೆಲ್ಲಿ ತಂಡದ ಸ್ಪಿನ್ನರ್‌ ಹೃತಿಕ್‌ ಶೋಕೀನ್‌ರ ಬೌಲಿಂಗ್‌ ಎದುರಿಸಿದ ಕೊಹ್ಲಿಗೆ ಬಳಿಕ ಟೀಂ ಇಂಡಿಯಾದ ನೆಟ್‌ ಬೌಲರ್‌ಗಳಾಗಿರುವ ಸ್ಪಿನ್ನರ್‌ಗಳಾದ ಸೌರಭ್‌ ಕುಮಾರ್‌, ಪುಲ್ಕಿತ್‌ ನಾರಂಗ್‌ ಬೌಲ್‌ ಮಾಡಿದರು. ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ, ಯುವ ಸ್ಪಿನ್ನರ್‌ ಟಾಡ್‌ ಮರ್ಫಿಗೆ ಔಟಾಗಿದ್ದರು.

ICC Test Rankings: ಕೆಲ ಹೊತ್ತು ಟೆಸ್ಟಲ್ಲಿ ನಂ.1 ಆಗಿದ್ದ ಭಾರತ! ಮತ್ತೆ ಎರಡನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ಮೊದಲ ಟೆಸ್ಟ್ ಮೂರೇ ದಿನಕ್ಕೆ ಮುಕ್ತಾಯ
 ಸ್ಪಿನ್‌ ಪರಾ​ಕ್ರ​ಮಕ್ಕೆ ಸಾಕ್ಷಿ​ಯಾದ ಭಾರತ ಹಾಗೂ ಆಸ್ಪ್ರೇ​ಲಿಯಾ ನಡು​ವಿನ ಮೊದಲ ಟೆಸ್ಟ್‌ ಪಂದ್ಯ ಮೂರೇ ದಿನಕ್ಕೆ ಮುಕ್ತಾ​ಯ​ಗೊಂಡಿತ್ತು. ಕಠಿಣ ಅಭ್ಯಾ​ಸದ ಹೊರತಾ​ಗಿ​ಯೂ ಆರ್‌.​ಅ​ಶ್ವಿನ್‌ ಹಾಗೂ ರವೀಂದ್ರ ಜಡೇಜಾರ ಸ್ಪಿನ್‌ ದಾಳಿ ಎದು​ರಿ​ಸಲು ಪರ​ದಾ​ಡಿದ ಆಸೀಸ್‌ 2ನೇ ಇನ್ನಿಂಗ್‌್ಸ​ನಲ್ಲಿ ಕೇವಲ 91 ರನ್‌ಗೆ ಗಂಟು​ಮೂಟೆ ಕಟ್ಟಿಇನ್ನಿಂಗ್‌್ಸ ಹಾಗೂ 132 ರನ್‌​ಗಳ ಹೀನಾಯ ಸೋಲುಂಡಿದೆ. ಇದ​ರೊಂದಿಗೆ ರೋಹಿತ್‌ ಬಳಗ 4 ಪಂದ್ಯ​ಗಳ ಮಹ​ತ್ವದ ಸರ​ಣಿ​ಯಲ್ಲಿ 1-0 ಮುನ್ನಡೆ ಪಡೆ​ದಿದೆ.